Saturday, June 20, 2015

Daily Crimes Reported as On 20/06/2015 at 17:00 Hrs


ಮನುಷ್ಯ ಕಾಣೆ ಪ್ರಕರಣ:

  • ಶಂಕರನಾರಾಯಣ: ಗಣೇಶ ದೇವಾಡಿಗ (32) ಇವರು ದಿನಾಂಕ: 19/06/2015 ರಂದು ಬೆಳಿಗ್ಗೆ 9.30 ಗಂಟೆಗೆ ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಎಂಬಲ್ಲಿ ಮನೆಯಿಂದ ಕಾರೆಬೈಲಿನಲ್ಲಿ ಹಾಳಾದ ರಿಕ್ಷಾವನ್ನು ರಿಪೇರಿ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ರಿಕ್ಷಾ ರಿಪೇರಿ ಮಾಡಸಲು ಹೋಗದೆ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2015 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 19/06/2015 ರಂದು 13:00 ಗಂಟೆಗೆ ಉಡುಪಿ ತಾಲೂಕು, ಹಂದಾಡಿ ಗ್ರಾಮದ, ಕೃಷ್ಣ ಜನರಲ್ ಸ್ಟೋರ್ ಎದುರು ಆರೋಪಿ ಸುಭಾಸ್ ಕುಲಾಲ್ ತನ್ನ ಬಾಬ್ತು ಬಸ್ಸ್ ನಂಬ್ರ ಕೆಎ-20-ಬಿ-700 ನ್ನು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮನೋಜ್ ಕುಮಾರ್ ಎಂಬವರು ಬ್ರಹ್ಮಾವರ ಕಡೆಯಿಂದ ಬಾರ್ಕೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ-20-ಎಕ್ಸ್-7551 ನೇ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಮನೋಜ್ ಕುಮಾರ್ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕಾಲು ತೊಡೆಗೆ ಮತ್ತು ಕೋಲು ಕಾಲಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಬಲ ಭುಜಕ್ಕೆ ಕೂಡ ಪೆಟ್ಟಾಗಿರುವುದಾಗಿದೆ.   ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 121/2015 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     
  • ಬ್ರಹ್ಮಾವರ:ದಿನಾಂಕ: 18/06/2015 ರಂದು 11:15 ಗಂಟೆಗೆ ಉಡುಪಿ ತಾಲೂಕು, ಹೊಸಾಳ ಗ್ರಾಮದ, ಶಿವರಾಯನಕಟ್ಟೆ ಬಸ್ಸ್ ನಿಲ್ದಾಣದ ಹತ್ತಿರ ಆರೋಪಿ ರಮೇಶ ತನ್ನ ಮೋಟಾರ್ ಸೈಕಲ್  ನಂಬ್ರ ಕೆಎ 20 ಇಸಿ 9774 ನೇದನ್ನು ಬಾರ್ಕೂರು ಕಡೆಯಿಂದ ಯಡ್ತಾಡಿ ಕಡೆಗೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಕ್ಕೆ ಬಂದು ರಸ್ತೆ ದಾಟಲು ನಿಂತಿದ್ದ ಚಂದು ಪೂಜಾರಿಯವರಿಗೆ ಡಿಕ್ಕಿ ಹೊಡೆದ  ಪರಿಣಾಮ, ಚಂದು ಪೂಜಾರಿರವರು ರಸ್ತೆಗೆ ಬಿದ್ದು ಅವರ ಬಲ ಕಣ್ಣು, ಬಲ ತಲೆಗೆ  ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 122/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.               
ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಹೆರಿಯ ಪೂಜಾರಿ ಪ್ರಾಯ: 67 ವರ್ಷ ಎಂಬುವವರಿಗೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಹಾಗೂ ಕಾಲಿನ ಮಂಡಿ ನೋವು ಇದ್ದುದರಿಂದ ಅವರು ಜೀವನದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 26-05-2015 ರಂದು ಅಹರಾಹ್ನ 03:00 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಬಿಜೂರು ಗ್ರಾಮದಲ್ಲಿರುವ ಅವರ ಬಾಬ್ತು ಮನೆಯಲ್ಲಿ ಇರುವ ಸಮಯ ಯಾವುದೋ ವಿಷ ಪದಾರ್ಥವನ್ನು ಮದ್ಯದೊಂದಿಗೆ ಸೇರಿಸಿಕೊಂಡು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ಹೆರಿಯ ಪೂಜಾರಿಯವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20-06-2015 ರಂದು ರಾತ್ರಿ 00:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 22/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: