Friday, June 19, 2015

Daily Crimes Reported as On 19/06/2015 at 07:00 Hrs

ಅಸ್ವಾಭಾವಿಕ ಮರಣ ಪ್ರಕರಣ :
  • ಬ್ರಹ್ಮಾವರ : ಉಡುಪಿ ತಾಲೂಕು, ಬೈಕಾಡಿ ಗ್ರಾಮದ ಚೈತ್ರಾ ನಿವಾಸ ಎಂಬಲ್ಲಿ ವಾಸವಾಗಿರುವ ದಿನೇಶ ಪೂಜಾರಿ (43), ತಂದೆ: ಮಲ್ಲಪ್ಪ ಪೂಜಾರಿ, ಇವರ ಅಣ್ಣ ಗಣೇಶ್ ಪೂಜಾರಿ ಪ್ರಾಯ:44 ವರ್ಷ, ಎಂಬವರು ವಿಪರೀತ ಮಧ್ಯ ಸೇವಿಸಿದ್ದರಿಂದ ಲೀವರ್ ಸಮಸ್ಯೆಗೆ ಒಳಗಾಗಿ ಅಸ್ವಸ್ಥರಾಗಿದ್ದು ಅದೇ ಖಾಯಿಲೆ ಉಲ್ಬಣಗೊಂಡು ದಿನಾಂಕ: 18/06/2015 ರಂದು ಬೆಳಿಗ್ಗೆ ಅವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಮಾಡಿದ್ದು ಬೆಳಿಗ್ಗೆ 11:.00 ಗಂಟೆಯ ಸಮಯಕ್ಕೆ ಅವರನ್ನು ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ದಿನೇಶ್‌ ಪೂಜಾರಿಯವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 31/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಮಣಿಪಾಲ: ಅಮಿತ (32), ತಂದೆ: ಚಿದಾನಂದ ರಾಮಣ್ಣ ಹಲಸಂಗಿ ವಾಸ: ಬಾಬಲೆ ಗಲ್ಲಿ, ಶಿವಶಕ್ತಿ ನಗರ, ಆನಗೋಳ, ಬೆಳಗಾವಿ ಹಾಲಿ ವಾಸ: ಕನ್ನರ್‌ ಪಾಡಿ, ಕಿನ್ನಿ ಮುಲ್ಕಿ, ಉಡುಪಿ ಇವರ ತಂದೆ ಚಿದಾನಂದ ರಾಮಣ್ಣ, ಹಲಸಂಗಿಯವರು ಮಣಿಪಾಲದ ಎಫ್.ಬಿ.ಎಮ್ ಶಾಪಿಂಗ್ ಮಾಲ್ ನಲ್ಲಿ ಸುಮಾರು 2 ತಿಂಗಳಿನಿಂದ ಹೆಡ್ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 14/06/15 ರಂದು ರಾತ್ರಿ 10 ಗಂಟೆಯ ನಂತರ ಮೂತ್ರ ವಿಸರ್ಜನೆಗೆಂದು ಹೋದವರು ಮಣಿಪಾಲದ ಎಪ್.ಬಿ.ಎಮ್  ಕಾಂಪ್ಲೆಕ್ಸ್ನ ಲಿಪ್ಟ್ ನ (ಕಾಮಗಾರಿ ನಡೆಯುತ್ತಿರುವ ಸ್ಥಳ) ಹೊಂಡಕ್ಕೆ ಕಾಲು ಜಾರಿ ಬಿದ್ದು ಪೆಟ್ಟಾಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಅಮಿತ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ : 26/15 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
ಅಪಘಾತ ಪ್ರಕರಣ
  • ಕುಂದಾಪುರ ಸಂಚಾರ : ದಿನಾಂಕ 18/06/2015 ರಂದು ಸಮಯ ಸುಮಾರು ಸಂಜೆ 6:00 ಗಂಟೆಗೆ ಕುಂದಾಪುರ ತಾಲೂಕು  ಕಸಬಾ  ಗ್ರಾಮದ ಶಾಸ್ತ್ರಿ ಸರ್ಕಲ್ ಬಳಿ ಪುರಸಭಾ ರಸ್ತೆಯಲ್ಲಿ, ಆಪಾದಿತ ಕಮಲ್ ಸಿಂಗ್ ಎಂಬವನು HR 55-S-1638ನೇ ಲಾರಿಯನ್ನು ಕುಂದಾಪುರ ಪಾರಿಜಾತಾ ಸರ್ಕಲ್ ಕಡೆಯಿಂದ ಅತೀವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸತೀಶ್ ಆಚಾರ್ಯ(46) ತಂದೆ ಗೋಪಾಲ ಆಚಾರ್ಯ ವಾಸ: ಮಾತೃಶ್ರೀ, ಚೇಂಪಿ, ಯಡ್‌‌ಬೆಟ್ಟು, ಉಡುಪಿ ಇವರು ಕುಂದಾಪುರ  ಕಡೆಯಿಂದ  ಕೊಟೇಶ್ವರ ಕಡೆಗೆ  ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-EG-7571ನೇ ಬೈಕನ್ನು ಓವರ್‌ಟೇಕ್ ಮಾಡಿ ಬಳಿಕ ಯಾವುದೇ ಸೂಚನೆ ನೀಡದೇ ಒಮ್ಮಲೆ ರಸ್ತೆಯ ಎಡಬದಿಗೆ ಚಲಾಯಿಸಿ ಅಪಘಾತಪಡಿಸಿದ ಪರಿಣಾಮ ಸತೀಶ್‌ ಅಚಾರ್ಯರು ಬೈಕ್ ಸಮೇತ ರಸ್ತೆಗೆ ಬಿದ್ದಾಗ ಲಾರಿಯ ಚಕ್ರ ಸತೀಶ್‌ರವರ ಎಡಕಾಲಿನ ಪಾದದ ಮೇಲೆ ಹಾದು ಹೋಗಿ ಎಡಕಾಲಿನ ಪಾದದ ಹಿಮ್ಮಡಿಗೆ ರಕ್ತಗಾಯ ಹಾಗೂ ಒಳನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಸತೀಶ್‌ ಆಚಾರ್ಯರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ :
  • ಉಡುಪಿ ನಗರ : ಮಂಗಳ ಕಾಮತ್ (25) ತಂದೆ; ಮಧುಕರ ಕಾಮತ್ ವಾಸ ಹೆಬ್ರಿ ಕೇಳ ಪೇಟೆ ಇವರ ತಂದೆ ಮಧುಕರ ಕಾಮತ್ ಎಂಬವರು ದಿನಾಂಕ 17-06-2015 ರಂದು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ರೂಂ ನಂಬ್ರ 409 ರಲ್ಲಿ ಸ್ಪೆಶಲ್ ವಾರ್ಡ್ ನಲ್ಲಿದ್ದಾಗ ದಿನಾಂಕ 18-06-2015 ರಂದು ಬೆಳಿಗ್ಗೆ 04-00 ಗಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮಂಗಳಾ ಕಾಮತ್‌ ರವರ ತಂದೆಯ ಎಮ್‌ಟಿಎನ್‌ಎಲ್ ಸಿಮ್ ನಂ. 9869403671ನ್ನು ಅಳವಡಿಸಿದ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಗ್ರಾಂಡ್ ಮೊಬೈಲ್ ಫೋನನ್ನು ಕಳವು ಮಾಡಿರುತ್ತಾರೆ. ಕಳವಾದ ಮೊಬೈಲ್ ಫೋನ್‌ನ ಅಂದಾಜು ಮೌಲ್ಯ ರೂ 21,000/- ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 150/2015 ಕಲಂ. 380 ಐಪಿಸಿಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ : 
  • ಉಡುಪಿ ನಗರ: ವೇಣುಗೋಪಾಲ, ತಂದೆ: ಪೂರ್ಣಪ್ರಜ್ಞ ಕುಲಕರ್ಣಿ, ಬಿ5, ಪವಿತ್ರ ಅಂಗನ ಬಳಿ ರಾಘವೇಂದ್ರ ಮಠ ಪುಣೆ ಇವರ ತಾಯಿ ಹಾಗೂ ತಂದೆ ಪೂರ್ಣಪ್ರಜ್ಞ ಕುಲಕರ್ಣಿರವರು ಪುಣೆಯಿಂದ ದಿನಾಂಕ 15/06/2015 ರಂದು ಹೊರಟು ದಿನಾಂಕ 16/06/2015 ರಂದು ಉಡುಪಿಗೆ ಬಂದು ಉಡುಪಿಯ ಶ್ರೀಕೃಷ್ಣ ಮಠದ ಬಳಿ ಇರುವ ಯಾತ್ರಿ ನಿವಾಸದಲ್ಲಿ ರೂಮ್ ಮಾಡಿಕೊಂಡಿದ್ದು ಇವರ ತಾಯಿಯವರು ದೇವಸ್ಥಾನಕ್ಕೆ ಹೋಗಿ ಸಂಜೆ 06:00 ಗಂಟೆಗೆ ವಾಪಾಸು ಬರುವಾಗ ತಂದೆಯವರಾದ ಪೂರ್ಣಪ್ರಜ್ಞ ಕುಲಕರ್ಣಿರವರು ರೂಮ್ ನಲ್ಲಿ ಇರದೇ ಇದ್ದು ಕಾಣೆಯಾಗಿದ್ದು ಈ ವಿಷಯವನ್ನು ತಾಯಿಯವರು ವೇಣುಗೋಪಾಲರಿಗೆ ತಿಳಿಸಿ ಈ ದಿನ ಉಡುಪಿಗೆ ಬಂದು ಉಡುಪಿಯ ಶ್ರೀ ಕೃಷ್ಣ ಮಠದ ಪರಿಸರ, ಮಲ್ಪೆ  ಹಾಗೂ ಇತರ ಸ್ಥಳಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ಅವರು ಮಾನಸಿಕ ಆಸ್ವಸ್ಥರಾಗಿದ್ದು ನೆನೆಪಿನ ಶಕ್ತಿಕಳೆದು ಕೊಂಡಿರುವುದಾಗಿದೆ. ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 151/2015 ಕಲಂ. ಮನುಷ್ಯ ಕಾಣೆಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.

No comments: