Monday, June 15, 2015

Daily Crimes Reported as On 15/06/2015 at 17:00 Hrs


ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಕೆ ಗೋಪಾಲ್‌  ಆಚಾರ್‌  ಇವರು ದಿನಾಂಕ 14/06/2015 ರಂದು ರಾಹೆ 66 ರ ಡಾಮರು ರಸ್ತೆಯಲ್ಲಿ  ಸಾಸ್ತಾನ ಕಡೆಯಿಂದ ಸಾಲಿಗ್ರಾಮ ಕಡೆಗೆ ಮೋಟಾರು ಸೈಕಲ್‌ ನಲ್ಲಿ ಬರುತ್ತಿದ್ದಾಗ ಬೆಳಿಗ್ಗೆ 10.30 ಗಂಟೆಗೆ ಉಡುಪಿ ತಾಲೂಕು ಗುಂಡ್ಮಿ ಗ್ರಾಮದ ಡಿವೈನ್ ಪಾರ್ಕ ಸಮೀಪ ರಾಹೆ 66 ರ ಡಾಮರು ರಸ್ತೆಯ ಪಶ್ವಿಮ ಬದಿಯಲ್ಲಿ ಸಾಸ್ತಾನ ಕಡೆಯಿಂದ ಸಾಲಿಗ್ರಾಮ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆಎ20ಈಎ1548 ನೇದನ್ನು ಅದರ ಸವಾರನಾದ ಲೋಹಿತ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಸಾಸ್ತಾನ ಕಡೆಯಿಂದ ಸಾಲಿಗ್ರಾಮ ಕಡೆಗೆ ಹೋಗುತ್ತಿದ್ದ ಟಿವಿಎಸ್ ಮೊಪೈಡ್ ಮೋಟಾರು ಸೈಕಲ್ ನಂಬ್ರ ಕೆಎ20ಕ್ಯೂ 1169 ನೇದಕ್ಕೆ ಢಿಕ್ಕಿ ಹೊಡೆಸಿದ ಪರಿಣಾಮ ಸವಾರ ರಾಮಚಂದ್ರ ರವರಿಗೆ ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/15 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೊಲ್ಲೂರು: ದಿನಾಂಕ 14.06.2015 ರಂದು ಪಿರ್ಯಾದು ಶ್ರೀ ಸದಾನಂದ ಹೆಬ್ಬಾರ್ ಇವರು KA 20 Y 5398   ನೇ ಸ್ಟಾರ್ ಸಿಟಿ ಮೋಟಾರ್ ಸೈಕಲಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ನೇರಳೆಕಟ್ಟೆ ಕಡೆಯಿಂದ ವಂಡ್ಸೆ ಮಾರ್ಗವಾಗಿ ಮಾರಣಕಟ್ಟೆ ಕಡೆಗೆ ಹೋಗುತ್ತಿರುವಾಗ್ಗೆ ಬೆಳಿಗ್ಗೆ ಸುಮಾರು 07.45 ಗಂಟೆಯ ಸಮಯ ಚಿತ್ತೂರು ಗ್ರಾಮದ ಮಾರಣಕಟ್ಟೆ ರಸ್ತೆಯ ಅಬ್ದುಲ್ ಸಾಹೇಬರ ಮನೆಯ ಸಮೀಪ  ಬೈಕ್ ಸವಾರ ನಾಗೇಂದ್ರ ಹೆಬ್ಬಾರ ಎಂಬವನು ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬೈಕಿನ ನಿಯಂತ್ರಣ ತಪ್ಪಿ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು ಪಿರ್ಯಾದಿದಾದರರ ಬಲಕೈಗೆ, ಭುಜಕ್ಕೆ ಗುದ್ದಿದ ಗಾಯ ಮತ್ತು ಎಡಕಾಲಿನ ಮೊಣಗಂಟಿನ ಬಳಿ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/15 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಫಿರ್ಯಾದಿ ರಮೇಶ ಆಚಾರ್ಯ ಇವರ ಅಂಗಡಿಯಲ್ಲಿ ಸುಮಾರು 2 ವರ್ಷದಿಂದ ಕೆಲಸ ಮಾಡುತ್ತಿದ್ದ ಗೋಪಾಲ ಆಚಾರ್ಯ ಪ್ರಾಯ 47 ರವರು ದಿನಾಂಕ: 14/06/2015ರಂದು ಅವರ ಮನೆಯಾದ ಕೋಟಾ ಗಿಳಿಯಾರಿಗೆ  ಹೋಗಿದ್ದು ರಾತ್ರಿ 9 ಗಂಟೆಗೆ ಪಾಪಸು ಬಂದಿದ್ದು ಎಲ್‌ವಿಟಿ ದೇವಸ್ದಾನದ ಹಿಂಭಾಗ ಸಂತೆಕಟ್ಟೆ ಪುತ್ತೂರು ಗ್ರಾಮ ಇಲ್ಲಿನ ಶೆಡ್ಡಿಗೆ ಹೋಗಿ ಮಲಗಿರುತ್ತಾರೆ ದಿನಾಂಕ 15/06/2015ರಂದು ಬೆಳಿಗ್ಗೆ 7:00ಗಂಟೆಗೆ ಫಿರ್ಯಾದಿದಾರರು ಹೋಗಿ ನೋಡಿದಾಗ ಶೆಡ್ಡಿನ ಮಾಡಿಗೆ ಬಟ್ಟೆಯಿಂದ ಕಟ್ಟಿ ಕುತ್ತಿಗೆಗೆ ನೇಣು ಹಾಕಿ ಅತ್ಮಹತ್ಯೆ ಮಾಡಿಕೊಂಡಿದ್ದು ಇವರು ಅವಿವಾಹಿತವಾಗಿದ್ದು ಸುಮಾರು 6 ತಿಂಗಳಿಂದ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದು ಇದೇ ಕಾರಣದಿಂದ ಕುತ್ತಿಗೆಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ : 29/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.        

No comments: