Monday, June 15, 2015

Daily Crimes Reported as On 15/06/2015 at 07:00 Hrsಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 14/06/2015 ರಂದು 16.15  ಗಂಟೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮದ ಕೆ.ಜಿ ರೋಡ್ ಜಂಕ್ಷನ್ ಬಳಿ ರಾ.ಹೆ 66 ರಲ್ಲಿ ಆರೋಪಿ ಕೆಎ-03-ಎಮ್ಎನ್-7099 ಸ್ವಿಪ್ಟ್ ಕಾರು ಚಾಲಕ ತನ್ನ ಬಾಬ್ತು  ಸ್ವಿಪ್ಟ್ ಕಾರು ನಂಬ್ರ  ಕೆಎ-03-ಎಮ್ಎನ್-7099 ನೇಯದನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಪ್ರಸಾದ ದುರ್ಗಾಕೇರಿ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆಎ-30-ಆರ್-5109 ನೇ ಯದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರು ಸೈಕಲ್ ಸಹ ಸವಾರ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬೆನ್ನಿಗೆ, ಸೊಂಟದ ಎಡ ಭಾಗಕ್ಕೆ ರಕ್ತ ಗಾಯವಾಗಿರುತ್ತದೆ, ಎಡಕೈಭುಜದ ಹಿಂಭಾಗ ಎಡಕೈಮೊಣಗಂಟಿನ ಕೆಳಗೆ ಬಲಕೈ ಮೊಣಗಂಟಿನ ಕೆಳಗೆ ತರಚಿದ ಗಾಯಗಳಾಗಿರುತ್ತದೆ. ಹಾಗೂ ಸಹ ಸವಾರರಿಗೆ ತಲೆಯ ಎದುರು ಭಾಗಕ್ಕೆ ರಕ್ತಗಾಯ ಎಡಕೈ ಮೊಣಗಂಟಿಗೆ ಮತ್ತು ಬಲಭುಜದ ಕೆಳಗಡೆ ಭುಜದಲ್ಲಿ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/15 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಮಣಿಪಾಲ: ದಿನಾಂಕ 14.06.15ರಂದು 19:30 ಗಂಟೆಯಿಂದ 20:00ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಕೊಡಂಗೆ ಎಂಬಲ್ಲಿ ಆರೋಪಿತ ದಿನಕರ ಶೆಟ್ಟಿ ಹೆರ್ಗಾ, ಪ್ರಕಾಶ್‌ ಶೆಟ್ಟಿ, ಸಂಕೇತ್‌, ಸತೀಶ್‌ ಮತ್ತು ಇತರ 15 ಜನರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಮಾರಾಕಾಸ್ತ್ರಗಳನ್ನು ಹೊಂದಿ ಪಿರ್ಯಾದಿ ಪೀಟರ್ ಡಿ’ಸೋಜಾ ಇವರ ತಮ್ಮನ ಜೆಸಿಬಿ ರಸ್ತೆಯಲ್ಲಿ ಹೋಗುವಾಗ ತಡೆಯನ್ನುಂಟು ಮಾಡಿ ಅದೇ ವಿವಾದದಿಂದ ಕೊಡಂಗೆಯ ಪಿರ್ಯಾದಿಯ ತಮ್ಮ ಬೋನಿಫಾಸ್‌ ಮನೆಯ ಅವರಣದಲ್ಲಿ ಪಿರ್ಯಾದಿಯ ತಮ್ಮ ಬೋನಿಫಸ್‌ ಮತ್ತು ಅಣ್ಣ ಅಂತೋನಿಯವರಿಗೆ ಹಲ್ಲೆ ನಡೆಸಿದ್ದು, ಅಪಾದಿತರು ಹಲ್ಲೆ ನಡೆಸಿದ ಪರಿಣಾಮ ಬೋನಿಫಸ್‌ ಹಾಗೂ ಅಂತೋನಿಯವರ ಮೈ,ಕೈ, ಮುಖ ಹಾಗೂ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/15 ಕಲಂ 143,147,148,341,324,326,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಮಣಿಪಾಲ: ದಿನಾಂಕ 14.06.15ರಂದು ಸುಮಾರು 19:30ಗಂಟೆ ಸಮಯಕ್ಕೆ ಹೆರ್ಗಾ ಗ್ರಾಮದ ಕೊಡಂಗೆ ದೇವಸ್ಥಾನ ಹತ್ತಿರ ರಸ್ತೆಯಲ್ಲಿ ಪಿರ್ಯಾದಿ ಅಕ್ಷಿತ್ ಶೆಟ್ಟಿ ಇವರು ಮೋಟಾರ್ ಸೈಕಲ್‌ನಲ್ಲಿ ಬರುತ್ತಿರುವಾಗ ಎದುರಿನಿಂದ ಬೋನಿ, ಪೀಟರ್‌, ಟೋನಿ ಮತ್ತು ಜೆಸಿಬಿ ಚಾಲಕ ಹಾಗೂ ಇತರರಿಬ್ಬರು ಬಂದು ಅಡ್ಡಗಟ್ಟಿ ಏಕಾಏಕಿಯಾಗಿ ಅವರಲ್ಲಿ ಪೀಟರ್ ಎಂಬವನು ಕೈಯಿಂದ ಚರಂಡಿಗೆ ದೂಡಿ ಹಾಕಿ, ಕೈಯಿಂದ ಅವರೆಲ್ಲರೂ ತಲವಾರು ಮತ್ತು ರಾಡ್‌‌ನಿಂದ ಎರಡು ಕಾಲುಗಳಿಗೆ, ಕೈಗಳಿಗೆ ಎಡಕಿವಿ ತಲೆಗೆ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/15 ಕಲಂ143,144,147,148,323,324,341,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: