Thursday, June 11, 2015

Daily Crimes Reported as On 11/06/2015 at 07:00 Hrs


ಗಂಡಸು ಕಾಣೆ ಪ್ರಕರಣ
  • ಬ್ರಹ್ಮಾವರ:ದಿನಾಂಕ:07/06/2015 ರಂದು 17:00 ಗಂಟೆಗೆ ಉಡುಪಿ ತಾಲೂಕು ಆರೂರು ಗ್ರಾಮದ ಕೀರ್ತಿನಗರ ಎಂಬಲ್ಲಿಂದ ಪಿರ್ಯಾದಿದಾರರಾದ ಭೋಜು ಕುಲಾಲ್ (29) ತಂದೆ:ದಿವಂಗತ ಗೋವಿಂದ ಕುಲಾಲ್ ವಾಸ:ಶ್ರೀ ದುರ್ಗಾ ನಿಲಯ, ಕೀರ್ತಿ ನಗರ, ಆರೂರು ಗ್ರಾಮ, ಉಡುಪಿ ತಾಲೂಕುರವರ ಮನೆಯಿಂದ ಭೋಜು ಕುಲಾಲ್‌ರವರ ತಮ್ಮನಾದ ಮನೋಜ (26) ಎಂಬವನು ಮನೆಯಿಂದ ಹೋದವನು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಭೋಜು ಕುಲಾಲ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 111/15 ಕಲಂ:ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಡಾ||ಅಪೇಕ್ಷಾ ಡಿ. ರಾವ್‌ (31) ತಂದೆ:ಅಭಿಷೇಕ ಆರ್‌ ಚಂದಾವರ್‌ಕರ್‌ ವಾಸ:ಅಪರಾಜಿತಾ ಮನೆ ನಂಬ್ರ 5/3/11ಬಿ ಚಿಟ್ಪಾಡಿ ಉಡುಪಿರವರು ಆರೋಪಿ ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ರವರನ್ನು ಕಾನೂನುಬದ್ದವಾಗಿ ದಿನಾಂಕ:31/05/2013 ರಂದು ಉಡುಪಿ ಶ್ಯಾಮಿಲಿ ಸಭಾಭವನದಲ್ಲಿ ಜಾತಿ ಪದ್ಧತಿಯಂತೆ ಮದುವೆಯಾಗಿದ್ದು, ಮದುವೆಯ ಮುಂಚೆ ದಿನಾಂಕ:16/12/2012 ರಂದು  5,00,000 ರೂಪಾಯಿ  ಕೊಡುವಂತೆ ಆರೋಪಿತರು ಒತ್ತಾಯಿಸಿದ್ದು ಆದರೆ ಪಿರ್ಯಾದಿದಾರರ ತವರು ಮನೆಯವರು 3 ಲಕ್ಷ ಹಣವನ್ನು ಮಾತ್ರ ನೀಡಿರುತ್ತಾರೆ, ಮದುವೆಯ ಬಳಿಕ ಪಿರ್ಯಾದಿದಾರರು ತನ್ನ ಗಂಡನೊಂದಿಗೆ ಆರೋಪಿತೆ ಶ್ರೀಮತಿ ನೀನಾರಾವ್‌ರವರ ಜೊತೆಯಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದು ಬಳಿಕ ಉತ್ತರಪ್ರದೇಶದ ಝಾನ್ಸಿಯಲ್ಲಿ ಪಿರ್ಯಾದಿದಾರರು ಗಂಡನ ವಸತಿ ಗೃಹದಲ್ಲಿ ವಾಸ್ತವ್ಯವಿದ್ದರು.ಸದ್ರಿ ಸಮಯ ಆರೋಪಿಗಳಾದ ಅಭಿಷೇಕ್ ಆರ್ ಚಂದಾವರ್ಕರ್, ಪಿರ್ಯಾದಿದಾರರಾದ ಅತ್ತೆ ಪ್ರಿಯಾ ಆರ್ ಚಂದಾವರ್ಕರ್ ಹಾಗೂ ಆರೋಪಿ ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ರವರ ಸೋದರತ್ತೆ ಶ್ರೀಮತಿ ನೀನಾ ರಾವ್‌ರವರು ಸೇರಿಕೊಂಡು, ಪಿರ್ಯಾದಿದಾರರಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದುದ್ದಲ್ಲದೇ, ಪಿರ್ಯಾದಿದಾರರನ್ನು ತಿರಸ್ಕಾರದಿಂದ ನೋಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದುದ್ದಾಗಿದೆ ಅಲ್ಲದೇ  ಮಾರ್ಚ್ ತಿಂಗಳ 2014 ರಂದು ಆರೋಪಿ ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ರವರು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರನ್ನು ಹಾಗೂ ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದು ವರದಕ್ಷಿಣೆ ಬೇಡಿಕೆಯನ್ನು ಪುನರುಚ್ಚರಿಸಿ ಹೋಗಿರುವುದಾಗಿದೆ. 2015ರ ಮಾರ್ಚ್ ತಿಂಗಳಿನಲ್ಲಿ ಆರೋಪಿ ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ ಪಿರ್ಯಾದಿದಾರರಿಗೆ ವಿವಾಹ ವಿಚ್ಛೇದನದ ನೋಟೀಸ್ ಕಳುಹಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 143/2015 ಕಲಂ 498() ಐಪಿಸಿ ಮತ್ತು ಸೆಕ್ಷನ್‌ 3, 4, ಮತ್ತು 6 ವರದಕ್ಷಿಣೆ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: