Wednesday, June 17, 2015

Daily Crimes Reported as On 17/06/2015 at 07:00 Hrs



ವಂಚನೆ ಪ್ರಕರಣ

  • ಕಾಪು:  ಆರೋಪಿ 1 ರಸ್ಮಿಯಾ ಅಕ್ಬರ್ ಕೋ- ಅಕ್ಬರ್ ಅಬ್ದುಲ್ ರೆಹಮಾನ್ ವಾಸ: ಮನೆ ನಂಬ್ರ 3-49 ಅಲ್ ಮುಬಾರಕ್ ಮಂಝಿಲ್ 9 ನೇ ಅಡ್ಡರಸ್ತೆ ಸರಕಾರಿಗುಡ್ಡೆ ಶಂಕರಪುರ ಸುಭಾಸ್‌‌ನಗರ ಉಡುಪಿ ತಾಲೂಕು  ಮತ್ತು 2 ನೇ ಅಕ್ಬರ್ ಅಬ್ದುಲ್ ರೆಹಮಾನ್ ಬಿನ್-ಅಬ್ದುಲ್ ರೆಹಮಾನ್ ವಾಸ: ಹೌಸ್ ನಂ 3-49 ಆಲ್ ಮುಬಾರಕ್ ಮಂಝಿಲ್ 9 ನೇ ಅಡ್ಡ ರಸ್ತೆ ಸರಕಾರಿ ಗುಡ್ಡೆ  ಶಂಕರಪುರ ಅಂಚೆ ಸುಭಾಸ್ ನಗರ ಉಡುಪಿಯವರು ದಿನಾಂಕ 21-10-2013 ರಂದು ಪಿರ್ಯಾದಿ ಶಶಿಧರ್ ವಿ.ಬಿ. ಶಾಖಾ ಪ್ರಬಂಧಕರು ಬ್ಯಾಂಕ್ ಆಫ್ ಬರೋಡಾ ಇನ್ನಂಜೆ ಗ್ರಾಮ ಶಂಕರಪುರ ಅಂಚೆ ಉಡುಪಿ ತಾಲೂಕು ಇವರು ಪ್ರಬಂಧಕರಾಗಿರುವ ಬ್ಯಾಂಕ್ ಆಫ್ ಬರೋಡಾ ಇನ್ನಂಜೆ ಶಾಖೆ ಇಲ್ಲಿ ಹೊಂಡಾ ಕಾರನ್ನು ಖರೀದಿಸುವರೆ ದಾಖಲೆಗಳನ್ನು ನೀಡಿ, 2 ನೇ ಆರೋಪಿಯ ಜಾಮೀನಿನ ಮೇಲೆ  ರೂಪಾಯಿ 7,20,000/- ವನ್ನು ಸಾಲ ಪಡೆದಿರುತ್ತಾರೆ. ಆದರೆ, ಆರೋಪಿಗಳು ಮೊದಲ ಒಂದು ವರ್ಷ ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸುತ್ತಾ ನಂತರ ಒಂದಲ್ಲ ಒಂದು ನೆಪ ಹೇಳುತ್ತಾ ಕಾರಿನ ಶಾಶ್ವತ ನೊಂದಾವಣೆ ಆದ ಬಗ್ಗೆ ದಾಖಲಾತಿಯನ್ನು ಬ್ಯಾಂಕಿಗೆ ನೀಡದೇ ತಪ್ಪಿಸುತ್ತಿದ್ದು, ದಿನಾಂಕ 15-06-2015 ರವರೆಗೆ ಬಡ್ಡಿ ಸೇರಿ ಒಟ್ಟು ರೂಪಾಯಿ 6,62,500/- ನ್ನು ಬ್ಯಾಂಕಿಗೆ ಪಾವತಿಸಿರುವುದಿಲ್ಲ. ಅಲ್ಲದೇ ಪಿರ್ಯಾದಿದಾರರು ಆರ್.ಟಿ.ಓ. ಕಛೇರಿಯಲ್ಲಿ ಪರಿಶೀಲಿಸಿದಾಗ ಆರೋಪಿಗಳು ಮೇಲಿನ ವಾಹನದ ದಾಖಲೆಗಳನ್ನೆಲ್ಲಾ ತಿದ್ದಿ ಹೊಸತಾದ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಬಿ ಎಸ್ಟ್ರಾಕ್ ತಯಾರಿಸಿ, ಕುಂದಾಪುರದ ರಾಘವೇಂದ್ರ ಎಂಬವರಿಗೆ ಕಾರನ್ನು ಮಾರಾಟ ಮಾಡಿ, ಬ್ಯಾಂಕಿನ ಸಾಲವನ್ನು ಮರುಪಾವತಿಸದೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 123/2015 ಕಲಂ 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 16.06.2015 ರಂದು ಆಪಾದಿತರು ಕುಂದಾಪುರ ತಾಲೂಕು ಕಟ್ಬೇಲ್ತೂರು ಗ್ರಾಮದ ಭದ್ರಮಹಾಕಾಳಿ ದೇವಸ್ಥಾನದ ಬಳಿ 10-12 ಜನರು ಗುಂಪು ಸೇರಿಕೊಂಡು ಕೋಳಿಗಳ ಕಾಲಿಗೆ ಬಾಳುಗಳನ್ನು ಕಟ್ಟಿ ಹಣವನ್ನು ಪಣವಾಗಿ ಇಟ್ಟುಕೊಂಡು ಕೋಳಿಗಳಿಗೆ ಹಿಂಸೆ ನೀಡಿ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ 16:00 ಗಂಟೆಗೆ ದಾಳಿ ನಡೆಸಿ ಅವರಲ್ಲಿ (1) ಶೇಖರ ಶೆಟ್ಟಿ  (49) ತಂದೆ; ಶೀನಪ್ಪ  ವಾಸ: ಕಟ್ಬೇಲ್ತೂರು ಗ್ರಾಮ, , (2) ನಾಗರಾಜ ಮೊಗವೀರ (30) ತಂದೆ: ಶಂಕರ ಮೊಗವೀರ ವಾಸ: ಕಟ್ಬೇಲ್ತೂರು ಗ್ರಾಮ, (3) ಶಂಕರ ಪೂಜಾರಿ ತಂದೆ: ಲಿಂಗಪ್ಪ ಪೂಜಾರಿ  ವಾಸ: ಕಟ್‌ಬೇಲ್ತೂರು ಗ್ರಾಮ, ಕುಂದಾಪುರ ತಾಲೂಕು ಎಂಬವರನನ್ನು ದಸ್ತಗಿರಿ ಮಾಡಿ ಅವರ ವಶದಲ್ಲಿದ್ದ ನಗದು ರೂ. 550/- ಮತ್ತು 2 ಕೋಳಿಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 235/2015, ಕಲಂ: 87, 93  ಕರ್ನಾಟಕ ಪೊಲೀಸ್ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: