Wednesday, June 10, 2015

Daily Crimes Reported as On 10/06/2015 at 17:00 Hrs

ಹಲ್ಲೆ ಪ್ರಕರಣ : 
  • ಮಣಿಪಾಲ : ದಿನಾಂಕ   8-06-2015  ರಂದು ರಾತ್ರಿ  ಸುಮಾರು  8 ಗಂಟೆಯ ಸಮಯ ರಮೇಶ್ ಕುಮಾರ್‌, ತಂದೆ: ವೆಂಕಟನಾರಯಣ ರೆಡ್ಡಿ, ವಾಸ: ಶ್ರೀಶೈಲಾ, ಮನೆ ನಂ.5/67, 2ನೇ ಕ್ರಾಸ್‌‌ ರಸ್ತೆ, ಆರ್‌ಪಿ ನಗರ, ಇಂದ್ರಾಳಿ, ಉಡುಪಿ ಇವರ ತಾಯಿ ಮನೆಯಲ್ಲಿರುವಾಗ ಹೆಂಡತಿ ಮಹೇಶ್ವರಿ, ಆಕೆಯ ತಾಯಿ  ಭಾಗ್ಯಮ್ಮ, ಅಣ್ಣ ಲೋಕೇಶ್ ರೆಡ್ಡಿ, ಆಕೆಯ ಮಾವ ಕೃಷ್ಣ ರೆಡ್ಡಿ ರವರು ರಮೇಶ್ ಕುಮಾರ್ ರವರ ಮನೆಯ ಒಳಗೆ ಬಂದು ಇವರ ತಾಯಿಯನ್ನು ಉದ್ದೇಶಿಸಿ ತೆಲುಗು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅವರುಗಳು ರಮೇಶ್‌ ಕುಮಾರ್‌ ರವರ ತಾಯಿಗೆ ಕೈಗಳಿಂದ ಹೊಡೆದು ಹಲ್ಲೆ  ಮಾಡಿದ್ದು ಆ ನಂತರ ಮನೆಗೆ ಬಂದ ರಮೇಶ್‌ ಕುಮಾರ್‌ರನ್ನು ಉದ್ದೇಶಿಸಿ ನಮ್ಮ ವಿಷಯದಲ್ಲಿ ಇನ್ನು ಮುಂದೆ ಮಾತು ಕತೆ, ಪಾಂಚಾಯಿತಿಕೆ ಪ್ರಯತ್ನಿಸಿದಲ್ಲಿ ಸಾಯಿಸುತ್ತೇನೆ ಅಂತ ಬೈದಿರುವುದಲ್ಲದೆ ಸುಳ್ಳು ದೂರು ನೀಡಿ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಜೀವ ಬೆದರಿಕೆ  ಹಾಕಿರುತ್ತಾರೆ. ತದನಂತರ ಅವರುಗಳು ಹೋದ ಮೇಲೆ ರಮೇಶ್ ಕುಮಾರ್‌ ರವರ ಹೆಂಡತಿ ತಮ್ಮ ವಿಶ್ವನಾಥ ಎಂಬವನು ತನ್ನ ಪೋನ್ ನಿಂದ ರಮೇಶ್‌ ಕುಮಾರ್‌ ರವರ ಫೋನ್ ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ರಮೇಶ್‌ ಕುಮಾರ್‌ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 106/15 ಕಲಂ 504,506,448,323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಕಾರ್ಕಳ: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ನಿವಾಸಿ ಪ್ರಾಯ 47 ವರ್ಷ ಪ್ರಾಯದ ವಾಸು ಮಡಿವಾಳ ಎಂಬವರು ವಿಪರೀತ ಕುಡಿತದ ಚಟವುಳ್ಳವರಾಗಿದ್ದು, ತನಗಿರುವ ವಿಪರೀತ ಕುಡಿತದ ಚಟದಿಂದ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 08/06/2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 09/06/2015 ರಂದು ಬೆಳಗ್ಗೆ 7:30 ಗಂಟೆಯ ಮಧ್ಯೆ ತನ್ನ ಮನೆ ಸಮೀಪದ ಸರಕಾರಿ ಜಾಗದಲ್ಲಿರುವ ಬಸರಿಯ ಚಿಕ್ಕ ಮರಕ್ಕೆ ಬಟ್ಟೆಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆ ನೇಣಾಗಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಸಂತೋಷ ಮಡಿವಾಳ, ಪ್ರಾಯ 34 ವರ್ಷ, ತಂದೆ: ದಿವಂಗತ ಚೆಲ್ಲು ಮಡಿವಾಳ, ವಾಸ: ಸಂತೋಷ್ ನಿವಾಸ, ಚಿಕ್ಕಲ್ ಬೆಟ್ಟು, ಹಿರ್ಗಾನ ಗ್ರಾಮ, ಕಾರ್ಕಳ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ : 20/15 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.

No comments: