Wednesday, June 10, 2015

Daily Crimes Reported as On 10/06/2015 at 07:00 Hrs

ಮಟ್ಕಾ ಜುಗಾರಿ ಪ್ರಕರಣ : 
  • ಕೋಟ : ಬಸಪ್ಪ ಎ.ಇ, ಪೊಲೀಸ್ ಉಪನಿರೀಕ್ಷಕರು, ಕೋಟ ಠಾಣೆ  ಇವರು ದಿನಾಂಕ: 09/06/2015  ರಂದು 17:00 ಗಂಟೆಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಹೊಂಬಾಡಿ-ಮಂಡಾಡಿ ಗ್ರಾಮದ ಹೆಗ್ಡೆ ಬಾರ್ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದಂತೆ ದಾಳಿ ನಡೆಸುವರೇ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  ಮಟ್ಕಾ ಜುಗಾರಿ  ಆಟ ನೆಡೆಸುತ್ತಿದುದ್ದನ್ನು ಖಚಿತ ಪಡಿಸಿ ಕೊಂಡು 17:30 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ  ನರಸಿಂಹ ಕುಲಾಲ್(60),ತಂದೆ;ದಿ.ಚಿಕ್ಕ ಕುಲಾಲ್,ವಾಸ:ಹೊನಾ್ಡಿ,ಮೊಳಹಳ್ಳಿ ಗ್ರಾಮ,ಕುಂದಾಪುರ ಎಂಬವರನ್ನು  ದಸ್ತಗಿರಿ ಮಾಡಿ ಆರೋಪಿಯಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ -1,ಬಾಲ್ ಪೆನ್ನು -1 ನಗದು ರೂ-540/-ನ್ನು  ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 139/15 ಕಲಂ:87(1)(3) ಕೆ,ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ :
  • ಸುಲತಾ ಹೆಗ್ಡೆ(39), ಗಂಡ:ಸುರೇಶ ಹೆಗ್ಡೆ ,ವಾಸ:ಸಾಸ್ತಾನ,ಗುಂಡ್ಮಿ ಗ್ರಾಮ ,ಉಡುಪಿ ತಾಲೂಕು ಇವರು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ  ಉಪಾಧ್ಯಕ್ಷಳಾಗಿದ್ದು ಸದ್ರಿ ಪಟ್ಟಣ ಪಂಚಾಯತ್‌ನಲ್ಲಿ ಎಸ್.ಜೆ.ಎಸ್,ಆರ್,ವೈ ಆಗಿರುವ ಗೋಪಾಲ ನಾಯ್ಕ್ ಇವರು ತೆಕ್ಕಟ್ಟೆಯ ಸುರೇಂದ್ರ ಎನ್ನುವವರು ತನಗೆ ಮುಖ್ಯಾಧಿಕಾರಿಯಾಗಿ ಬಡ್ತಿ ಮಾಡಿಸಿ ಕೊಡುತ್ತೇನೆಂದು ಹೇಳಿ ರೂ-1,50,000/-ವನ್ನು ಪಡೆದು ಕೊಂಡಿದ್ದು ಈವರೆಗೂ ತನಗೆ ಬಡ್ತಿಯಾಗಿಲ್ಲ ಈ ಬಗ್ಗೆ ವಿಚಾರಿಸುವಂತೆ ಸುಲತಾ ಹೆಗ್ಡೆಯವರಲ್ಲಿ ಕೇಳಿಕೊಂಡ ಮೆರೆಗೆ ಸುರೇಂದ್ರ ಶೆಟ್ಟಿ ಯವರಿಗೆ ಪೋನ್ ಮಾಡಿ ವಿಚಾರಿಸಿರುತ್ತಾರೆ, ನಂತರ ಸದ್ರಿ ಗೋಪಾಲ ನಾಯ್ಕ್ ರವರು ಬೇರೆಯವರಲ್ಲಿ ಸುಲತಾ ಹೆಗ್ಡೆಯವರು ತನ್ನಿಂದ ರೂ-1,50,000/ ಪಡೆದುಕೊಂಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದು ಈ ಬಗ್ಗೆ ವಿಚಾರಿಸಿದಾಗ ಗೋಪಾಲ ನಾಯ್ಕ್ ಇವರು ಏಕಾಏಕಿಯಾಗಿ ನಿಂಧಿಸುವ ರೀತಿಯಲ್ಲಿ ಮಾತನಾಡಿ “ನಾನು ನಿನಗೆ ಹಣ ಕೊಟ್ಟಿದ್ದೇನೆಂದು ಹೇಳುತ್ತೇನೆ,ನೀವು ಏನು ಮಾಡಿ ಕೊಳ್ಳುತ್ತೀರಿ ನೋಡಿಕೊಳ್ಳುತ್ತೇನೆ ನನಗೆ ಬೇರೆ ರಾಜಕಾರಣಿಗಳು ಬಡ್ತಿ ತೆಗೆಸಿ ಕೊಡುತ್ತೇನೆ  ಎಂದು ಹೇಳಿದ್ದಾರೆ ನೀವು ಈ ವಿಷಯದಲ್ಲಿ ನನ್ನನ್ನು ಮತ್ತೆ ಪ್ರಶ್ನೆ ಮಾಡಿದರೆ ನಿಮ್ಮ ಮಾನ ಹರಾಜು ಹಾಕುತ್ತೇನೆ” ಎಂದು ಹೇಳಿ ಸುಲತಾ ಹೆಗ್ಡೆಯವರ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಅವರನ್ನು ಹೀಗೆ ಬಿಡುವುದಿಲ್ಲ ಎಂದು ಬೇದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 138/15 ಕಲಂ: 504,506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ದಿನಾಂಕ 08-06-2015 ರಂದು ಸಂಜೆ 05:15 ಗಂಟೆಯ ಸಮಯಕ್ಕೆ ಗಿರಿಜಾ ಶೆಡ್ತಿ (45) ಗಂಡ: ರಾಜಗೋಪಾಲ ಶೆಟ್ಟಿ ವಾಸ: ಕಂಬಳಗದ್ದೆಮನೆ ಹಳಗೇರಿ ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಕಂಬದಕೋಣೆ ಗ್ರಾಮದ ಹಳಗೇರಿಯಲ್ಲಿರುವ ಕಂಬಳಗದ್ದೆ ಮನೆ ಎಂಬಲ್ಲಿರುವ ಸಮಯ ಆರೋಪಿತರಾದ 1) ಶರತ್‌, 2) ಜಯರಾಮ ಶೆಟ್ಟಿ, 3) ಜಯಪ್ರಕಾಶ್‌ ಶೆಟ್ಟಿ ಮತ್ತು 4) ಪೂರ್ಣಿಮಾ ಶೆಡ್ತಿ ರವರು ಗಿರಿಜಾ ಶೆಡ್ತಿರವರ ಮನೆಗೆ ಅಕ್ರಮ ಪ್ರವೇಶ ಮಾಡಿ ನನ್ನ ಮಗನನ್ನು ತಂದುಕೊಡು ಎಂದು ಹೇಳಿದ್ದು ಆಗ ಗಿರಿಜಾ ಶೆಡ್ತಿ ಯವರು ತಂದು ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಆರೋಪಿ ಶರತನು ಕಬ್ಬಣದ ರಾಡಿನಿಂದ ಗಿರಿಜಾ ಶೆಡ್ತಿಯವರ ತಲೆಯ ಹಿಂಬದಿಗೆ ಹೊಡೆದನು, ಜಯರಾಮ ಶೆಟ್ಟಿಯು ಕೋಲಿನಿಂದ ರಟ್ಟೆಗೆ ಹೊಡೆದನು ಜಯಪ್ರಕಾಶ್‌ ಶೆಟ್ಟಿಯು ತಲೆಯನ್ನು ಎಳೆದು ದೂಡಿ ಹಾಕಿದನು ಮತ್ತು ಪೂರ್ಣಿಮಾ ಶೆಟ್ಟಿಯು ತಲೆಯ ಕೂದಲನ್ನು ಹಿಡಿದು ಎಳೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾಳೆ. ಗಿರಿಜಾ ಶೆಡ್ತಿಯವರು ಬೊಬ್ಬೆ ಹೊಡೆದಾಗ ಪಕ್ಕದ ಮನೆಯ ಸುಧಾಕರ ಶೆಟ್ಟಿಯವರು ಬರುವುದನ್ನು ನೋಡಿ ಆರೋಪಿತರು ಓಡಿ ಹೋಗುವಾಗ ಗಿರಿಜಾ ಶೆಡ್ತಿಯವರನ್ನು ಉದ್ದೇಶಿಸಿ “ನಿನ್ನನ್ನು ಮತ್ತು ನಿನ್ನ ಮಗನನ್ನು ಕೊಲೆ ಮಾಡುತ್ತೇವೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಕೃತ್ಯಕ್ಕೆ ಅವರೊಳಗಿನ ಜಾಗದ ತಕರಾರು ಕಾರಣವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 168/15 ಕಲಂ: 448, 324,504,506 ಮತ್ತು 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಲೆ ಪ್ರಕರಣ :
  • ಗಣೇಶ್ ಶೇರುಗಾರ್ (49), ತಂದೆ: ರಾಮಕೃಷ್ಣ ಶೇರುಗಾರ್, ಅಂಗಡಿಮನೆ , ಉಪ್ಪಿನಕುದ್ರು ಗ್ರಾಮ , ಕುಂದಾಪುರ ಇವರ ತಾಯಿ ಸುಮಾರು ಎಂಭತ್ತು ವರ್ಷ ಪ್ರಾಯದ ಶ್ರೀಮತಿ ಜಾನಕಿಯವರು ಗಣೇಶ್‌ ಶೇರುಗಾರ್‌ರವರ ಪಕ್ಕದ ಮನೆಯಾದ ಮೂಲಮನೆಯಲ್ಲಿ ಒಬ್ಬರೇ ವಾಸವಾಗಿದ್ದು,  ಗಣೇಶ್‌ ಶೇರುಗಾರ್‌ರವರ ತಂಗಿಯ ಗಂಡ ಜನಾರ್ಧನರವರು ಮದುವೆ ಕಾರ್ಯಕ್ರಮಕ್ಕೆ ಬಂದವರು ಮೂಲಮನೆಯಲ್ಲಿ ಉಳಕೊಂಡಿದ್ದರು. ದಿನಾಂಕ 09/06/2015ರ ರಾತ್ರಿ ಸುಮಾರು 10.00ಗಂಟೆ ಸುಮಾರಿಗೆ ತಾಯಿ ಇರುವ ಮನೆಯಿಂದ ಬೊಬ್ಬೆ ಕೇಳಿ, ಗಣೇಶ್‌ ಶೇರುಗಾರ್‌ರವರು ಓಡಿಹೋಗಿ  ನೋಡಿದಾಗ ತಾಯಿಯವರು ಅಂಗಳದ ನೆಲದ ಮೇಲೆ ಬಿದ್ದಿದ್ದು, ತಲೆಯಿಂದ ರಕ್ತ ಸೋರುತ್ತಿದ್ದು, ಆರೋಪಿತ ಜನಾರ್ಧನ ಕೈಯಲ್ಲಿ ಕೋಲನ್ನು ಹಿಡಿದುಕೊಂಡಿದ್ದವರು, ಗಣೇಶ್‌ ಶೇರುಗಾರ್‌ರವರನ್ನು ನೋಡಿ, ಕೋಲನ್ನು ಅಲ್ಲೇ ಬಿಸಾಡಿ ಓಡಿಹೋಗಿರುತ್ತಾರೆ. ಗಣೇಶ್‌ರವರ ತಾಯಿಯವರಲ್ಲಿ ಆರೋಪಿ ಜನಾರ್ಧನನು ಆಗಾಗ್ಗೆ ಖರ್ಚಿಗಾಗಿ ಹಣ ಕೇಳುತ್ತಿದ್ದು, ಹಣ ನೀಡದ ಸಮಯದಲ್ಲಿ ಗಲಾಟೆ ಮಾಡುತ್ತಿದ್ದು, ಈ ದಿನ ಕೂಡಾ ಹಣ ಕೇಳಿ,  ಕೊಡಲಿಲ್ಲವೆಂಬ ಕಾರಣಕ್ಕೆ ಕೋಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿದೆ ಎಂಬುದಾಗಿ ಗಣೇಶ್ ಶೇರುಗಾರ್ ರವರು ನೀಡಿದ ದೂರಿನಂತೆ  ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 229/15 ಕಲಂ: 302  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
  • ದಿನಾಂಕ 07-06-2015 ರಂದು ಬೆಳಿಗ್ಗೆ 10:00 ಗಂಟೆಯ ಸಮಯಕ್ಕೆ ಜೋನ್‌ ಡಿ ಅಲ್ಬೆಡಾ (46) ತಂದೆ: ಮಾರ್ಕೋ ಡಿ ಅಲ್ಬೆಡಾ ವಾಸ: ಕೆಳಕಳಿ ಹಕ್ಲಾಡಿ ಗ್ರಾಮ  ಕುಂದಾಪುರ ತಾಲೂಕು ಅವರ ಮಗ ರೋಹನ್‌ ಅಲ್ಬೇಡಾ ಎಂಬುವವರೊಂದಿಗೆ ಕಿರಿಮಂಜೇಶ್ವರ ಬಸ್ಸು ನಿಲ್ದಾಣದಲ್ಲಿ ಬಸ್ಸು ಇಳಿದು ರಾಹೆ 66 ರ ಎಡಬದಿಯ ಮಣ್ಣು ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವ ಸಮಯ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಕೆಎ 20 ಸಿ 7146 ನೇ ಮಾರುತಿ ಓಮಿನಿ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಜೋನ್‌ ಡಿ ಅಲ್ಬೆಡಾ ಮಗನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಭುಜಕ್ಕೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಗಾಯಗೊಂಡ ರೋಹನ್‌ ಅಲ್ಬೇಡಾ ರವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಜೋನ್‌ ಡಿ ಅಲ್ಬೆಡಾರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 167/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ದಿನಾಂಕ 08-06-2015 ರಂದು ಸಂಜೆ 03:15 ಗಂಟೆಯ ಸಮಯಕ್ಕೆ KA 20 Z 7768 ನೇ ನಂಬ್ರದ ಕಾರನ್ನು ಅದರ ಚಾಲಕನು ಬೈಂದೂರು ಕಡೆಯಿಂದ ಕಿರಿಮಂಜೇಶ್ವರ ಕಡೆಗೆ ರಾಹೆ 66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕುಂದಾಪುರ ತಾಲೂಕು ಉಪ್ಪುಂದ ಗ್ರಾಮದ ಡಾಕ್ಟರ್‌ ಕಾರಂತರ ಕ್ಲೀನಿಕ್‌ ಹತ್ತಿರ ತಲುಪುತ್ತಿದ್ದಂತೆ ಕಾರಂತರ ಮನೆಯ ಕಡೆಯಿಂದ KA 20 A 5032 ನೇ  ರಿಕ್ಷಾ ಚಾಲಕನು ಆತನ ಬಾಬ್ತು ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಯಾವುದೇ ಸಿಗ್ನಲ್‌ ಕೊಡದೇ ಏಕಾಏಕಿಯಾಗಿ ರಾ.ಹೆ 66 ಕ್ಕೆ ಚಲಾಯಿಸಿದ ಕಾರಣ ಕಾರು ಹಾಗೂ ರಿಕ್ಷಾ ಒಂದಕ್ಕೊಂದು ಡಿಕ್ಕಿಹೊಡೆದ ಪರಿಣಾಮ ರಿಕ್ಷಾ ಚಾಲಕನು ರಸ್ತೆಗೆ ಬಿದ್ದು, ರಿಕ್ಷಾ ಚಾಲಕನಿಗೆ  ತಲೆಗೆ ಮತ್ತು ಮೈಕೈಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ರಾಘವೇಂದ್ರ ಎಮ್‌ ದೇ ವಾಡಿಗ (35) ತಂದೆ: ಮಾಧವ ದೇವಾಡಿಗ ವಾಸ: ಪಡುಮನೆ ಆಕಳಬೈಲು ಕಿರಿಮಂಜೇಶ್ವರ ಗ್ರಾಮ ಕುಂದಾಪುರ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 166/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
  • ಪ್ರಮೀಳಾ(27) ತಂದೆ: ಸಂಜೀವ ಆಚಾರ್ಯ, ಪ್ರಸನ್ನ ನಿವಾಸ, ಶೇಂಜ, ಮುದರಂಗಡಿ, ಎಲ್ಲೂರು ಗ್ರಾಮ ,ಉಡುಪಿ ತಾಲೂಕುರವರ ತಂದೆಯಾದ ಸಂಜೀವ ಆಚಾರ್ಯ 62 ವರ್ಷ ಎಂಬವರು ಹೃದಯ ಸಂಬಂದಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಹಿಂದೆ 3 ಸಲ ಹೃದಯಘಾತವಾಗಿದ್ದು, ದಿನಾಂಕ. 08.06.2015 ರಂದು ರಾತ್ರಿ 10:30 ಗಂಟೆಗೆ ಎಲ್ಲೂರು ಗ್ರಾಮದ ಮುದರಂಗಡಿ, ಕೇಂಜ ಎಂಬಲ್ಲಿರುವ ತನ್ನ ಮನೆಯಲ್ಲಿ ಊಟ ಮಾಡಿ ಮಲಗಿದ್ದವರಿಗೆ ಹೃದಯಘಾತವಾಗಿದ್ದು ಇದರಿಂದ ಅವರು ತೀವ್ರ ಆಸ್ಪಸ್ತಗೊಂಡವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಟಿ.ಎಂ.ಎ ಆಸ್ಪತ್ರೆಗೆ ಕರೆದುಕೊಂಡು ಬಂದಾಗ  ವೈದ್ಯಾಧಿಕಾರಿಯವರು ಪರೀಕ್ಷಿಸಿ 11:00 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಪ್ರಮೀಳಾರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಸಂಖ್ಯೆ : 16/15 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: