Monday, June 08, 2015

Daily Crimes Reported as On 08/06/2015 at 07:00 Hrs
ಹಲ್ಲೆ ಪ್ರಕರಣ
  • ಬೈಂದೂರು: ದಿನಾಂಕ: 06/06/2015 ರಂದು ರಾತ್ರಿ 09:30 ಗಂಟೆಗೆ ಫಿರ್ಯಾದಿ ಪೂರ್ಣಿಮಾ ಶೆಟ್ಟಿ ಇವರು ಕುಂದಾಪುರ ತಾಲೂಕು ಕಂಬದಕೋಣೆ ಗ್ರಾಮದ ಹಳೆಗೇರಿಯ ಕಂಬಳಗದ್ದೆ ಎಂಬಲ್ಲಿರುವ ಮನೆಯಲ್ಲಿರುವಾಗ ಪ್ರತಾಪ್ ಶೆಟ್ಟಿ, ಜಿತೇಂದ್ರ ಶೆಟ್ಟಿ, ಸುಕೇಶ್ ಶೆಟ್ಟಿ ಹಾಗೂ ರವಿಂದ್ರ ಶೆಟ್ಟಿ ಎಂಬವರು ಫಿರ್ಯಾದಿದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ.  ಆ ಸಮಯ ಫಿರ್ಯಾದಿದಾರರ ಗಂಡ ಹಾಗೂ ಮಾವ ಅಲ್ಲಿಗೆ ಬಂದಿದ್ದನ್ನು ನೋಡಿ, ಅವರನ್ನು ಆರೋಪಿತರು ತಡೆದು ನಿಲ್ಲಿಸಿ ಕೈಗಳಿಂದ ಹೊಡೆದಿದ್ದು  ತಡೆಯಲು ಹೋದ ಫಿರ್ಯಾದಿದಾರರನ್ನು ದೂಡಿ ಹಾಕಿದ್ದು ಆ ಸಮಯ ಪಿರ್ಯಾದಿದಾರರು ಕೂಗಿಕೊಂಡಾಗ ಫಿರ್ಯಾದಿದಾರರ ತಂದೆ ಹಾಗೂ ಅಕ್ಕಪಕ್ಕದವರು ಬರುತಿರುವುದನ್ನು  ನೋಡಿ ಆರೊಪಿತರು ತಮ್ಮ ಕೈಯಲ್ಲಿದ್ದ ದೊಣ್ಣೆ ಹಾಗೂ ಕತ್ತಿಯನ್ನು ತೋರಿಸುತ್ತಾ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಹಾಗೂ ದಿನಾಂಕ 07/06/2015 ರಂದು ಆರೋಪಿತರು ಪಿರ್ಯಾಧಿದಾರ ಮಾವನ ಮೊಬೈಲಿಗೆ ಕರೆ ಮಾಡಿ ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 164/2015 ಕಲಂ 448, 504, 341, 323, 506, ಜೊತೆಗೆ 34   ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: