Sunday, June 07, 2015

Daily Crimes Reported as On 07/06/2015 at 19:30 Hrs

ಅಪಘಾತ ಪ್ರಕರಣ :
  • ಕೋಟ : ದಿನಾಂಕ 03/06/2015 ರಂದು ಸಂಜೆ ಸಮಯ ಸುಮಾರು 07.30 ಗಂಟೆಗೆ ಮಹೇಶ  ಪ್ರಾಯ 24 ವರ್ಷ ತಂದೆ ಕೇಶವ ಮೊಗವೀರ ವಾಸ: ಗಣೇಶ ನಿಲಯ ಗುರಿಕಾರ ತೋಟ ಕೊರವಡಿ ಗ್ರಾಮ ಕುಂಭಾಶಿ ಪೋಸ್ಟ್ ಕುಂದಾಪುರ ತಾಲೂಕು. ಇವರು ತೆಕ್ಕಟ್ಟೆ ಕಡೆಯಿಂದ ಕೊರವಾಡಿ ಕಡೆಗೆ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಅವರ ಮಾವನಾದ ಗೋಪಾಲ (39 ವರ್ಷ) ಎಂಬವರು ಅವರ ಬಾಬ್ತು ಮೋಟಾರು ಸೈಕಲ್ ಕೆಎ-20 ಕ್ಯೂ-9433 ನೇದರಲ್ಲಿ ತೆಕ್ಕಟ್ಟೆಯಿಂದ ಕೊರವಡಿಯ ತನ್ನ ಮನೆಗೆ ಹೋಗುತ್ತಿದ್ದಾಗ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕೊರವಡಿ ನಾಗಬನದ ಹತ್ತಿರ ತಲುಪುವಾಗ್ಗೆ ಆಟೋ ರಿಕ್ಷಾ ನಂಬ್ರ ಕೆಎ-19 ಸಿ-174 ನೇದನ್ನು ಅದರ ಚಾಲಕನಾದ ರಾಜು ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಡಾಮರು ರಸ್ತೆಯ ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು  ಗೋಪಾಲ ರವರು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆಸಿದ ಪರಿಣಾಮ ಗೋಪಾಲ ರವರು ಡಾಮರು ರಸ್ತೆಗೆ ಅಡ್ಡ ಬಿದ್ದು ಮೈಕೈಗೆ ತರಚಿದ ಗಾಯ, ಬಲಕೈ ಬೆರಳಿಗೆ ಮೂಳೆ ಮುರಿತದ ಗಾಯ ಮತ್ತು ಹೊಟ್ಟೆಗೆ ತೀವ್ರ ಸ್ವರೂಪದ ಒಳನೋವು ಉಂಟಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು, ಈ ದಿನ ದಿನಾಂಕ 06/06/2015ರಂದು ರಾತ್ರಿ 8.20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಹೇಶ್‌ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 136/15 ಕಲಂ:279 304(ಎ)  ಐಪಿಸಿ  ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: