Sunday, June 07, 2015

Daily Crimes Reported as On 07/06/2015 at 07:00 Hrs



ಅಪಘಾತ ಪ್ರಕರಣ

  • ಉಡುಪಿ: ದಿನಾಂಕ:06/06/2015 ರಂದು ಸಂಜೆ 07:15 ಗಂಟೆ ಸಮಯದಲ್ಲಿ ಬಲಾಯಿಪಾದೆ ಜಂಕ್ಷನ್‌ ಹತ್ತಿರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ-19 ಎಎ-4147 ನೇ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಕೆಎ-20 ವೈ-7573 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಸವಾರ ಸಂಜೀವರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಹಣೆಗೆ,ತಲೆಗೆ ಮತ್ತು ಕೈ ಕಾಲುಗಳಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/15 ಕಲಂ : 279, 337  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಟ್ಕಾ ಜುಗಾರಿ ಪ್ರಕರಣ

  • ಕಾಪು: ದಿನಾಂಕ 06-06-2015 ರಂದು 16:00 ಗಂಟೆಗೆ ಸುನಿಲ್ ವೈ ನಾಯಕ್ ಸಿ.ಪಿ.. ಕಾಪು ವೃತ್ತ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಅವರ ಮಾರ್ಗದರ್ಶನದಲ್ಲಿ ಜಗದೀಶ್ ರೆಡ್ಡಿ ಪಿ.ಎಸ್.ಐ ಕಾಪು ಪೊಲೀಸ್ ಠಾಣೆ ಇವರು ಯೆಣಗುಡ್ಡೆ ಗ್ರಾಮದ ಕಟಪಾಡಿ ಹಳೆ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ  ಸಿಬ್ಬಂದಿಯವರೊಂದಿಗೆ 16:30 ಗಂಟೆಗೆ ದಾಳಿ ನಡೆಸಿ, ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಆರೋಪಿತ  1)  ರವಿ ಪೂಜಾರಿ (38) ತಂದೆ: ಶೇಖರ ಸಾಲ್ಯಾನ ವಾಸ: ಕುಚ್ಚಿಕಾಡು , ಕೋಟೆ ಗ್ರಾಮ ಉಡುಪಿ 2)  ಪ್ರಥಮ್ (24) ತಂದೆ; ಹರಿಶ್ಚಂದ್ರ ವಾಸ: ಕಜಕೋಡೆ , ಕೋಟೆ ಗ್ರಾಮ  ಉಡುಪಿ ತಾಲೂಕು ಮತ್ತು ಜಿಲ್ಲೆ ಇವರನ್ನು  ವಶಕ್ಕೆ ಪಡೆದು ಆಟಕ್ಕೆ ಬಳಸಿದ ನಗದು ರೂಪಾಯಿ 2,125/- ಮಟ್ಕಾ ಚೀಟಿ-1, ಮತ್ತು ಬಾಲ್ ಪೆನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2015 ಕಲಂ 78 (1) (111) ಕೆ.ಪಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ 06-06-2015 ರಂದು 17:20 ಗಂಟೆಗೆ ಸುನಿಲ್ ವೈ ನಾಯಕ್ ಸಿ.ಪಿ.. ಕಾಪು ವೃತ್ತ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಅವರ ಮಾರ್ಗದರ್ಶನದಲ್ಲಿ  ಜಗದೀಶ್ ರೆಡ್ಡಿ ಪಿ.ಎಸ್.ಐ ಕಾಪು ಪೊಲೀಸ್ ಠಾಣೆ ಇವರು ಕಾಪು ಪಡು ಗ್ರಾಮದ ಸ್ವಪ್ನ ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ  ಸಿಬ್ಬಂದಿಯವರೊಂದಿಗೆ 17:30 ಗಂಟೆಗೆ ದಾಳಿ ನಡೆಸಿ, ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಆರೋಪಿತ 1)   ಶ್ರೀ ಶೈಲ (27) ತಂದೆ: ಬಸವರಾಜ ವಾಸ: ಮಣಿಪುರ ರಸ್ತೆ ಕಟಪಾಡಿ ಯೆಣಗುಡ್ಡೆ ಗ್ರಾಮ 2)   ಗಣೇಶ (35) ತಂದೆ: ಅಣ್ಣಯ್ಯ ಆಚಾರಿ ವಾಸ: ತೆಂಕ ಎರ್ಮಾಳು ಅದಮಾರು ರಸ್ತೆ ಪಡುಬಿದ್ರೆ ಇವರನ್ನು  ವಶಕ್ಕೆ ಪಡೆದು ಆಟಕ್ಕೆ ಬಳಸಿದ ನಗದು ರೂಪಾಯಿ 3,460/- ಮಟ್ಕಾ ಚೀಟಿ-1, ಬಾಲ್ ಪೆನ್ನು-1,  CELKON ಕಂಪೇನಿಯ ಬಿಳಿ ಬಣ್ಣದ ಮೊಬೈಲ್‌‌ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ  118/2015 ಕಲಂ 78 (1) (111) ಕೆ.ಪಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: