Friday, June 05, 2015

Daily Crimes Reported as On 05/06/2015 at 17:00 Hrsಅಪಘಾತ ಪ್ರಕರಣ
  • ಹೆಬ್ರಿ: ಪಿರ್ಯಾದಿದಾರರಾದ ಶ್ರೀ ರಾಮಮೂರ್ತಿ ಕೊಡಂಬ (41) ಎಂಬುವವರು ದಿನಾಂಕ 04-06-2015 ರಂದು ತನ್ನ ಬಾಬ್ತು ಕೆ.ಎ.19.ಜೆಡ್‌ 6164 ನೇ ಮಾರುತಿ ಸುಜುಕಿ ಜೆನ್‌ ಕಾರಿನಲ್ಲಿ ಸಂಜೆ 5:20 ಗಂಟೆಗೆ ನಾಡ್ಪಾಲು ಗ್ರಾಮದ, ಬಂಡಿಮಠ ಸೇತುವೆ ತಿರುವಿನ ಬಳಿ ತಲುಪುವಾಗ್ಯೆ ಎದುರುಗಡೆಯಿಂದ ಕೆ.ಎ.20.ಬಿ 5651 ನೇ ಹನುಮಾನ್‌ ಬಸ್ಸನ್ನು ಅದರ ಚಾಲಕ ಗೋಪಾಲ್‌ ಎಂಬುವವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಗಾಯಗೊಂಡಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/15 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ: ಪಿರ್ಯಾದಿ ಪ್ರಸಾದ್ ಕೆ ಎಸ್ ಇವರು ದಿನಾಂಕ 04/06/2015 ರಂದು ತನ್ನ ಬಾಬ್ತು ಕೆಎ 20 ಪಿ 9371 ಮಾರುತಿ ಸ್ವಿಪ್ಟ್ ಕಾರಿನಲ್ಲಿ ತನ್ನ ಭಾವ ವಿಶ್ವನಾಥ ಹಾಗೂ ಅತ್ತೆ ಶ್ರೀಮತಿ ಪ್ರಮೋದರವರನ್ನು ಕುಳ್ಳಿರಿಸಿಕೊಂಡು ಕಾರ್ಕಳಕ್ಕೆ ಬೆಳ್ಮಣ್  ಮಾರ್ಗವಾಗಿ  ಬರುತ್ತಿರುವಾಗ ಮದ್ಯಾಹ್ನ ಸುಮಾರು 14-30 ಗಂಟೆಯ ಸಮಯ  ಬೆಳ್ಮಣ್ ಗ್ರಾಮದ ಪುನಾರ್ ಎಂಬಲ್ಲಿ ಎದುರುನಿಂದ ಅಂದರೆ ಬೆಳ್ಮಣ್  ಕಡೆಯಿಂದ ಕೆಎ 19 ಎಎ 4316 ನೆ ಟಿಪ್ಪರನ್ನು ಅದರ ಚಾಲಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀವ್ರ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿನ ಮುಂಭಾಗ ಡಿಕ್ಕಿ ಹೊಡೆದ ಪರಿಣಾಮ ಕಾರನ್ನು ಚಲಾಯಿಸುತ್ತಿದ್ದ ಪಿರ್ಯಾದಿದಾರರ ಎರಡು ಕಾಲಿನ ಮೊಣ ಕಾಲಿಗೆ ರಕ್ತಗಾಯಾಗಳಾಗಿದ್ದು ಪಿರ್ಯಾದಿದಾರರ ಭಾವ ವಿಶ್ವನಾಥರವರಿಗೆ ಎಡ ಕೈ ಭುಜದ ಮೂಳೆ  ಮುರಿತವಾಗಿರುತ್ತದೆ ಮತ್ತು ಹಿಂದಿನ ಸೀಟ್ ನಲ್ಲಿ ಕುಳಿತಿದ್ದ ಪಿರ್ಯಾದಿದಾರರ ಅತ್ತೆ ಪ್ರಮೋದರವರಿಗೆ ತಲೆಗೆ ರಕ್ತಗಾಯಾವಾಗಿದ್ದು ಅವರುಗಳು ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 97/15 ಕಲಂ : 279, 337,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ:  ದಿನಾಂಕ: 05/06/15 ರಂದು ಬೆಳಿಗ್ಗೆ ಸುರೇಶ್ (42ವರ್ಷ) ಇವರು ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ತೋಟದ ಕೆಲಸ ಮಾಡುತ್ತಿದ್ದು. ಸಮಯ ಸುಮಾರು ಬೆಳಿಗ್ಗೆ: 11:00 ಗಂಟೆಗೆ ಸುರೇಶ್ ರವರು ತೋಟದಲ್ಲಿದ್ದ ಬೋಗಿ ಮರವನ್ನು ಹತ್ತಿ ಕೊಂಬೆಯಲ್ಲಿ ಕುಳಿತು ಮರದ ಗೆಲ್ಲನ್ನು ಕತ್ತಿಯಿಂದ ಕಡಿಯುತ್ತಿರುವಾಗ ಅವರ ಕಾಲು ಕೊಂಬೆಯಿಂದ ಜಾರಿ ಆಕಸ್ಮಿಕವಾಗಿ ಕೆಳಗೆ ಕಲ್ಲಿನ ಮೇಲೆ ಬಿದ್ದ ಪರಿಣಾಮ ಅವರಿಗೆ ಕಿವಿಯ ಬಳಿ ಹಾಗೂ ಕುತ್ತಿಗೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ : 21/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.        

No comments: