Thursday, June 04, 2015

Daily Crimes Reported as On 04/06/2015 at 07:00 Hrsಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 03.06.2015 ರಂದು 16:30 ಗಂಟೆಗೆ ಕಾರ್ಕಳ ತಾಲೂಕಿನ, ಕಸಬ ಗ್ರಾಮದ ಬಂಗ್ಲೆಗುಡ್ಡೆ ಜಂಕ್ಷನ್‌‌‌ನಲ್ಲಿ  ಲಾರಿ ನಂಬ್ರ KA-19-5347 ನೇಯದರ ಚಾಲಕ ಸುಂದರನು  ತನ್ನ ಬಾಬ್ತು ಲಾರಿಯನ್ನು ಜೋಡು ರಸ್ತೆ - ಬಂಗ್ಲೆಗುಡ್ಡೆ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿ ಬಂಗ್ಲೆಗುಡ್ಡೆ ವೃತ್ತದಲ್ಲಿ ಪುಲ್ಕೇರಿ ಬೈಪಾಸ್ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಂಗ್ಲೆಗುಡ್ಡೆ ಕಡೆಯಿಂದ ಬಂಡಿಮಠ ಕಡೆಗೆ ಪಿರ್ಯಾದಿ ಧರ್ಮರಾಜ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋರಿಕ್ಷಾ ನಂಬ್ರ KA20A2403 ನೇಯದರ ಮುಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರಿಗೆ ಗಂಭೀರ ಸ್ವರೂಪದ ಹಾಗೂ ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 2 ಮಕ್ಕಳಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2015 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಿರ್ವಾ: ದಿನಾಂಕ: 03/06/2015 ರಂದು ಮಧ್ಯಾಹ್ನ 12:30 ಗಂಟೆಗೆ ಉಡುಪಿ ತಾಲೂಕು ಪಿಲಾರು ಗ್ರಾಮದ ಪೆರ್ನಾಲ್ ಎಂಬಲ್ಲಿ ಫಿರ್ಯಾದಿ ವಿನ್ಸೆಂಟ್‌ ನಿಕೋಲಸ್‌ ಡಿ’ಸೋಜಾ ಇವರು ಪಿಲಾರುಖಾನದ ಪ್ರಿನ್ಸ್ ಪಾಯಿಂಟ್ ಮನೆಯ ಹತ್ತಿರ ತನ್ನ ತಮ್ಮನ ಮನೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೆಳ್ಮಣ್ ಕಡೆಯಿಂದ ಶಿರ್ವಾ ಕಡೆಗೆ ಬರುತ್ತಿದ್ದ ಗೂಡ್ಸ್ ಲಾರಿ ನಂಬ್ರ ಕೆಎ 20 ಡಿ 4257 ನೇದರ ಚಾಲಕನು ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಬಂದು ಫಿರ್ಯಾದುದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದುದಾರರು ರಸ್ತೆದು ಬಿದ್ದು, ಬಲಕೈಗೆ ತೀವ್ರ ತರದ ಮೂಳೆಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/2015 ಕಲಂ 279338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಉಡುಪಿ: ದಿನಾಂಕ: 31/05/2015ರಂದು ಸಂಜೆ ಸುಮಾರು 17:00 ಗಂಟೆಯಿಂದ  ಶ್ರೀ ಕೃಷ್ಣ ಮಠದ ರಾಜಾಂಗಣ ಬಳಿಯಿರುವ ಪಾರ್ಕಿಂಗ್‌ನಲ್ಲಿ ವಾಹನವನ್ನು ಸುಸ್ಧಿತಿಯಲ್ಲಿಡುವ ಹಾಗೂ ಹಣ ವಸೂಲಿ ಮಾಡುವ ಕರ್ತವ್ಯಕ್ಕೆ ಪಿರ್ಯಾದಿ ಕೇತನ್ ಇವರು ಹಾಜರಾಗಿದ್ದು ರಾತ್ರಿ ಸುಮಾರು 22:15 ಗಂಟೆಗೆ ಓರ್ವ ರಿಕ್ಷಾ ಚಾಲಕನು ತನ್ನ ಬಾಬ್ತು ಕೆಎ 20 ಎ 2673 ನೇದರಲ್ಲಿ  ಅಲ್ಲಿಗೆ ಬಂದಿದ್ದು ಆತನು ಏಕಾಏಕಿ ಕೈಯಿಂದ ಫಿರ್ಯಾದಿದಾರರ ಕೆನ್ನೆಗೆ ಹೊಡೆದಿದ್ದು  ಆ ಸಮಯ ಅವರೊಳಗೆ ಉರುಳಾಟವಾಗಿದ್ದು  ಪರಿಣಾಮ ಫಿರ್ಯಾದಿದಾರರ ಎಡಕೈಯ ಮೊಣಗಂಟಿಗೆ ತರಚಿದ ಗಾಯ ಬಲಕಾಲಿನ ಸೊಂಟದ ಬಳಿ ಹಾಗೂ ಎದೆಯ ಬಳಿ ಗುದ್ದಿದ ನೋವುಂಟಾಗಿರುತ್ತದೆ ಸದ್ರಿ ಸಮಯ ಫಿರ್ಯಾದಿದಾರರ ಅಂಗಿ ಹರಿದು ಹೋಗಿರುತ್ತದೆ ರಿಕ್ಷಾ ಚಾಲಕನು ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ ಹಾಗೂ  ಪುನ: ರಿಕ್ಷಾ ಚಾಲಕನು ರಿಕ್ಷಾದಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಬಂದು ಫಿರ್ಯಾದಿದಾರರ ಕಡೆ  ಬೀಸಿರುತ್ತಾನೆ ಅಗ ಫಿರ್ಯಾದಿದಾರರು  ತಪ್ಪಿಸಿಕೊಂಡಿರುತ್ತಾರೆ. ಆ ಸಮಯದಲ್ಲಿ ಆರೋಪಿತ  ಗಣೇಶ್  ಭಟ್‌ ಎಂಬವರು ತನ್ನ ಬಾಬ್ತು ಇನೋವಾ ಕಾರಿನಲ್ಲಿ ಸದ್ರಿ ಪಾರ್ಕಿಂಗ್‌ ಸ್ಧಳದಿಂದ ಪಾಸಾಗಿರುತ್ತದೆ ಸದ್ರಿಯವರು ಈ ಕೃತ್ಯ ಮಾಡಿಸಿರಬಹುದಾಗಿರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 139/2015 ಕಲಂ 323, 506, 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಕೊಲ್ಲೂರು: ಪಿರ್ಯಾದಿ ಶಾಜಿತ್ ಪಿ.ಎಮ್  ಇವರು ದಿನಾಂಕ 03/06/15 ರಂದು ಪಿರ್ಯಾದಿದಾರ  ಬಾಬ್ತು  KA 02 MC 1920 MAHINDRA LOGAN ಕಾರನ್ನು ಕೊಲ್ಲೂರು ಗ್ರಾಮದ ಕಾಶಿ ಹೊಳೆಯ ಬಳಿ ಇರುವ ಖಾಲಿ ಜಾಗದಲ್ಲಿ ಕಾರನ್ನು ನಿಲ್ಲಿಸಿ ಕಾರಿಗೆ ಲಾಕ್ ಮಾಡಿ ಸಂಸಾರದೊಂದಿಗೆ ಧರ್ಮಪೀಠ ಆಶ್ರಮಕ್ಕೆ ನಡೆದುಕೊಂಡು ಹೋಗಿ ವಾಪಾಸು ಕಾರಿನ ಬಳಿ ಬಂದು ನೊಡಲಾಗಿ ಪಿರ್ಯಾದುದಾರರ ಬಾಬ್ತು ಕಾರಿನ ಎಡಬದಿಯ ಹಿಂದಿನ ಬಾಗಿಲಿನ ಗ್ಲಾಸನ್ನು  ಹಾನಿಗೈದು ಕಾರಿನ ಲಾಕ್ ತೆಗೆದು ಕಾರಿನ ಒಳಗಡೆ ಇಟ್ಟಿರುವ ಸುಮಾರು 38,000 ರೂ ಮೌಲ್ಯದ  ಸೋನಿ ಹ್ಯಾಂಡಿಕ್ಯಾಮ್  ಕ್ಯಾಮರ, 2 ನೋಕಿಯ ಮೊಬೈಲ್ ಇದರ ಅಂದಾಜು ಮೌಲ್ಯ ಸುಮಾರು 3500 ರೂ ಹಾಗೂ 300 ರೂ ಹಣವನ್ನು ಯಾರೋ ತೆಗೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/15 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ ೦3/06/2015  ರಂದು ಟಿ.ಆರ್. ಜೈಶಂಕರ ಪೊಲೀಸ್ ನಿರೀಕ್ಷಕರು ಡಿಸಿ ಐಬಿ ಉಡುಪಿ ಇವರಿಗೆ ಗಂಗೊಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ಬಳಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ  ಸದ್ರಿ ಸ್ಥಳಕ್ಕೆ  ಹೋಗಿ 16:2  ಗಂಟೆಗೆ  ದಾಳಿ ಮಾಡಿ ಆಪಾದಿತನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು  ಕೇಶವ ಶೆಟ್ಟಿಗಾರ್ (55) ತಂದೆ: ಮಹಾಲಿಂಗ ಶೆಟ್ಟಿಗಾರ ವಾಸ: ಕಂಬಾರ ಕೊಡ್ಲು ತ್ರಾಸಿ ಅಂಚೆ ಹೊಸಾಡು ಗ್ರಾಮ  ಕುಂದಾಪುರ ತಾಲೂಕು ಎಂಬುದಾಗಿ  ತಿಳಿಸಿರುತ್ತಾನೆ. ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣ ಒಟ್ಟು 4550 /- ರೂ ನಗದು, ಮಟ್ಕಾ ಚೀಟಿ ಹಾಗೂ ಬಾಲ್‌ ಪೆನ್‌ನ್ನು ಮಹಜರು ಮೂಲಕ  ಸ್ವಾಧೀನ ಪಡಿಸಿಕೊಂಡಿದ್ದು, ಈ ಬಗ್ಗೆ  ಗಂಗೊಳ್ಳಿ ಪೊಲೀಸ್ ಠಾಣಾ  ಅಪರಾಧ ಕ್ರಮಾಂಕ 82/2015 ಕಲಂ 78 (1) (111) ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಗಂಗೊಳ್ಳಿ: ದಿನಾಂಕ ೦3/06/2015  ಟಿ.ಆರ್. ಜೈಶಂಕರ ಪೊಲೀಸ್ ನಿರೀಕ್ಷಕರು ಡಿಸಿ ಐಬಿ ಉಡುಪಿ ಇವರಿಗೆ  ಗಂಗೊಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ತ್ರಾಸಿ ಗ್ರಾಮದ ತ್ರಾಸಿ ಕ್ಲಾಸಿಕ ಸಭಾಭವನದ ಬಳಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ  17:45  ಗಂಟೆಗೆ  ದಾಳಿ ಮಾಡಿ ಆಪಾದಿತನನ್ನು ಹಿಡಿದು ವಿಚಾರಿಸಲಾಗಿ  ಪ್ರಶಾಂತ ಭಂಡಾರಿ ತಂದೆ: ಗಣೇಶ ಭಂಡಾರಿ ವಾಸ: ಅರಾಟೆ ಹೊಸಾಡು ಗ್ರಾಮ ಕುಂದಾಪುರ ತಾಲೂಕು ಎಂಬುದಾಗಿ  ತಿಳಿಸಿರುತ್ತಾನೆ. ಮಟ್ಕ ಜುಗಾರಿ ಆಟದಿಂದ ಸಂಗ್ರಹಿಸಿದ ಹಣ ಒಟ್ಟು 1560/- ರೂ ನಗದು, ಮಟ್ಕಾ ಚೀಟಿ ಹಾಗೂ ಬಾಲ್‌ ಪೆನ್‌ನ್ನು ಮಹಜರು ಮೂಲಕ  ಸ್ವಾಧೀನ ಪಡಿಸಿಕೊಂಡಿದ್ದು, ಅಪಾದಿತ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ಹಣವನ್ನು ಮಂಜುನಾಥ ಭಂಡಾರಿ ತಂದೆ: ದಿ: ನಾರಾಯಾಣ ಭಂಡಾರಿ ತ್ರಾಸಿ ಗ್ರಾಮ ಈತನಿಗೆ ಕೊಡುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ  ಗಂಗೊಳ್ಳಿ ಪೊಲೀಸ್ ಠಾಣಾ  ಅಪರಾಧ ಕ್ರಮಾಂಕ 83/2015 ಕಲಂ 78 (1) (111) ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಗಂಗೊಳ್ಳಿ: ದಿನಾಂಕ ೦3/06 /2015  ರಂದು ಟಿ.ಆರ್. ಜೈಶಂಕರ ಪೊಲೀಸ್ ನಿರೀಕ್ಷಕರು ಡಿಸಿ ಐಬಿ ಉಡುಪಿ ಇವರಿಗೆ ಗಂಗೊಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ತ್ರಾಸಿ ಗ್ರಾಮದ ತ್ರಾಸಿ ಕ್ಲಾಸಿಕ ಸಭಾಭವನದ ಬಳಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ  17:45  ಗಂಟೆಗೆ  ದಾಳಿ ಮಾಡಿ ಆಪಾದಿತನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು  1.ರಾಜೇಶ ಸುವರ್ಣ (28) ತಂದೆ: ಸೀತಾರಾಮ ಸುವರ್ಣ ವಾಸ: ಯಕ್ಷೀಮಠ ಗುಂಡ್ಮಿ  ಉಡುಪಿ ತಾಲೂಕು ಇನ್ನೋರ್ವ ವ್ಯಕ್ತಿ ತನ್ನ ಹೆಸರು 2. ಈಶ್ವರ ಖಾರ್ವಿ (49) ತಂದೆ: ಗೋವಿಂದ ಖಾರ್ವಿ ವಾಸ: ನಾಯಕವಾಡಿ ಗುಜ್ಜಾಢಿ ಗ್ರಾಮ ಕುಂದಾಪುರ ತಾಲೂಕು ಎಂಬುದಾಗಿ  ತಿಳಿಸಿರುತ್ತಾರೆ . ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣ ಒಟ್ಟು 13380  /- ರೂ ನಗದು, ಮಟ್ಕಾ ಚೀಟಿ ಹಾಗೂ ಬಾಲ್‌ ಪೆನ್‌ನ್ನು ಮಹಜರು ಮೂಲಕ  ಸ್ವಾಧೀನ ಪಡಿಸಿಕೊಂಡಿದ್ದು, ಈ ಬಗ್ಗೆ  ಗಂಗೊಳ್ಳಿ ಪೊಲೀಸ್ ಠಾಣಾ  ಅಪರಾಧ ಕ್ರಮಾಂಕ 84/2015 ಕಲಂ 78 (1) (111) ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ದಿನಾಂಕ: 03/06/2015 ರಂದು 12.00 ಗಂಟೆಯಿಂದ 15.00 ಗಂಟೆಯ ಮದ್ಯದ ಅವಧಿಯಲ್ಲಿ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಆಕಾಶವಾಣಿ ಬೈಪಾಸ್ ಬಿರ್ತಿ ಕಡೆಗೆ ಹೋಗುವ ರಸ್ತೆಯ ಬಳಿ 29 ವರ್ಷ ಪ್ರಾಯದ ರಾಘವೇಂದ್ರ ಎಂಬವರು ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು ವಿಪರೀತ ಮದ್ಯಸೇವನೆ ಮಾಡಿ ಹೊಟ್ಟೆಗೆ ಸರಿಯಾಗಿ ಆಹಾರ ಸೇವಿಸದೆ ನಿಶ್ಯಕ್ತಿಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ : 29/15 ಕಲಂ. 174 ಸಿಆರ್‌ಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.        

No comments: