Wednesday, June 03, 2015

Daily Crimes Reported as On 03/06/2015 at 07:00 Hrs


ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ವಿಶ್ವನಾಥ ಶೆಟ್ಟಿ ಕುಂದಾಪುರ ಪೊಲೀಸ್‌ ಠಾಣೆರವರು ಮತ್ತು ಹೋಂ ಗಾರ್ಡ್ ರವೀಂದ್ರರವರು ದಿನಾಂಕ:01/06/2015ರಂದು  ಸಮವಸ್ತ್ರದಲ್ಲಿ  ಠಾಣಾ ವ್ಯಾಪ್ತಿಯ ಕಂಡ್ಲೂರು ಗ್ರಾಮದಲ್ಲಿ ತುರ್ತು ರಾತ್ರಿ  ಗಸ್ತು ಕರ್ತವ್ಯದಲ್ಲಿದ್ದು, 23:45 ಗಂಟೆಗೆ ಕಂಡ್ಲೂರು ಚೆಕ್‌ಪೋಸ್ಟ್ ಬಳಿ ತಲುಪಿದಾಗ ಆಪಾದಿತರಾದ ಅಫ್ಜಲ್ ಮತ್ತು ಇತರ ಮೂರು ಜನರು  KA 02 MJ 6910 ನಂಬರಿನ ಕಾರನ್ನು ನಿಲ್ಲಿಸಿಕೊಂಡು, ಕಾನೂನು ಸುವ್ಯವಸ್ಥೆಗೆ ಇರಿಸಿದ್ದ ಒಂದು ಬ್ಯಾರಿಕೇಡನ್ನು ಎತ್ತಿ ಮೋರಿಯ ದಂಡೆಯ ಮೇಲೆ ಇರಿಸಿ, ಇನ್ನೊಂದು ಬ್ಯಾರಿಕೇಡನ್ನು ಎತ್ತಿ ಎಸೆಯಲು ಪ್ರಯತ್ನಿಸುತ್ತಿದ್ದು, ವಿಶ್ವನಾಥ ಶೆಟ್ಟಿರವರು ತಡೆದಾಗ, ವಿಶ್ವನಾಥ ಶೆಟ್ಟಿ ಹಾಗೂ ರವೀಂದ್ರರವರ ಮೇಲೆ ಹಲ್ಲೆ ನಡೆಸಲು ಯತ್ನಿಸಿ ಸರ್ಕಾರಿ ಕರ್ತವ್ಯಕ್ಕೆ  ಅಡ್ಡಿಪಡಿಸಿದ್ದಲ್ಲದೇ, “ನಿನ್ನನ್ನು ಏನು ಮಾಡಬೇಕು ಎಂದು ನನಗೆ ಗೊತ್ತು, ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ವಿಶ್ವನಾಥ ಶೆಟ್ಟಿರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 224/15 ಕಲಂ: 353,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಬೈಂದೂರು:ದಿನಾಂಕ:02/06/2015 ರಂದು ಸಂತೋಷ ಎ. ಕಾಯ್ಕಿಣಿ ಪೊಲೀಸ್‌ ಉಪನಿರೀಕ್ಷಕರು, ಬೈಂದೂರು ಪೊಲೀಸ್‌ ಠಾಣೆರವರು ಬೈಂದೂರು ಠಾಣಾ ಸರಹದ್ದಿನ ಯಡ್ತರೆ ಜಂಕ್ಷನ್‌ ಸಮೀಪ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಗಿನ ಜಾವ 04:30 ಗಂಟೆಗೆ ಬಾತ್ಮೀದಾರರೊಬ್ಬರು ಕರೆ ಮಾಡಿ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಹತ್ತಿರ ಒಬ್ಬ ವ್ಯಕ್ತಿ ಕರವಸ್ತ್ರದಿಂದ ಮುಖವನ್ನು ಮುಚ್ಚಿಕೊಂಡು ತಿರುಗಾಡುತ್ತಿರುವ ಬಗ್ಗೆ ತಿಳಿಸಿದ್ದು ಪಿಎಸ್‌ಐರವರು 04:40 ಗಂಟೆಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಹತ್ತಿರ ಒಬ್ಬ ವ್ಯಕ್ತಿ ಕರವಸ್ತ್ರದಿಂದ ಮುಖವನ್ನು ಮುಚ್ಚಕೊಂಡು ನಿಂತುಕೊಂಡಿದ್ದು, ಸಮವಸ್ತ್ರದಲ್ಲಿದ್ದ ಪಿಎಸ್‌ಐರವರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು ಬೆಳಿಗ್ಗೆ 04:45 ಗಂಟೆಗೆ ಸುತ್ತುವರೆದು ಹಿಡಿದು ವಿಚಾರಿಸಿದಾಗ ಆತನು ತನ್ನ ಹೆಸರನ್ನು ತಪ್ಪುತಪ್ಪಾಗಿ ಹೇಳಿದ್ದು ಹಾಗೂ ಆತನ ಇರುವಿಕೆಯ ಬಗ್ಗೆ ಸರಿಯಾದ ಕಾರಣವನ್ನು ತಿಳಿಸದ ಕಾರಣ ಆತನು ಅಪರಾತ್ರಿಯಲ್ಲಿ ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ತನ್ನ ಮುಖವನ್ನು ಕರವಸ್ತ್ರದಿಂದ ಮರೆ ಮಾಚಿಕೊಂಡಿದ್ದು ಆತನನ್ನು ದಸ್ತಗಿರಿ ಮಾಡಲಾಗಿದೆ. ಆತನ ಹೆಸರು ಮಾಲ್ತೇಶ ಬರ್ಕೇರ (30) ತಂದೆ:ಮೂಕಪ್ಪ ಬರ್ಕೇರ ವಾಸ:ಕಚ್ವಿ ಪೋಸ್ಟ & ಗ್ರಾಮ, ಹಿರೆಕೆರೂರು ತಾಲೂಕು ಹಾವೇರಿ ಜಿಲ್ಲೆಯಾಗಿದೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 157/2015 ಕಲಂ:96 (ಬಿ) ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಹಲ್ಲೆ ಪ್ರಕರಣ
  • ಕುಂದಾಪುರ:ದಿನಾಂಕ:01.06.2015 ರಂದು 18:30 ಗಂಟೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ಪಿರ್ಯಾದಿದಾರರಾದ ಕಮಲಾಕ್ಷ ಶೇಟ್‌ (70) ತಂದೆ: ಹೆರಿಯಣ್ಣ ಶೇಟ್‌ ತಂದೆ: ಪದ್ಮ ಕಮಲಾ ನಿಲಯ, ಮುಳ್ಳುಗುಡ್ಡೆ, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕುರವರು ವಾಸ್ತವ್ಯವಿರುವ ಮನೆಯ ಅಂಗಳಕ್ಕೆ ಆಪಾದಿತರುಗಳಾದ ಮಂಜುನಾಥ ದೇವಾಡಿಗ, ಪ್ರಶಾಂತ ದೇವಾಡಿಗ, ಜಗನ್ನಾಥ ದೇವಾಡಿಗ & ಶ್ರೀನಾಥ ದೇವಾಡಿಗ. ಇವರುಗಳು ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ, ಕಮಲಾಕ್ಷ ಶೇಟ್‌ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಕುತ್ತಿಗೆಯನ್ನು ದೂಡಿ, ದೊಣ್ಣೆ, ಕಲ್ಲನ್ನು ತರುವಾಗ  ಕಮಲಾಕ್ಷ ಶೇಟ್‌ರವರ ಮಗ ಬರುವುದನ್ನು ನೋಡಿ ಆಪಾದಿತರು ಅಲ್ಲಿಂದ ಹೋಗಿರುತ್ತಾರೆ. ಈ ಘಟನೆಗೆ ಕಮಲಾಕ್ಷ ಶೇಟ್‌ ರವರ ಮನೆಯ ನಾಯಿ ಅಕ್ಕಪಕ್ಕದ ಮನೆಯ ದನ ಕರುಗಳನ್ನು ಓಡಿಸಿಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಕಮಲಾಕ್ಷ ಶೇಟ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 223/2015 ಕಲಂ:447, 323, 504 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಉಡುಪಿ ಸಂಚಾರ:ದಿನಾಂಕ:02/06/2015 ರಂದು ಪಿರ್ಯಾದಿದಾರರಾದ ಸುನೀಲ್ ಪೂಜಾರಿ (27) ತಂದೆ:ಕೃಷ್ಣ ಪೂಜಾರಿ ವಾಸ: ಸುನೀತಾ ನಿಲಯ ಯಡ್ಜೆ,ಕಾರ್ಕಳ, ಉಡುಪಿರವರು ತನ್ನ ಬೈಕ್‌ ನಂಬ್ರ ಕೆಎ 20 ಇಸಿ 6643 ನೇದರಲ್ಲಿ ಆನಂದ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೆಳಿಗ್ಗೆ ಸುಮಾರು 8:30 ಗಂಟೆಗೆ ಬಲಾಯಿಪಾದೆ ಜಂಕ್ಷನ್‌ನಲ್ಲಿ ಬರುತ್ತಿರುವಾಗ್ಗೆ ಕೊರಂಗ್ರಪಾಡಿ ಜಂಕ್ಷನ್‌ನಿಂದ ಬಲಾಯಿಪಾದೆಗೆ ಕೆಎ 20 ಸಿ 5449 ನೇ ನಂಬ್ರದ ಬಸ್ಸು ಬಲಬದಿಯಿಂದ ಬಂದು ಒಮ್ಮೆಲೇ ಸುನೀಲ್ ಪೂಜಾರಿರವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರೂ ಬಿದ್ದು ಸುನೀಲ್ ಪೂಜಾರಿರವರಿಗೆ ಬಲ ಕಾಲಿಗೆ ಗಾಯ ಹಾಗೂ ಎಡ ಕಾಲಿಗೆ ಮೂಳೆ ಮುರಿತ, ಗಾಯ ಹಾಗೂ ತಲೆಗೆ ತರಚಿದ ಗಾಯವಾಗಿರುತ್ತದೆ. ಬೈಕ್‌  ಸಹಸವಾರ ಆನಂದ ಪೂಜಾರಿಯವರ ತಲೆಗೆ ಗಾಯವಾಗಿರುತ್ತದೆ ಮತ್ತು ಎಡ ಕಾಲಿನ ಮೂಳೆ ಮುರಿತ ಮತ್ತು ಬಲ ಭುಜಕ್ಕೆ ಗಾಯವಾಗಿರುತ್ತದೆ. ಗಾಯಾಳುಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಅಪಘಾತಕ್ಕೆ ಕೆಎ 20 ಸಿ 5449  ನೇ ಬಸ್‌ ಚಾಲಕ ಪ್ರಶಾಂತ್‌ ರವರ ನಿರ್ಲಕ್ಷತನ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಸುನೀಲ್ ಪೂಜಾರಿರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ  ಕ್ರಮಾಂಕ  59/2015 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ದಯಾನಂದ ಎಂ ಕೋಟ್ಯಾನ್ ತಂದೆ:ಮಾಧವ ಕೋಟ್ಯಾನ್ ವಾಸ: ಭಾರತಿ ಭವನ ಹಳೆ ಪೋಸ್ಟ್ ಆಫೀಸಿನ ಹತ್ತಿರ ಮಲ್ಪೆ, ಕೊಡವೂರು,ಉಡುಪಿರವರು ದಿನಾಂಕ:01/06/2015 ರಂದು ತನ್ನ ಮೋಟಾರ್ ಸೈಕಲ್ ನಂಬ್ರ ಕೆಎ-20 ಇಜಿ-4969 ನೇದರಲ್ಲಿ ವರುಣ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳರಿಸಿಕೊಂಡು ಮಲ್ಪೆ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ರಾತ್ರಿ ಸುಮಾರು 09:00 ಗಂಟೆಗೆ ಪಂದುಬೆಟ್ಟು ದುರ್ಗಾ ಕಾಂಪ್ಲೆಕ್ಸ್ ಎದುರು ತಲುಪುವಾಗ ಉಡುಪಿ ಕರಾವಳಿ ಕಡೆಯಿಂದ ಮಲ್ಪೆ ಕಡೆಗೆ ಕೆಎ 20 ಬಿ 5202 ನೇ ಗೂಡ್ಸ್ ಟೆಂಪೊ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ದಯಾನಂದ ಎಂ ಕೋಟ್ಯಾನ್‌ರವರ ಮೋಟಾರ್ ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ದಯಾನಂದ ಎಂ ಕೋಟ್ಯಾನ್‌ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಹಿಂಬದಿ ಸವಾರ ವರುಣ್‌ನಿಗೆ ಎಡಭುಜಕ್ಕೆ ಮತ್ತು ಎದೆಗೆ ಗುದ್ದಿದ  ಒಳ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಉಡುಪಿ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ದಯಾನಂದ ಎಂ ಕೋಟ್ಯಾನ್‌ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 60/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ:ದಿನಾಂಕ:01.06.2015 ರಂದು 16:00 ಗಂಟೆಗೆ ನಡ್ಸಾಲು ಗ್ರಾಮದ ಬೀಡು ಬಳಿಯ ಗಾಣಿಗ ಆಯಿಲ್ ಮಿಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಎ 19 ಎ 3487 ನೇ ಮೆಟಡೋರ್ ಟೆಂಪೋದ ಚಾಲಕ ಮೆಟಡೋರ್ ಟೆಂಪೋವನ್ನು ಹೆಜಮಾಡಿ ಕಡೆಯಿಂದ ಪಡುಬಿದ್ರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟೆಂಪೋದ ಮುಂದುಗಡೆ ಪಡುಬಿದ್ರಿ ಕಡೆಗೆ ಪಿರ್ಯಾದಿದಾರರಾದ ಉಮೇಶ್ ಕೆ (38) ತಂದೆ:ಗಣಪತಿ ಆಚಾರ್ಯ, ವಾಸ:ಗಾಯತ್ರಿ ನಿಲಯ, ಪೋಕು ಹೌಸ್, ಮಂಚಿ ಪೋಸ್ಟ್, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 19 ಯು 4143 ನೇ ಮೋಟಾರು ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ಸವಾರರು ಡಾಮಾರು ರಸ್ತೆಗೆ ಬಿದ್ದು ಭುಜದ ಬಲಭಾಗಕ್ಕೆ, ಹಣೆಗೆ, ಮುಖಕ್ಕೆ, ಬಲಕಾಲಿನ ಗಂಟಿಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಮೆಟಡೋರ್ ಚಾಲಕ ಟೆಂಪೋವನ್ನು ಸ್ವಲ್ಪ ಹೊತ್ತು ನಿಲ್ಲಿಸಿ ನಂತರ ಅಲ್ಲಿಂದ ಹೋಗಿರುತ್ತಾರೆ.ಈ ಬಗ್ಗೆ ಉಮೇಶ್ ಕೆ.ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 78/15 ಕಲಂ: 279, 337 ಐ.ಪಿ.ಸಿ. 134 (ಎ) (ಬಿ) ಜೊತೆಗೆ 187 ಐ.ಎಂ.ವಿ. ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     

No comments: