Tuesday, June 02, 2015

Daily Crimes Reported as On 02/06/2015 at 19:30 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಶಿರ್ವಾ:ದಿನಾಂಕ:02/06/2015 ರಂದು ಬೆಳಿಗ್ಗೆ 09:00 ಗಂಟೆಯಿಂದ ಮಧ್ಯಾಹ್ನ 13:00 ಗಂಟೆಯ ಅವಧಿಯಲ್ಲಿ ಉಡುಪಿ ತಾಲೂಕು ಪಿಲಾರು ಗ್ರಾಮದ ಹಲಸಿನಕಟ್ಟೆಯ ಶ್ರೀ ಸನ್ನಿಧಿ ಎಂಬಲ್ಲಿನ ನಿವಾಸಿಯಾಗಿರುವ ಪಿರ್ಯಾದಿದಾರರಾದ ರಮೇಶ್, ತಂದೆ:ಅಂತು ಮುಗ್ಗೇರ, ವಾಸ: ಶ್ರೀ ಸನ್ನಿಧಿ, ಹಲಸಿನಕಟ್ಟೆ, ಪಿಲಾರು ಗ್ರಾಮರವರ ತಂದೆ ಸುಮಾರು ವಯೋವೃದ್ಧರಾದ ಅಂತು ಮೊಗೇರ (70) ಎಂಬವರು ಹೊಟ್ಟೆಉರಿ ಹಾಗೂ ಬಿ.ಪಿ ಯಿಂದ ಬಳಲುತ್ತಿದ್ದು, ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬಚ್ಚಲು ಕೋಣೆಯ ಮಾಡಿನ ಪಕ್ಕಾಸಿನ ರೀಪಿಗೆ ಲುಂಗಿ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ರಮೇಶ್‌ರವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 10/2015 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: