Tuesday, June 02, 2015

Daily Crimes Reported as On 02/06/2015 at 17:00 Hrs


ಮನುಷ್ಯ ಕಾಣೆ ಪ್ರಕರಣ

  • ಉಡುಪಿ ನಗರ:ಪಿರ್ಯಾದಿದಾರರಾದ ರಾಕೇಶ್ ನಾಯಕ್ ತಂದೆ:ದಿವಂಗತ ಗೋವಿಂದ ನಾಯಕ್, ವಾಸ:ನೇತ್ರಾವತಿ ನಿಲಯ, ಮರ್ನೆ ಗ್ರಾಮ ಮತ್ತು ಅಂಚೆ, ಉಡುಪಿರವರ ಅಣ್ಣ ರವಿ ನಾಯಕ್‌ (38) ರವರು ದಿನಾಂಕ:31/05/2015ರಂದು ಅಜ್ಜರಕಾಡು ಸರಕಾರಿ ಆಸ್ಪತ್ರೆಯಿಂದ 11:00 ಗಂಟೆಗೆ ಡಿಸ್‌ಚಾರ್ಚ್ ಆಗಿ ಅಸ್ಪತ್ರೆಯಿಂದ ಹೊರಗೆ ಬಂದು ಚಾ ಕುಡಿದು ಬರುತ್ತೇನೆ ಎಂದು ಹೋದವರು ಈವರೆಗೆ ವಾಪಸ್ಸು ಬಾರದೇ ಕಾಣೆಯಾಗಿದ್ದು, ಅವರ ಪತ್ತೆ ಬಗ್ಗೆ ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ರಾಕೇಶ್ ನಾಯಕ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 138/2015 ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ:ವಾಸುದೇವ ಖಾರ್ವಿ ಯಾನೆ ವಾಸು ಖಾರ್ವಿ (45) ತಂದೆ:ದಿವಂಗತ ಗೋಪಿ ಖಾರ್ವಿ, ವಾಸ:ಬೇಲಿಕೆರೆ, ಗಂಗೊಳ್ಳಿ ಗ್ರಾಮ ಎಂಬವರಿಗೆ ಯಾರೂ ಸಂಬಂಧಿಕರಿಲ್ಲದೇ ಇದ್ದು, ಪಿರ್ಯಾದಿದಾರರಾದ ಮಾಧವ ಖಾರ್ವಿ (50) ತಂದೆ:ನಾರಾಯಣ ಖಾರ್ವಿ, ವಾಸ:ದೊಡ್ಡಹಿತ್ಲು, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕುರವರೊಂದಿಗೆ ಕೆಲಸ ಮಾಡಿಕೊಂಡಿದ್ದು, ಸದ್ರಿಯವರಿಗೆ ಮೂರ್ಛೆ ರೋಗವಿದ್ದು, ಮಧ್ಯಪಾನ ಮಾಡುವ ಚಟವಿದ್ದು, ದಿನಾಂಕ:28/05/2015 ರಂದು ಬೆಳಿಗ್ಗೆ 11:00 ಗಂಟೆಗೆ ಗಂಗೊಳ್ಳಿ ಬಂದರ್‌ನಲ್ಲಿ ಹಳೆಯ ಕಸ್ಟಮ್‌ ಕಚೇರಿ ಎದುರುಗಡೆ ಮೂರ್ಛೆ ತಪ್ಪಿ ನೆಲದ ಮೇಲೆ ಬಿದ್ದಿದ್ದು, ತಕ್ಷಣ ಉಪಚರಿಸಿ, ನಾಗೇಶ ಖಾರ್ವಿ ಹಾಗೂ ಇತರರು ಕುಂದಾಪುರ ಸರ್ಕಾರಿ ಆಸ್ಪತ್ರೆಗೂ ಬಳಿಕ ಮಂಗಳೂರು ವೆನ್‌ಲಾಕ್‌‌ ಆಸ್ಪತ್ರೆಗೂ ಚಿಕಿತ್ಸೆ ಬಗ್ಗೆ ಸೇರಿಸಿದ್ದು, ದಿನಾಂಕ:01/06/2015 ರಂದು ಸಂಜೆ 7:15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಸದ್ರಿಯವರ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಮಾಧವ ಖಾರ್ವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 09/2015 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರ್ರಣ ದಾಖಲಿಸಿಕೊಳ್ಳಲಾಗಿದೆ.

No comments: