Tuesday, June 02, 2015

Daily Crimes Reported as On 02/06/2015 at 07:00 Hrsಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ: 01/06/2015 ರಂದು 14:00  ಗಂಟೆಯ ಸಮಯಕ್ಕೆ ಉಡುಪಿ ತಾಲೂಕು , ವಾರಂಬಳ್ಳಿ ಗ್ರಾಮದ , ಮಹೇಶ್ ಆಸ್ಪತ್ರೆಯ ಎದುರು ರಾ.ಹೆ 66 ರಲ್ಲಿ ಆರೋಪಿ ಅಬ್ದುಲ್ ರಹಿಮ್, ಕೆಎ-47-ಎಮ್-3199 ಮಾರುತಿ ಸುಜಿಕಿ ವ್ಯಾಗನರ್ ಚಾಲಕ ತನ್ನ ಬಾಬ್ತು ಕೆಎ-47-ಎಮ್‌-3199 ನೇ ಮಾರುತಿ ವ್ಯಾಗನರ್ ಕಾರನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಎಡಬದಿಗೆ  ಚಲಾಯಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ಬಿ.ಜೆ ಭಂಡಾರಿರವರಿಗೆ ಡಿಕ್ಕಿ ಹೊಡೆದ ಪರಿಣಾಮ, ತೀವ್ರ ಸ್ವರೂಪದ ಗಾಯಗೊಂಡು, ಅವರನ್ನು ಚಿಕಿತ್ಸೆಗೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಫಲಕಾರಿಯಾಗದೇ  15:40 ಗಂಟೆಗೆ ಮೃಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 105/15 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕುಂದಾಪುರ: ದಿನಾಂಕ 01/06/2015 ರಂದು ಸಮಯ ಸುಮಾರು ಸಂಜೆ 5:00 ಗಂಟೆಗೆ ಕುಂದಾಪುರ  ತಾಲೂಕು ತಲ್ಲೂರು  ಗ್ರಾಮದ ತಲ್ಲೂರು  ಜಂಕ್ಷನ್ ಬಳಿ, ಸಹದೇವಿ  ಶಾಮಿಯಾನ ಅಂಗಡಿಯ  ಎದುರುಗಡೆ   ರಸ್ತೆಯಲ್ಲಿ,  ಆಪಾದಿತ ಹೆಚ್‌. ಕರುಣಾಕರ ಎಂಬವರು KA20-C-2938ನೇ ಟಾಟಾ ಮ್ಯಾಜಿಕ್ ವಾಹನವನ್ನು ನೇರಳಕಟ್ಟೆ  ಕಡೆಯಿಂದ ತಲ್ಲೂರು  ಕಡೆಗೆ ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ರಸ್ತೆಯ ಬಲಬದಿಗೆ ಬಂದು ತಲ್ಲೂರು ಕಡೆಯಿಂದ ನೇರಳಕಟ್ಟೆ ಕಡೆಗೆ ಮೊಹಮ್ಮದ್ ನವಾಫ್ (13ವರ್ಷ) ಎಂಬವನು ಸವಾರಿ  ಮಾಡಿಕೊಂಡು  ಹೋಗುತ್ತಿದ್ದ  ಸೈಕಲ್ಗೆ  ಎದುರಿನಿಂದ  ಡಿಕ್ಕಿ ಹೊಡೆದ  ಪರಿಣಾಮ ಮೊಹಮ್ಮದ್ ನವಾಫ್  ಸೈಕಲ್  ಸಮೇತ  ರಸ್ತೆಯಲ್ಲಿ  ಬಿದ್ದು  ಅವನ ಎಡಕಾಲಿನ ಮುಂಗಾಲು  ಗಂಟಿನ ಕೆಳಗೆ ಕೋಲುಕಾಲಿಗೆ, ಬಲ ಕಾಲಿನ ಮುಂಗಾಲು ಗಂಟಿಗೆ,  ಎಡ ಮೊಣ ಕೈ ಗಂಟಿನ ಬಳಿ  ರಕ್ತಗಾಯ  ಹಾಗೂ  ಒಳ  ನೋವು ಉಂಟಾಗಿ  ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ   ಚಿಕಿತ್ಸೆ ಬಗ್ಗೆ  ದಾಖಲಾಗಿರುತ್ತಾನೆ.  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/15  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಉಡುಪಿ:  ಪಿರ್ಯಾದಿ ಭಾಸ್ಕರ್ ಭಂಡಾರಿ ಇವರು ದಿನಾಂಕ 01/06/2015 ರಂದು ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ರಾಜ್ ಟವರ್‌ನ ಎದುರು ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದುದಾರರ ಹಿಂದಿನಿಂದ ಅಂದರೆ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆಗೆ ಹೋಗುತ್ತಿದ್ದ ಕೆಎಲ್-56 ಹೆಚ್-7211 ನೇ ಕಾರಿನ ಚಾಲಕ ರಾಕೇಶ್ ಸುಧೀರ್ ಎಂಬವರು ಅತೀವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ತಲೆಗೆ ರಕ್ತಗಾಯವಾಗಿದ್ದು, ಕೈ ಕಾಲುಗಳಿಗೆ ತರಚಿದ ಗಾಯಗಳಾಗಿರುವುದಾಗಿದೆ, ಕೂಡಲೇ ಅದೇ ಕಾರಿನ ಚಾಲಕ ಮತ್ತು ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಉಡುಪಿ ಗಾಂಧಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ . ಈ ಬಗ್ಗೆ ಉಡುಪಿ  ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/15  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

  • ಕೋಟ: ಪಿರ್ಯಾದಿ ಮಹೇಶ ಇವರು ದಿನಾಂಕ:31/05/2015 ರಂದು ರಾತ್ರಿ 9:00 ಗಂಟೆಗೆ ಉಡುಪಿ ತಾಲೂಕು ಬಿಲ್ಲಾಡಿ ಗ್ರಾಮದ ಬಿಜ್ಜಾಡಿ ಎಂಬಲ್ಲಿರುವ ತನ್ನ ಮನೆಯಲ್ಲಿರುವಾಗ ಅವರ ನೆರೆ ಮನೆಯ ಶಂಭು ಶೆಟ್ಟಿ ಎಂಬುವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದುದನ್ನು ಕೇಳಿ ಮನೆಯ ಹೊರಗೆ ಬಂದಾಗ ಶಂಭು ಶೆಟ್ಟಿ, ಕರುಣಾಕರ,ಜ್ಯೋತಿ ಶೆಟ್ಟಿಯವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ  ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಪಿರ್ಯಾದಿದಾರರು ಬಿದ್ಕಲ್‌ಕಟ್ಟೆ  ಸರಕಾರಿ ಆಸತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 135/14 ಕಲಂ:341, 504, 323, 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕೊಲ್ಲೂರು: ಪಿರ್ಯಾದಿ ರವೀಂದ್ರ ಎಸ್. ನಾಯ್ಕ    ಇವರು ದಿನಾಂಕ 31/05/15 ರಂದು ತನ್ನ  ಬಾಬ್ತು ಆಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ಬಗ್ವಾಡಿಯಿಂದ ವಂಡ್ಸೆ ಮಾರ್ಗವಾಗಿ ಮಾರಣಕಟ್ಟೆಗೆ ಹೋಗುತ್ತಿರುವಾಗ ವಂಡ್ಸೆಯ ಕೊರವಡಿ ಬಳಿ ದಾರಿಯಲ್ಲಿ ಸಂಜೆ ಸಮಯ ಆರೋಪಿತ 1.ಶಂಕರ ಪೂಜಾರಿ 2.ಅಶೋಕ ಪೂಜಾರಿ 3.ಸಂತೋಷ ಪೂಜಾರಿ ಕೆಪಿ. 4. ಸಂತೋಷ ಪೂಜಾರಿ ಡಿ.   5. ನಾಗರಾಜ ಡಿ. 6. ರಮೇಶ ಪೂಜಾರಿ 7.  ರಾಜು ಪೂಜಾರಿ ಮೇಲ್ಮನೆ,  8.ಸಂಜೀವ ಪೂಜಾರಿ ಕಾನ್ಮಕ್ಕಿ  9.ಗಜೇಂದ್ರ ನಾಯಕ್  10. ರಂಜಿತ್ ದೇವಾಡಿಗ ನೂಜಾಡಿ 11. sಸಂದೀಪ ಹಾಗೂ ಇತರರು 4 ಜನರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ನಿನ್ನನ್ನು ಸಾಯಿಸುತ್ತೇವೆ ಎಂದು ಕೂಗಿದ್ದು ನಂತರ ಪಿರ್ಯಾದಿದಾರರು ಪ್ರಯಾಣಿಕರನ್ನು ಮಾರಣಕಟ್ಟೆ ದೇವಸ್ಥಾನಕ್ಕೆ ಬಿಟ್ಟು ಬಳಿಕ ಪ್ರಯಾಣಿಕರು ದೇವರ ದರ್ಶನ ಮಾಡಿ ರಿಕ್ಷಾ ಹತ್ತುವಾಗ ಸಂಜೆ ಸುಮಾರು 17;45 ಗಂಟೆಗೆ ಆರೋಪಿಗಳ ಪೈಕಿ ರಂಜಿತ ದೇವಾಡಿಗ, ಸಂದೀಪ ದೇವಾಡಿಗ, ಸಂತೋಷ ಆಲ್ಲದೇ ಇತರ ನಾಲ್ಕು ಜನ ಅಪರಿಚಿತರು ಸೇರಿ ರಿಕ್ಷಾದ ಬಳಿ ಬಂದು ಪಿರ್ಯಾದಿದಾರರನ್ನು ರಿಕ್ಷಾದಿಂದ ಹೊರಗೆ ಎಳೆದು ದೊಣ್ಣೆಯಿಂದ ಹೊಡೆದಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/15 ಕಲಂ; 143, 147,148, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಪಡುಬಿದ್ರಿ: ದಿನಾಂಕ 31.05.2015 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಪ್ರಕಾಶ ಆಚಾರಿ ಇವರು ಅವರ ಮನೆಯ ಜಗಲಿಯಲ್ಲಿ ಕೆಲಸ ಮಾಡಿಕೊಂಡಿರುವಾಗ ಅವರ ಮನೆಯ ಪಕ್ಕದಲ್ಲಿ ವಾಸವಾಗಿರುವ ಅವರ ಚಿಕ್ಕಪ್ಪ ಲಿಂಗಪ್ಪ ಆಚಾರಿ ಇವರು ಅಲ್ಲಿಗೆ ಬಂದು ಪಿರ್ಯಾದುದಾರರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿದ್ದ ಮರದ ಸೊಂಟೆಯಿಂದ ಪಿರ್ಯಾದುದಾರರ ಸೊಂಟಕ್ಕೆ, ಬಲಗಾಲಿನ ಮೊಣಕಾಲಿಗೆ, ಮತ್ತು ಎಡ ಮುಂಗೈಗೆ ಹೊಡೆದು ಹಲ್ಲೆ ನಡೆಸಿದ್ದು ಈ ವೇಳೆ ಅಲ್ಲಿಗೆ ಬಂದ ಪಿರ್ಯಾದಿಯ ಹೆಂಡತಿಯನ್ನು ನೋಡಿ ಆರೋಪಿಯು ಸೊಂಟೆಯನ್ನು ಅಲ್ಲಿಯೆ ಬಿಸಾಡಿ ನಿನ್ನನ್ನು ಮುಂದಕ್ಕೆ ನೋಡುತ್ತೇನೆ ಎಂದು ಜೀವ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೋಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/15 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಜುಗಾರಿ ಪ್ರಕರಣ

  • ಬೈಂದೂರು: ದಿನಾಂಕ 01-06-2015 ರಂದು ಸಂಜೆ 04:30 ಗಂಟೆಗೆ ಸಂತೋಷ ಎ ಕಾಯ್ಕಿಣಿ ಪೊಲೀಸ್‌ ಉಪನಿರೀಕ್ಷಕರು ಬೈಂದೂರು ಪೊಲೀಸ್‌ ಠಾಣೆ   ಇವರಿಗೆ ಕುಂದಾಪುರ ತಾಲೂಕು ಯಡ್ತರೆ  ಗ್ರಾಮದ ಹೊಸ ಬಸ್‌ ನಿಲ್ದಾಣದ ಹಳೆಯ ಕಟ್ಟಡದ ಹಿಂಭಾಗದಲ್ಲಿ  ಸಾರ್ವಜನಿಕ  ಸ್ಥಳದಲ್ಲಿ  ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಭಾತ್ಮೀದಾರರೊಬ್ಬರು ನೀಡಿದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್‌ ಜುಗಾರಿ ಆಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಂಜೆ 05:00 ಗಂಟೆಗೆ ದಾಳಿ ನಡೆಸಿ  3 ಜನ ಆರೋಪಿತ ರಾದ 1) ನಾರಾಯಣ ಪ್ರಾಯ: 30 ವರ್ಷ ತಂದೆ: ಆಂಜನೇಯ ವಾಸ: ಯೋಜನ ನಗರ ಯಡ್ತರೆ ಗ್ರಾಮ 2) ರಘು ಎನ್‌ ಪೂಜಾರಿ ಪ್ರಾಯ: 36 ವರ್ಷ ತಂದೆ: ನಾಗೇಂದ್ರ ಪೂಜಾರಿ ವಾಸ: ಯೋಜನ ನಗರ ಯಡ್ತರೆ ಗ್ರಾಮ 3) ಸತೀಶ್‌ ಪೂಜಾರಿ ಪ್ರಾಯ: 28 ವರ್ಷ ತಂದೆ: ಕೃಷ್ಣ ಪೂಜಾರಿ ವಾಸ: ಯೋಜನ ನಗರ ಯಡ್ತರೆ ಇವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ 1) ಹಳೆಯ ದಿನಪತ್ರಿಕೆ-1 2) 52 ಇಸ್ಪೀಟ್ ಎಲೆಗಳು 3) ನಗದು ರೂ 1000/- ಅನ್ನು ಸ್ವಾಧೀನಪಡಿಸಿಕೊಂಡು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 156/2015 ಕಲಂ 87 ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿದೆ.

No comments: