Monday, June 01, 2015

Daily Crimes Reported as On 01/06/2015 at 17:00 Hrs


ಹಲ್ಲೆ ಪ್ರಕರಣಗಳು
  • ಗಂಗೊಳ್ಳಿ:ಪಿರ್ಯಾದಿದಾರರಾದ ಕಿರಣ್‌ ಜಿ.ಎಸ್‌ ಖಾರ್ವಿ, ತಂದೆ:ಸೂರ್ಯ ಖಾರ್ವಿ, ಕೋಡಿಕಾರ್‌ ಮನೆ, ದಾಖುಹಿತ್ಲು, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರು ದಿನಾಂಕ 31/05/2015 ರಂದು 18:30 ಗಂಟೆಗೆ ಗಂಗೊಳ್ಳಿ ಎಸ್‌.ವಿ ಕಾಲೇಜು ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿರುವಾಗ ಆಪಾದಿತ ಪ್ರಶಾಂತ ಖಾರ್ವಿ ತಂದೆ:ಬಸವ ಖಾರ್ವಿ, ಗಂಗೊಳ್ಳಿ ಗ್ರಾಮ ಎಂಬವನು ಕಿರಣ್‌  ಜಿ.ಎಸ್‌ ಖಾರ್ವಿರವರ ಬಳಿ ಬಂದು “ಮದುವೆ ಮನೆಯಲ್ಲಿ ನಿನ್ನ ಯಜಮಾನಿಕೆ ಏನು” ಎಂಬುದಾಗಿ ಹೇಳಿ ಕೈಯಲ್ಲಿ ಹಿಡಿದುಕೊಂಡು ಬಂದ ಕ್ರಿಕೆಟ್‌ ಬ್ಯಾಟಿನಿಂದ ಕಿರಣ್‌  ಜಿ.ಎಸ್‌ ಖಾರ್ವಿರವರ ಎಡಭಾಗದ ಹೊಟ್ಟೆಗೆ, ಸೊಂಟದ ಮೇಲ್ಬಾಗ ಹಾಗೂ ಇತರ ಭಾಗಗಳಲ್ಲಿ ಹೊಡೆದು ನೋವುಂಟು ಮಾಡಿರುತ್ತಾರೆ. ಗಾಯಗೊಂಡ ಕಿರಣ್. ಜಿ.ಎಸ್‌ ಖಾರ್ವಿಯವರು ಚಿಕಿತ್ಸೆ ಬಗ್ಗೆ ಕುಂದಾಫುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಗಲಾಟೆಗೆ ದಿನಾಂಕ 30/05/2015 ರಂದು ಸಂಬಂಧಿಕರ ಮನೆಯ ಮದುವೆ ಸಮಾರಂಭದಲ್ಲಿ ಮದುವೆಯ ಫೋಟೊ ತೆಗೆಯುವ ವಿಚಾರದಲ್ಲಿ ನಡೆದ ವೈಮನಸ್ಸೆ ಕಾರಣವಾಗಿರುತ್ತದೆ. ಈ ಬಗ್ಗೆ ಕಿರಣ್‌ ಜಿ.ಎಸ್‌ ಖಾರ್ವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 80/2015 ಕಲಂ:324, 504, 506, ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಅಜೆಕಾರು:ದಿನಾಂಕ:29/05/2015 ರಂದು ಬೆಳಿಗ್ಗೆ 9:00 ಗಂಟೆಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಎಣ್ಣೆಹೊಳೆ ಚೇಳಿಬೆಟ್ಟು ಎಂಬಲ್ಲಿ ಆರೋಪಿತರುಗಳಾದ 1)ಪ್ರಭಾಕರ ಪೂಜಾರಿ, 2)ಸತೀಶ, 3)ಅಶೋಕ ಇವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರಾದ ಶರ್ಮಿಳ ಜೈನ್ (37) ತಂದೆ:ಜಾಣ ಹೆಗ್ಡೆ, ವಾಸ:ಚೇಳಿಬೆಟ್ಟು ಮನೆ, ಎಣ್ಣೆಹೊಳೆ, ಮರ್ಣೆ ಗ್ರಾಮ, ಕಾರ್ಕಳ ತಾಲೂಕುರವರ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಆರೋಪಿ ಪ್ರಭಾಕರ ಪೂಜಾರಿಯು ಶರ್ಮಿಳ ಜೈನ್‌ರವರ ಬಲಕೈ ಜೋರಾಗಿ ಹಿಡಿದು ದೂಡಿದ ಪರಿಣಾಮ, ಸಾದಾ ಸ್ವರೂಪದ ಗಾಯವುಂಟಾಗಿದೆ. ಆರೋಪಿಗಳೆಲ್ಲರೂ ಸೇರಿ ಶರ್ಮಿಳ ಜೈನ್‌ರವರನ್ನು ಮತ್ತು ಅವರ ತಾಯಿಯನ್ನುಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಪೊಲೀಸರಲ್ಲಿ ತಿಳಿಸಿದಲ್ಲಿ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಜಾಗದ ದಾರಿಯ ವಿವಾದ ಈ ಘಟನೆಗೆ ಕಾರಣವಾಗಿರುತ್ತದೆ.ಈ ಬಗ್ಗೆ ಶರ್ಮಿಳ ಜೈನ್‌ರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 26/2015 ಕಲಂ:448, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಸುಮತಿ (39), ಗಂಡ:ರಮೇಶ ಆಚಾರಿ, ವಾಸ:ತಾಂಗೋಡ್ಲು, ಆವರ್ಸೆ ಪೋಸ್ಟ್‌ ಮತ್ತು ಗ್ರಾಮ, ಉಡುಪಿ ತಾಲೂಕುರವರ ತಂದೆಯವರಾದ ಮಂಜುನಾಥ ಆಚಾರಿ (76)ಎಂಬವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೇ ವಿಚಾರದಲ್ಲಿ ಯೋಚಿಸಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರು ದಿನಾಂಕ:31/05/2015 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ 01/06/2015 ರಂದೊ ಬೆಳಿಗ್ಗೆ 7:30 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಆವರ್ಸೆ ಗ್ರಾಮದ ತಾಂಗೊಡ್ಲು ಎಂಬಲ್ಲಿರುವ ಸುಮತಿರವರ ಮನೆಯ ಹಿಂದಿನ ಹಾಡಿಯಲ್ಲಿ ಮರಕ್ಕೆ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಸುಮತಿರವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 24/2015ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: