Monday, June 01, 2015

Daily Crimes Reported as On 01/06/2015 at 07:00 Hrsಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದುದಾರರಾದ ಚಂದ್ರೇಗೌಡ ರವರು ದಿನಾಂಕ 31/05/2015 ರಂದು ತನ್ನ ಬಾಬ್ತು ಬಸ್ಸು ನಂಬ್ರ ಕೆಎ-20 ಬಿ-1047 ನೇದನ್ನು ಮಟ್ಟುವಿನಿಂದ ಉಡುಪಿ ಕಡೆಗೆ ಚಾಲಾಯಿಸಿಕೊಂಡು ಬರುತ್ತಿರುವಾಗ ಸಂಜೆ ಸಮಯ ಸುಮಾರು 04:20 ಗಂಟೆಗೆ ಉಡುಪಿ ಕಿನ್ಇಮುಲ್ಕಿಯ ಪೃಥ್ವಿ ಏಜೆನ್ಸಿಯ ಎದುರು ತಲುಪುವಾಗ್ಗೆ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಬಸ್ಸು ನಂಬ್ರ ಕೆಎ-20 -6179 ನೇದನನ್ನು ಅದರ ಚಾಲಕ ಭರತ್ರಾಜ್ ಎಂಬವರು ಅತೀವೇಗ ಹಾಗೂ ನಿರ್ಲಕ್ಷತನದಿಂದ  ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೆ ರಸ್ತೆಯ ಬಲಗಡೆಗೆ ತಿರುಗಿಸಿ ಪಿರ್ಯದುದಾರರ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನನಲ್ಲಿ ಪ್ರಯಾಣಿಸುತ್ತಿದ್ದ ಶೈನಾಜ್, ರಹಮತ್ತುನ್ನಿಸಾ, ಮತ್ತು ಜಾಹಿದಾ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿರುವಿದಾಗಿದೆ, ಅಪಘಾತಕ್ಕೆ ಕೆಎ-20 -6179 ನೇದರ ಚಾಲಕ ಭರತ್ರಾಜ್ ಎಂಬವರು ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೇಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ಪ್ರಕಾಶ ಆಚಾರ್ಯ ಇವರು ದಿನಾಂಕ:31/05/2015 ರಂದು ಮಧ್ಯಾಹ್ನ 1:30 ಗಂಟೆಗೆ ಉಡುಪಿ ತಾಲೂಕು ಗುಂಡ್ಮಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಬಳಿ ರಾ.ಹೆ 66 ರ  ಪಶ್ಚಿಮ ಬದಿಯ ಮಣ್ಣಿನ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿಕೊಂಡಿರುವ ಸಮಯ ಅವರ ಮಾವ ಜನಾರ್ಧನ ಆಚಾರ್ಯ ರವರು ರಾ,ಹೆ.66ರ ಪಶ್ಚಿಮ ಬದಿಯ  ಕಚ್ಚಾ ರಸ್ತೆಯಿಂದ ಟಾರು ರಸ್ತೆಯ ಪೂರ್ವ ಬದಿಗೆ ರಸ್ತೆಯನ್ನು ದಾಟುವಾಗ ಟಾರು ರಸ್ತೆಯ ಪೂರ್ವಬದಿಯಲ್ಲಿ ನಡೆದು ಕೊಂಡು ಹೋಗುವಾಗ ಕೆ.ಎ:05 ಎಂ.ಕೆ:3059 ನೇ ನಂಬ್ರದ ಕಾರು ಚಾಲಕ ಸತೀಶ ಎಂಬುವರು ಆತನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆಯ ತೀರ ಬಲಕ್ಕೆ ಚಲಾಯಿಸಿ ರಸ್ತೆ ದಾಟುತ್ತಿದ್ದ ಜನಾರ್ಧನ ಆಚಾರ್ಯ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಕುತ್ತಿಗೆ ಮತ್ತು ಕೆನ್ನಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ133/15 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೊಲ್ಲೂರು: ಪಿರ್ಯಾದಿ ನಾಗರಾಜ ಪೂಜಾರಿ  ಇವರು ದಿನಾಂಕ 31/05/15 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿದಾರರ ತಮ್ಮನ ಬಾಬ್ತು KA 20 EH 9012ನೇ ಹೀರೊ ಪ್ಯಾಶನ್ ಮೋಟಾರ ಸೈಕಲ್ ನಲ್ಲಿ ತನ್ನ ತಮ್ಮನಾದ ರಾಘವೇಂದ್ರ ಪೂಜಾರಿಯನ್ನು  ಬೈಕಿನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಕುಂದಾಪುರ ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಕೊಲ್ಲೂರು ಕಡೆಗೆ ಬರುತ್ತಿರುವಾಗ ಸಮಯ ಸುಮಾರು 10:30 ಗಂಟೆ ಜನ್ನಾಲ್ ಬಸ್ಸ್ ನಿಲ್ದಾಣದಿಂದ ಸ್ಷಲ್ಪ ಮುಂದಕ್ಕೆ ಹೊಸೂರು ಬಳಿ ತಲುಪುವಾಗ ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ KA 19 D 7845 ನೇ  ಮಾರುತಿ ಸ್ವಿಪ್ಟ್ ಕಾರನ್ನು ಅದರ ಚಾಲಕ ಅತೀವೇ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ  ಬಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಅವರ ತಮ್ಮ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿ ಹಾಗೂ ತಮ್ಮನಿಗೆ ರಕ್ತಗಾಯ ಉಂಟಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೊಲ್ಲೂರು: ಪಿರ್ಯಾದಿ ನಾಗರತ್ನ ನಾಡಿಗ್   ಇವರು ದಿನಾಂಕ 31/05/15 ರಂದು ಬೆಳಿಗ್ಗೆ 06:45 ಗಂಟೆಗೆ ಪಿರ್ಯಾದಿದಾರಬಾಬ್ತು KA 14 P 3022ನೇ ಟಾಟಾ ನ್ಯಾನೋ ಕಾರಿನಲ್ಲಿ ತನ್ನ ಪತಿ ಶ್ರೀ ವತ್ಸ ಹಾಗೂ ಮಕ್ಕಳಾದ ಗಹನ್(4) ,ಶ್ರೀರಕ್ಷಾ (7) ಮತ್ತು ತಾಯಿ ಗಿರಿಜಮ್ಮ(60) ರವರೊಂದಿಗೆ  ಶಿವಮೊಗ್ಗದಿಂದ ಮಾರಣಕಟ್ಟೆಯಲ್ಲಿ ಡೆಯುವ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೊರಟು ಕೊಲ್ಲೂರು ತಪುಪಿ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ  ಹೋಗುತ್ತಿದ್ದು. ಸಮಯ ಸುಮಾರು 10:15 ಗಂಟೆಗೆ ಹೊಸೂರು ಜನ್ನಾಲ್ ತಿರುವಿನ ಬಳಿ ಹೋಗುವಾಗ. ಕುಂದಾಪುರ ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿರುವ KA 20 P 2361ನೇ SANTRO ಕಾರಿನ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದುದಾರರ ಕಾರಿಗೆ  ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಎರಡು ಮೊಣಕಾಲಿಗೆ ರಕ್ತಗಾಯ ಉಂಟಾಗಿದ್ದು ಹಾಗೂ ಪಿರ್ಯಾದಿದಾರರ ಮಗನಿಗೆ ಹಣೆಗೆ ರಕ್ತಗಾಯವಾಗಿದ್ದು. ಪಿರ್ಯಾದಿದಾರರ ತಾಯಿಯ ಹಣೆಗೆ ಮತ್ತು ಎಡಕಣ್ಣಿನ ಬಳಿ ರಕ್ತಗಾಯ ಉಂಟಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 31/05/2015 ರಂದು ಸಮಯ ಸುಮಾರು ಸಂಜೆ 7:30 ಗಂಟೆಗೆ ಕುಂದಾಪುರ ತಾಲೂಕು  ವಡೇರಹೋಬಳಿ ಗ್ರಾಮದ ಅರವಿಂದ ಮೋಟಾರ್ಸ್‌  ಬಳಿ ರಾ.ಹೆ  66  ರಸ್ತೆಯಲ್ಲಿ,  ಆಪಾದಿತ KA03-MS-6949 ನೇ ಕಾರಿನ ಚಾಲಕ ಕಾರನ್ನು ಕೊಟೇಶ್ವರದಿಂದ  ಕುಂದಾಪುರ ಕಡೆಗೆ  ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗಿ  ಕಾರಿನ  ಮುಂಭಾಗದಲ್ಲಿ  ಹೋಗುತ್ತಿದ್ದ  ವಾಹನವೊಂದನ್ನು  ಓವರ್‌ಟೇಕ್‌  ಮಾಡುತ್ತ  ರಸ್ತೆಯ  ತೀರ  ಬಲಬದಿಗೆ ಹೋಗಿ ಕುಂದಾಪುರ  ಕಡೆಯಿಂದ ಕೊಟೇಶ್ವರ  ಕಡೆಗೆ ಬೈಕ್‌  ಸತೀಶ ಪೂಜಾರಿ  ಎಂಬವರು  ಸವಾರಿ ಮಾಡಿಕೊಂಡು  ಹೋಗುತ್ತಿದ್ದ   KA20-EF-4279   ಎದುರುಗಡೆಯಿಂದ  ಡಿಕ್ಕಿ  ಹೊಡೆದ  ಪರಿಣಾಮ ಸತೀಶ ಪೂಜಾರಿ  ಬೈಕ್‌‌  ಸಮೇತ  ರಸ್ತೆಯಲ್ಲಿ  ಬಿದ್ದು ತಲೆಗೆ,  ಬಲಕಾಲಿಗೆ ಹಾಗೂ ಮೈ ಕೈಗೆ ರಕ್ತಗಾಯ  ಹಾಗೂ ಒಳ ಜಖಂ  ಆಗಿ ಚಿಕಿತ್ಸೆ  ಬಗ್ಗೆ ಕುಂದಾಪುರ ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ  ಸತೀಶ  ಪೂಜಾರಿ ಮೃತಪಟ್ಟಿದ್ದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2015 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 31/05/2015 ರಂದು 13.00 ಗಂಟೆಗೆ ಉಡುಪಿ ತಾಲೂಕು ಮಟಪಾಡಿ ಗ್ರಾಮದ ನೆಲ್ಲಿಗದ್ದೆ ಎಂಬಲ್ಲಿ ಪಿರ್ಯಾದಿ ಅಶ್ವಿನಿ ಇವರು ಮತ್ತು ಪಿರ್ಯಾದಿದಾರರ ಮನೆಯವರ ಜಾಗದಲ್ಲಿ ಆರೋಪಿತರಾದ 1. ಜಯಲಕ್ಷ್ಮಿ, 2.ಗಣೇಶ್ ನಾಯಕ್ , 3.ಶಶಿಧರ, 4.ನಾರಾಯಣ ನಾಯಕ್ , 5. ಶಾರದ ನೆಲ್ಲಿಗದ್ದೆ ಮಟಪಾಡಿ ಗ್ರಾಮ ಇವರುಗಳು ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಮನೆಕಟ್ಟಲು ಪ್ರಾರಂಭಿಸಿದನ್ನು ಆಕ್ಷೇಪಿಸಿದಾಗ ಆರೋಪಿಗಳು ಸಮಾನ ಉದ್ದೇಶದಿಂದ  ಅಕ್ರಮಕೂಟ ಸೇರಿ ಪಿರ್ಯಾದಿದಾರರ ಮನೆಯವರನ್ನು ತಡೆದು  ಹಾರೆ, ಕೋಲು ,ಮೆಣಶಿನಪುಡಿ ಹಿಡಿದುಕೊಂಡು ಪಿರ್ಯಾದಿದಾರರ ಮುಖಕ್ಕೆ 1 ನೇ ಆರೋಪಿ ಜಯಲಕ್ಷ್ಮೀ ಮೆಣಶಿನ ಪುಡಿ ಎರಚಿ ದೂಡಿ ಕೈಯಿಂದ ಹೊಡೆದಿರುತ್ತಾರೆ. 2 ನೇ ಆರೋಪಿ ಗಣೇಶ ನಾಯಕ್ ಹಾರೆ ಕೋಲಿನಿಂದ ಪಿರ್ಯಾದಿದಾರರ ಅಣ್ಣನಾದ ರವೀಂದ್ರನಿಗೆ ಬೆನ್ನಿಗೆ,ಕೈಗೆ ಮುಖಕ್ಕೆ ಹೊಡೆದಿರುತ್ತಾರೆ. 3 ನೇ ಆರೋಪಿ ಶಶಿಧರ ಕೋಲಿನಿಂದ ರವೀಂದ್ರನಿಗೆ ಹೊಡೆದಿರುತ್ತಾರೆ ಇನ್ನು ಮುಂದೆ ತಡೆಯಲು ಬಂದರೆ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/15 ಕಲಂ: 143,147,341,323,324,506 ಜೊತೆಗೆ 149   ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು : ಪಿರ್ಯಾದಿ ಮುಲ್ಲಾ ಶಫಿಕ್‌ ಇವರು ಅವರ ಮನೆಯಿಂದ ಅವರ ಸಂಬಂಧಿ ಮಾಮ್ದ ಆಲಿ ಅಮೀರ್‌ರವರ ಮನೆಗೆ ನಡೆದುಕೊಂಡು ಹೊರಟು ದಿನಾಂಕ 30-05-2015 ರಂದು ಸಂಜೆ 05-15 ಗಂಟೆಯ ವೇಳೆಗೆ ಕುಂದಾಪುರ ತಾಲುಕು ಶಿರೂರು ಗ್ರಾಮದ ನ್ಯೂ ಕಾಲೂನಿಯಲ್ಲಿರುವ ಗಂಗೊಳ್ಳಿ ಮುಬಿನ್‌ ಸಾಹೇಬರ ಮನೆಯ ಹತ್ತಿರವಿರುವ ದಾರಿಯಲ್ಲಿ ಹೋಗುತ್ತಿರುವಾಗ ಆರೋಪಿ  ಗಂಗೊಳ್ಳಿ ಮುಬಿನ್‌ ಸಾಹೇಬ ಎಂಬುವವರು ಪಿರ್ಯಾದಿದಾರರ ಹಿಂದಿನಿಂದ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಆತನಲ್ಲಿದ್ದ ಮರದ ರೀಪಿನಿಂದ ಪಿರ್ಯಾಧಿದಾರರ ತಲೆಗೆ ಹೊಡೆದಾಗ ರಕ್ತಗಾಯವಾಗಿರುತ್ತದೆ. ಹಾಗೂ ಅಲ್ಲಿಗೆ ಬಂದ ಗೊಂಗೊಳ್ಳಿ ಶಕಿಲ್‌ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಆತನಲ್ಲಿದ್ದ ಮಡಲಿನ ಹೆಡೆಯಿಂದ ಪಿರ್ಯಾಧಿದಾರರ  ಎಡ ಭುಜಕ್ಕೆ ಎಡಕೈಗೆ ಎಡಕಾಲಿನ ಕಿರುಬೆರಳಿಗೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಅಕ್ಕ ಪಕ್ಕದವರು ಬಂದಿದ್ದನ್ನು  ನೋಡಿ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 155/2015 ಕಲಂ 324, 504, 506, ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: