Monday, June 29, 2015

Daily Crime Reports As On 29/06/2015 At 07:00 Hrs

ಅಪಘಾತ ಪ್ರಕರಣ

  • ಬೈಂದೂರು:ದಿನಾಂಕ 24/06/2015 ರಂದು ಸಂಜೆ 18:00  ಗಂಟೆಗೆ ಕುಂದಾಫುರ ತಾಲೂಕು ಪಡುವರಿ ಗ್ರಾಮದ ಒತ್ತಿನಾಣೆ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರದ ಮಹೇಶ್‌ ಕೆ ನಾಯ್ಕ (30) ತಂದೆ: ಕೃಷ್ಣಪ್ಪ ನಾಯ್ಕ ವಾಸ: ಸರ್ಪನಕಟ್ಟೆ ಭಟ್ಕಳ ಉತ್ತರಕನ್ನಡ ಜಿಲ್ಲೆ ರವರು  ಕೆಎ 47 ಎಂ 607ನೇ ಇನವಾ ಕಾರಿನಲ್ಲಿ ಕುಂದಾಪುರದಿಂದ ಭಟ್ಕಳ ಕಡೆಗೆ ಹೋಗುತ್ತಿರುವಾಗ ಹೆಚ್ಆರ್ 42 ಡಿ 7323 ನೇ ಲಾರಿಯನ್ನು ಅದರ ಚಾಲಕ ಜಿತೇಂದ್ರ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕೆಯಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಲಾರಿಯು ಚಾಲಕನ ಹತೋಟಿ ತಪ್ಪಿ ಮಹೇಶ್ ನಾಯ್ಕ ರವರ  ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ  ಬೈಂದೂರು ಠಾಣೆ ಅಪರಾಧ ಕ್ರಮಾಂಕ 176/2015 ಕಲಂ 279 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಬ್ರಹ್ಮಾವರ:ದಿನಾಂಕ 28/06/2015 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಉಪ್ಪೂರು ಗ್ರಾಮದ ಕುದ್ರುಬೆಟ್ಟು ಎಂಬಲ್ಲಿ ಪಿರ್ಯಾದುದಾರರದ ಕೃಷ್ಣ (35), ತಂದೆ:ಲೇಟ್ ನಾದು ವಾಸ:ಕುದ್ರುಬೆಟ್ಟು ಉಪ್ಪೂರು ಗ್ರಾಮ, ಉಡುಪಿ ತಾಲೂಕುರವರ ತಾಯಿ ಕಿಟ್ಟು 55 ವರ್ಷ ಎಂಬುವವರು ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವಾಗ ವಿಪರೀತ ಗಾಳಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಾಗಿ ವಿದ್ಯುತ್ ಸಂಪರ್ಕದ ಆಘಾತದಿಂದ ತೀವ್ರ ಗಾಯಗೊಂಡವರನ್ನು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆತಂದಾಗ ಮಧ್ಯಾಹ್ನ 12.00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಯು.ಡಿ.ಆರ್ ಕ್ರಮಾಂಕ 35/2015  ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: