Sunday, June 28, 2015

Daily Crime Reports As On 28/06/2015 At 19:30 Hrs

ಅಪಘಾತ ಪ್ರಕರಣಗಳು
  • ಕಾರ್ಕಳ: ದಿನಾಂಕ 28.06.2015 ರಂದು 09:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಹಿರಿಯಂಗಡಿ  ಬಳಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ನಂಬ್ರ 1 ರ ಪಶ್ಚಿಮ ದಿಕ್ಕಿನಲ್ಲಿ ಶ್ರೀ ಇಡಗುಂಜಿ ನಿವಾಸ ಮನೆಯ ಎದುರು ಆನೆಕೆರೆ ಕಡೆಗೆ ನಡೆದುಕೊಂಡು ತೆರಳುತ್ತಿದ್ದ ತಮ್ಮಯ್ಯ ದೇವಾಡಿಗ ಎಂಬವರಿಗೆ ಆನೆಕೆರೆ ಕಡೆಯಿಂದ ಕಾರ್ಕಳ ತಾಲೂಕು ಕಛೇರಿ ಕಡೆಗೆ ಬರುತ್ತಿದ್ದ ಅಪರಿಚಿತ ಮೋಟಾರು ಸೈಕಲ್ ಸವಾರನೋರ್ವನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ರಾಜ್ಯ ಹೆದ್ದಾರಿಯಲ್ಲಿ  ಚಲಾಯಿಸಿಕೊಂಡು ಬಂದು ಪಾದಾಚಾರಿ ತಮ್ಮಯ್ಯ ದೇವಾಡಿಗರವರಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿರುತ್ತಾನೆ  ಈ ಅಪಘಾತದಿಂದ ಗಂಭೀರ ಗಾಯಗೊಂಡ ತಮ್ಮಯ್ಯ ದೇವಾಡಿಗ ಇವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು  ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ  ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 91/2015 ಕಲಂ 279, 304(ಎ) ಐಪಿಸಿ. ಜೊತೆಗೆ 134 (ಎ)(ಬಿ) ಐ.ಎಂ.ವಿ ಕಾಯ್ದೆಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ: ಪಿರ್ಯಾದಾರರಾದ ಸುಮಂತ ಗಾಣಿಗ  (21) ತಂದೆ : ಮಹೇಶ್ ಗಾಣಿಗ  ವಾಸ:- ರಾಜೀವ ನಗರ , ಕೊಳಂಬೆ , ಹೇರೂರು ಗ್ರಾಮ , ಉಡುಪಿ ತಾಲೂಕು ಇವರು  ದಿನಾಂಕ :  27/06/2015 ರಂದು 19.30 ಗಂಟೆ ಸಮಯದಲ್ಲಿ ಹೇರೂರು ಗ್ರಾಮದ ಕೊಳಂಬೆ  ಬಸ್ ನಿಲ್ದಾಣದ ಬಳಿ  ಪಿರ್ಯಾದುದಾರರು ತನ್ನ ಮೋಟಾರ್ ಸೈಕಲ್ KA 20 U 3370 ದಲ್ಲಿ ಕೊಳಂಬೆಯಿಂದ  ಬ್ರಹ್ಮಾವರ ಕಡೆಗೆ ಬರುತ್ತಿರುವಾಗ ಆರೋಪಿ ತನ್ನ KA 04 B 9609   ಇನ್ನೊವ ಕಾರನ್ನು   ಅತಿವೇಗ  ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಾಲನೆ ಮಾಡಿರುತ್ತಾನೆ, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ 128/2015 ಕಲಂ: 279 ಐ.ಪಿ.ಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ
  • ಬ್ರಹ್ಮಾವರ: ದಿನಾಂಕ :27/06/2015 ರಂದು 18.45 ಗಂಟೆಗೆ ಉಡುಪಿ ತಾಲೂಕು ಹಂದಾಡಿ ಗ್ರಾಮದ ನಡುಬೆಟ್ಟು  ಎಂಬಲ್ಲಿ  ಮೃತ ಗಣಪ ಪೂಜಾರಿ (55) ಎಂಬುವವರು  ಕಾಲು ದಾರಿಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಕಾಲು ದಾರಿಯಲ್ಲಿದ್ದ  ರಾಮ ಪೂಜಾರಿಯವರ  ಆವರಣ ವಿಲ್ಲದ ಬಾವಿಗೆ  ಆಕಸ್ಮಿಕವಾಗಿ  ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ, ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್  ನಂಬ್ರ 34/2015 ಕಲಂ: 174 ಸಿ.ಆರ್.ಪಿ.ಸಿ. ಪ್ರಕರಣ  ದಾಖಲಿಸಿಕೊಳ್ಳಲಾಗಿದೆ 

No comments: