Saturday, June 27, 2015

Daily Crime Reports As On 27/06/2015 At 17:00 Hrs


ಅಪಘಾತ ಪ್ರಕರಣ
  • ಮಣಿಪಾಲ:ದಿನಾಂಕ 26.06.15ರಂದು ಪಿರ್ಯಾದಿದಾರರಾದ ಕೆ.ರಾಮಣ್ಣ, ತಂದೆ: ಪುತ್ರ ಮೊಗೇರ, ವಾಸ:ಅಂಬಿಕಾ ಟವರ್ಸ್‌, ಮಂಜುನಾಥ ನಗರ, ಮಣಿಪಾಲ ಇವ ಹೆಂಡತಿ ಹೇಮಾವತಿರವರು ಪರ್ಕಳ ಹೈಸ್ಕೂಲ್ ಹತ್ತಿರ ರಸ್ತೆಯ ಎಡಬದಿಯಲ್ಲಿ 11:00 ಗಂಟೆಗೆ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂಬದಿಯಿಂದ ಪರ್ಕಳ ಕಡೆಯಿಂದ ಹಿರಿಯಡ್ಕ ಕಡೆಗೆ ಕೆಎ 20 ಪಿ 8037ನೇ ಬೊಲೆರೋ ಜೀಪನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕೆ.ರಾಮಣ್ಣ ರವರ ಹೆಂಡತಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಅವರ ತಲೆಗೆ, ಮುಖಕ್ಕೆ ಹಾಗೂ ಎಡಭುಜಕ್ಕೆ ಜಖಂ ಉಂಟಾಗಿರುತ್ತದೆ. ಅವರನ್ನು ಮಹೇಶ ದೇವಾಡಿಗ ಹಾಗೂ ಅಪಘಾತವೆಸಗಿದ ಜೀಪಿನ ಚಾಲಕನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 125/15 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕೋಟ:ಯು.ಗಿರೀಶ್ ರಾವ್ (41), ತಂದೆ:ನಾರಾಯಣ, ವಾಸ:ಶಾಂತಾ ನಾರಾಯಣ ನಿಲಯ, ಸಾಯಿ ಕುಟೀರ, ನಾಡಬೆಟ್ಟು ರಸ್ತೆ, ಮಂಗಳೂರು ತಾಲೂಕುರವರ ಬಾವ ವಿಷ್ಣು ಪ್ರಸಾದ್ ಭಟ್ ಎಂಬವರು ಉಡುಪಿ ತಾಲೂಕು ಐರೋಡಿ ಗ್ರಾಮದ ಹಪ್ಪಳ ಬೆಟ್ಟು ಮಾಬುಕಳ ಎಂಬಲ್ಲಿನ ಡೆಲ್ಲಾ ಡಿಸೋಜಾರವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ತನ್ನ ಮೂರು ಲಕ್ಷ ಸಾಲವನ್ನು ಅವರ  ಬ್ಯಾಂಕ್ ಖಾತೆಯ ಹಣ, ಚಿನ್ನಾಭರಣ ಹಾಗೂ ವಾಹನ ಮಾರಿ ತಿರಿಸುವಂತೆ ಹಾಗೂ ತಾನು ಎಲ್ಲರನ್ನು ಬಿಟ್ಟು ದೂರ ಹೋಗುತ್ತಿರುವುದಾಗಿ ಮನೆಯ ಟೇಬಲ್‌ ಮೇಲೆ ಚೀಟಿ ಬರೆದಿಟ್ಟು,  ದಿನಾಂಕ:25/06/2015 ರಂದು ಬೆಳಿಗ್ಗೆ 09:30 ಗಂಟೆಗೆ ಕಾಣೆಯಾಗಿರುತ್ತಾರೆ. ದಿನಾಂಕ:27/06/2015 ರಂದು ಕೋಡಿ ಕಡಲ ಕಿನಾರೆಯಲ್ಲಿ ವಿಷ್ಣು ಪ್ರಸಾದ್ ಭಟ್ರವರ ಮೃತ ದೇಹ ದೊರೆತ್ತಿದ್ದು ಸದ್ರಿಯವರು ಸಾಲದ ಹೊರೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸಮುದ್ರಕ್ಕೆ  ಹಾರಿ ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 28/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು: ಶ್ರೀಮತಿ ಗೌರಿ (54), ಕಾಳ ನಾಯ್ಕರ ಮನೆ ಅರೆಹೊಳೆ ನಾವುಂದ ಗ್ರಾಮ ಕುಂದಾಪುರ ತಾಲೂಕು ಇವರ ಪತಿ ಶ್ಯಾಸ ದೇವಾಡಿಗ (64)ಇವರು ಸಕ್ಕರೆ ಕಾಯಿಲೆ ಹಾಗೂ ಪಕ್ಷವಾತ ಕಾಯಿಲೆಯಿಂದ ಬಳಲುತ್ತಿದ್ದು ಕಾಯಿಲೆ ಗುಣಮುಖವಾಗಿಲ್ಲ ಎಂದು ಜೀವನದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 26-06-2015 ರಂದು ಬೆಳಿಗ್ಗೆ 07:30  ಗಂಟೆಯಿಂದ 27-06-2015 ರಂದು ಬೆಳಿಗ್ಗೆ 09:00 ಗಂಟೆಯ ನಡುವೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಬಸ್ತಿಮಕ್ಕಿ ಎಂಬಲ್ಲಿ ಕೋಯಾಸಾಹೇಬರ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಶ್ರೀಮತಿ ಗೌರಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 23/2015 ಕಲಂ: 174   ಸಿರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: