Saturday, June 27, 2015

Daily Crime Reports As On 27/06/2015 At 07:00 Hrsಅಪಘಾತ ಪ್ರಕರಣ

  • ಕುಂದಾಪುರ:ದಿನಾಂಕ 26/06/2015 ರಂದು ಸಮಯ ಸುಮಾರು ಬೆಳಿಗ್ಗೆ 7:30  ಗಂಟೆಗೆ ಕುಂದಾಪುರ ತಾಲೂಕು  ಗೋಪಾಡಿ ಬೊಬ್ಬರ್ಯ ದೇವಸ್ಥಾನದ  ಬಳಿ ನಿಸರ್ಗ  ಮನೆಯ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ, ಸುರೇಶ ಜಿ.ಕೆ  ಎಂಬವರು KA 20 Z  9285 ನೇ ಕಾರನ್ನು  ಕುಂದಾಪುರ ಕಡೆಯಿಂದ ತೆಕ್ಕಟ್ಟೆ  ಕಡೆಗೆ  ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು ಬಂದು ರಸ್ತೆಯ  ತೀರ  ಎಡಬದಿಗೆ  ಚಲಾಯಿಸಿ   ಕುಂದಾಪುರ  ಕಡೆಯಿಂದ ತೆಕ್ಕಟ್ಟೆ  ಕಡೆಗೆ  ಸೈಕಲ್‌  ಸವಾರಿ  ಮಾಡಿಕೊಂಡು  ಹೋಗುತ್ತಿದ್ದ   ಪದ್ಮನಾಭ  ಆಚಾರಿಯವರಿಗೆ  ಹಿಂದಿನಿಂದ  ಡಿಕ್ಕಿ  ಹೊಡೆದ ಪರಿಣಾಮ  ಪದ್ಮನಾಭ  ಆಚಾರಿಯವರು ಸೈಕಲ್   ಸಮೇತ   ರಸ್ತೆಯಲ್ಲಿ  ಬಿದ್ದು ಅವರ ತಲೆಗೆ, ಎರಡೂ  ಕಾಲುಗಳಿಗೆ.,ಮೈ ಕೈಗೆ  ರಕ್ತಗಾಯ ಹಾಗೂ ಒಳ ನೋವು  ಆಗಿ ಕೊಟೇಶ್ವರ ಎನ್‌.ಆರ್  ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು  ಹೆಚ್ಚಿನ  ಚಿಕಿತ್ಸೆ  ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ   ದಾಖಲಾಗಿರುತ್ತಾರೆ.ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್  ಠಾಣೆ ಅಪರಾಧ ಕ್ರಮಾಂಕ 73/2015  ಕಲಂ 279 , 337  ಐಪಿಸಿ ರಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.  

ಜುಗಾರಿ ಪ್ರಕರಣ

  • ಕೋಟ:ದಿನಾಂಕ:26/06/2015  ರಂದು ಮದ್ಯಾಹ್ನ  16:40 ಗಂಟೆಗೆ ಕೋಟ ಠಾಣೆ  ಪಿ.ಎಸ್.ಐ  ಬಸಪ್ಪ ಎ.ಇ  ರವರು ಕೋಟ ಠಾಣೆ ಠಾಣಾ ಸರಹದ್ದಿನ ಬಾಳ್ಕುದ್ರು ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾಳ್ಕದ್ರು ಗ್ರಾಮದ ಹಂಗಾರಕಟ್ಟೆ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದಂತೆ  ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  ಮಟ್ಕಾ ಜುಗಾರಿ  ಆಟ ನೆಡೆಸುತ್ತಿದುದ್ದನ್ನು ಖಚಿತ ಪಡಿಸಿಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ  ಕೃಷ್ಣ ಮರಕಾಲ(69).ತಂದೆ:ದಿ.ಬಚ್ಚ ಮರಕಾಲ,ವಾಸ: ಹಂಗಾರಕಟ್ಟೆ, ಬಾಳ್ಕುದ್ರು ಗ್ರಾಮ, ಉಡುಪಿ  ತಾಲೂಕು ಎಂಬವರನ್ನು  ದಸ್ತಗಿರಿ ಮಾಡಿ   ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ -1,ಬಾಲ್ ಪೆನ್ನು -1 ನಗದು ರೂ-480/-ನ್ನು  ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  154/2015 ಕಲಂ:87(1),(3) ಕರ್ನಾಟಕ ಪೊಲೀಸ್  ಕಾಯ್ದೆಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.    
  • ಗಂಗೊಳ್ಳಿ:ದಿನಾಂಕ 26/06/2015 ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸುಬ್ಬಣ್ಣ ಬಿ. ರವರು ಹಕ್ಲಾಡಿ  ಗ್ರಾಮದ  ಕೆಳಾಕಳಿ ಮಾರಿಕಾಂಬ ದೇವಸ್ಥಾನದ ಬಳಿ ಸಾರ್ವಜನಿಕ  ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವುದಾಗಿ ಬಂದ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ  17:00 ಗಂಟೆಗೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ 1) ಶೀನ ಕೊಠಾರಿ ಪ್ರಾಯ 62 ವರ್ಷ ತಂದೆ ದಿ. ಮಂಜ ಕೊಠಾರಿ ವಾಸ ಹೆರಂಜಾಲು  ಹೊಸ್ಕೋಟೆ  ಬಿಜೂರು ಗ್ರಾಮ ಕುಂದಾಪುರ  ತಾಲೂಕು 2)ಶೇಖರ  ಪ್ರಾಯ 55 ವರ್ಷ ತಂದೆ ಕೃಷ್ಣಪ್ಪ  ಹೆಗ್ಡೆ  ವಾಸ  ಹರ್ಕೂರು ಕಟ್ಟಿನಮಕ್ಕಿ , ಹರ್ಕೂರು ಗ್ರಾಮ ಕುಂದಾಪುರ  ತಾಲೂಕು 3). ನರಸಿಂಹ ಪೂಜಾರಿ ಪ್ರಾಯ 51 ವರ್ಷ ತಂದೆ ದಿ. ಗಣಪ ಪೂಜಾರಿ ವಾಸ  ಹೊಸಾಡು ಮುಳ್ಳಿಕಟ್ಟೆ , ಹೊಸಾಡು ಗ್ರಾಮ ಕುಂದಾಪುರ  ತಾಲೂಕು 4) ಮಹಾಬಲ ಶೆಟ್ಟಿ  ಪ್ರಾಯ 74 ವರ್ಷ ತಂದೆ  ತಿಮ್ಮ ಶೆಟ್ಟಿ ವಾಸ ಮುಳ್ಳಿಕಟ್ಟೆ  ಹೊಸಾಡು ಗ್ರಾಮ ಕುಂದಾಪುರ  ತಾಲೂಕು ಎಂಬುವುದಾಗಿದ್ದು .ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ  ಶೀನ ಆಚಾರಿ  ಕೆಳಾಕಳಿ ಹಕ್ಲಾಡಿ ಗ್ರಾಮ ಎಂಬವರು ಸ್ಥಳದಿಂದ ಓಡಿ ಹೋಗಿರುತ್ತಾರೆ.  ಇಸ್ಪೀಟ್ ಆಟಕ್ಕೆ ಉಪಯೋಗಿಸಿದ ನಗದು ಹಣ 5050/- ರೂ, ಇಸ್ಪೀಟ್ ಎಲೆಗಳು 52 , ಹಾಗೂ ಗೋಣಿ ಚೀಲ 1 ನ್ನು ಮಹಜರು ಮುಖೇನ ಸ್ವಾದೀನ ಪಡಿಸಿಕೊಂಡು, ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ ನಂಬ್ರ 90/2015 ಕಲಂ  87 ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ .

ಅಸ್ವಾಭಾವಿಕ ಮರಣ

  • ಬ್ರಹ್ಮಾವರ :ಪಿರ್ಯಾದಿದಾರಾದ ಬಾಲಕೃಷ್ಣ ಶೆಟ್ಟಿ ಪ್ರಾಯ: 52 ವರ್ಷ, ತಂದೆ: ದಿ.ಬಾಲಕೃಷ್ಣ ಶೆಟ್ಟಿ,ವಾಸ:ಪಡುಮನೆ ಮಡಿ ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕು ಇವರ 17 ವರ್ಷ ಪ್ರಾಯದ ಮಗನಾದ ಮೋಹಿತ್ಇತನು ಬ್ರಹ್ಮಾವರ ಎಸ್‌.ಎಮ್‌.ಎಸ್ಕಾಲೇಜಿನಲ್ಲಿ ಪ್ರಥಮ ವರ್ಷದ ಪಿ.ಯು.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದು ವಿಚಾರ ಮನೆಯವರಿಗೆ ಗೊತ್ತಾಗಿದ್ದರಿಂದ ಅವಮಾನಗೊಂಡು ದಿನಾಂಕ 26-06-2015 ರಂದು ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 4:30 ಗಂಟೆಯ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಮಡಿ ಎಂಬಲ್ಲಿರುವ ಬಾಲಕೃಷ್ಣ ಶೆಟ್ಟಿ ರವರ ಮನೆಯಾದ ಪಡುಮನೆಯ ಮಹಡಿಯ ಹಾಲ್ ಮಾಡಿನ ಮರದ ಜಂತಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ .ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯು.ಡಿ.ಆರ್ ಕ್ರಮಾಂಕ  33/2015 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರ ಕರಣ ದಾಖಲಿಸಿಕೊಳ್ಳಲಾಗಿದೆ.


No comments: