Friday, June 26, 2015

Daily Crime Reports As On 26/06/2015 At 17:00 Hrs

ಅಪಘಾತ ಪ್ರಕರಣ
  • ಕೋಟ: ಪಿರ್ಯಾದಿ ನಾಗರಾಜ ಜಿ ಇವರು ದಿನಾಂಕ:25/06/2015 ರಂದು ಬೆಳಿಗ್ಗೆ 09:30 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಬೇಳೂರು ಗ್ರಾಮದ ಗುಳ್ಳಾಡಿ ಅಂಗನವಾಡಿಗೆ ತನ್ನ ಅಕ್ಕನ ಮಗ ಶ್ರೇಯಸ್ ಪ್ರಾಯ:4 ವರ್ಷ ಎಂಬುವರನ್ನು ಬಿಡಲು ಬೇಳೂರು-ಮಣೂರು ರಸ್ತೆಯ ದಕ್ಷಿಣ ಬದಿಯ ಮಣ್ಣಿನ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೇಳೂರು ಕಡೆಯಿಂದ ಮಣೂರು ಕಡೆಗೆ ಗಣಪಯ್ಯ ಆಚಾರ್ ಎಂಬುವರು ಆತನ ಬಾಬ್ತು  ಕೆ.ಎ:20 ಡಬ್ಲ್ಯೂ :4885 ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ರಸ್ತೆಯ ತೀರ ಎಡಕ್ಕೆ ಚಲಾಯಿಸಿ ಶ್ರೇಯಸ್ ಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತಗೆ ಬಿದ್ದು  ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.   ಬಗ್ಗೆ ಕೋಟ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 153/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 26/06/2015 ರಂದು ಸಮಯ ಸುಮಾರು ಬೆಳಿಗ್ಗೆ 8:55 ಗಂಟೆಗೆ ಕುಂದಾಪುರ ತಾಲೂಕು  ಕಸಬಾ ಗ್ರಾಮದ  ಚರ್ಚು ರಸ್ತೆಯ ಹೋಲಿ ರೋಜರಿ ಚರ್ಚಿನ  ಬಳಿ ಕಾಂಕ್ರೀಟ್  ರಸ್ತೆಯಲ್ಲಿ ಆಪಾದಿತ ಸುಧೀಂದ್ರ  ಕೆ.ಜಿ ಎಂಬವರು KA20-EG-6885ನೇ ಬೈಕ್ ನ್ನು  ಪಾರಿಜಾತಾ   ಸರ್ಕಲ್  ಕಡೆಯಿಂದ  ಕೋಡಿ  ಕಡೆಗೆ ಅತೀವೇಗ  ಹಾಗೂ  ಅಜಾಗರುಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ  ತೀರ  ಎಡಬದಿಗೆ  ಚಲಾಯಿಸಿ, ಕೋಡಿ  ಕಡೆಯಿಂದ ಪಾರಿಜಾತಾ   ಸರ್ಕಲ್  ಕಡೆಗೆ ತನ್ನ ಪಾಲಕರ ಜೊತೆಯಲ್ಲಿ  ನಡೆದುಕೊಂಡು ಬರುತ್ತಿದ್ದ ನಿತಿನ್  ಎಂಬ  5 ವರ್ಷದ ಮಗುವಿಗೆ  ಡಿಕ್ಕಿ ಹೊಡೆದ ಪರಿಣಾಮ  ನಿತಿನ್ ನ ತಲೆಗೆ ತುಟಿಗೆ ಹಾಗೂ  ಮೈ ಕೈಗೆ  ರಕ್ತಗಾಯ  ಹಾಗೂ ಒಳ ನೋವು  ಆಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.   ಬಗ್ಗೆ ಕುಂದಾಪುರ ಸಂಚಾರ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 72/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 ಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ:  ಮಾಲತಿ ಬಿ. ಶೆಟ್ಟಿ ಪ್ರಾಯ 65 ವರ್ಷ ಎಂಬವರು ದಿನಾಂಕ 24.06.2015 ರಂದು ಮಧ್ಯಾಹ್ನ 1:30 ಗಂಟೆಗೆ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ಚಾರು ಕೊಟ್ಟಿಗೆ ಎಂಬಲ್ಲಿ ತಾವು ವಾಸ್ತವ್ಯವಿರುವ ಮನೆಯಿಂದ ಪಕ್ಕದ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುತ್ತಾರೆ.    ಬಗ್ಗೆ ಕುಂದಾಪುರ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 247/2015, ಕಲಂ: ಹೆಂಗಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ
  • ಕೋಟ:  ವಿಷ್ಣುಪ್ರಸಾದ್ ರಾವ್, ಪ್ರಾಯ:27ವರ್ಷ ಎಂಬುವರು ದಿನಾಂಕ:25/06/2015 ರಂದು ಬೆಳಿಗ್ಗೆ 09:30 ಗಂಟೆಗೆ ಉಡುಪಿ ತಾಲೂಕು ಐರೋಡಿ  ಗ್ರಾಮದ ಹಪ್ಪಳ ಬೆಟ್ಟು , ಮಾಬುಕಳದ ಡೆಲ್ಲೂ ಡಿಸೋಜಾ ರವರ ಬಾಬ್ತು ಬಾಡಿಗೆ ಮನೆಯಿಂದ ಯಾರಿಗೂ ತಿಳಿಸದೆ ಮನೆಯಿಂದ ಕಾಣೆಯಾಗಿರುತ್ತಾರೆ.   ಬಗ್ಗೆ ಕೋಟ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 152/2015 ಕಲಂ:ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ
 ಕಳವು ಪ್ರಕರಣ
  • ಶಂಕರನಾರಾಯಣ:  ದಿನಾಂಕ 25/06/2015 ರಂದು 21:30  ಘಂಟೆಯಿಂದ ದಿನಾಂಕ  26.06.15 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾದವಧಿಯಲ್ಲಿ ಯಾರೋ ಕಳ್ಳರು  ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ   ಸಿದ್ದಾಪುರ ಬಸ್ಸು ನಿಲ್ದಾಣದ ಎದುರುಗಡೆ  ಇರುವ   ಶ್ರೀ ಕೃಷ್ಣ ಮೆಡಿಕಲ್ಸ್‌ ಶಾಪ್‌ನ   ಮಾಡಿನ ಹೆಂಚನ್ನು  ತೆಗೆದು ಉಪ್ಪರಿಗೆ   ಹಾಗೂ ಸೀಲಿಂಗ್ ತುಂಡು ಮಾಡಿ ಒಳ ಪ್ರವೇಶಿಸಿ  ಸುಮಾರು 24,000/- ರೂ ನಗದು  ಹಣವನ್ನು   ಕಳವು ಮಾಡಿಕೊಂಡು  ಹೋಗಿರುತ್ತಾರೆ.     ಬಗ್ಗೆ ಶಂಕರನಾರಾಯಣ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 145/2015 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ
  • ಬ್ರಹ್ಮಾವರ:  ಯಾರೋ ಕಳ್ಳರು ದಿನಾಂಕ: 25/06/2015 ರ ರಾತ್ರಿ 9:30 ಗಂಟೆಯಿಂದ ದಿನಾಂಕ: 26/06/2015 ರ ಬೆಳಿಗ್ಗೆ 06:20 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಕಚ್ಚೂರು ಗ್ರಾಮದ ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಮಹಡಿ ಮೇಲಿಂದ ಹೋಗಿ ಮಾಡಿಗೆ ಹಾಸಿದ ಫೈಬರ್ ಶೀಟ್ ಮಡಚಿ ಒಳಾಂಗಣಕ್ಕೆ ಪ್ರವೇಶಿಸಿ   ಗರ್ಭಗುಡಿಯ ಹೊರಬಾಗಿಲಿನ ಬೀಗವನ್ನು ಮುರಿದು ಗರ್ಭಗುಡಿಗೆ ಪ್ರವೇಶಿಸಿ ಗರ್ಭಗುಡಿಯ ಹೊರ ಬಾಗಿಲಿಗೆ ಮತ್ತು ದಾರಂದಕ್ಕೆ ಹಾಸಿದ ಸುಮಾರು 14 ಕೆಜಿಯಷ್ಟು ಬೆಳ್ಳಿಯನ್ನು ಕಿತ್ತು ತೆಗೆದು, ಗರ್ಭಗುಡಿಯ ದೇವರ ಮೂರ್ತಿಯಲ್ಲಿದ್ದ 1 ಚಿನ್ನದ ಕರಿಮಣಿ ಸರ, ನೀಲಿ ಮಣಿ ಇರುವ ಇನ್ನೊಂದು ಚಿನ್ನದ ಸರ, ಪ್ರಭಾವಳಿಯ 4 ಹಿತ್ತಾಳೆ ಪತಾಕೆ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ. 4,00,000/- ಆಗಿರುತ್ತದೆ.   ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣಾ ಅಪರಾಧ ಕ್ರಮಾಂಕ 125/2015 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ:  ದಿನಾಂಕ 25.06.2015 ರಂದು ಸಂಜೆ 6.00 ಗಂಟೆಯ ವೇಳೆಗೆ ರತ್ನಾಕರ  ಶೇರಿಗಾರರವರು ವೆಸ್ಟ್‌ ಬ್ಲಾಕ್‌ ರಸ್ತೆ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಇಲ್ಲಿನ ಮನೆಯ ಸ್ಲಾಬ್ ನಿಂದ ಜಾರಿ ಕೆಳಗೆ ಬಿದ್ದು  ತಲೆಕೈ, ಕಾಲಿಗೆ ತೀವ್ರ ಸ್ವರೂಪದ ಗಾಯಗೊಂಡಿದ್ದು  ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿರವರಿಗೆ ತೋರಿಸಿದಲ್ಲಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 23/15 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: