Tuesday, June 23, 2015

Daily Crime Reports As on 23/06/2015 At 19:30 Hrs


ಅಪಘಾತ ಪ್ರಕರಣ
  • ಉಡುಪಿ ಸಂಚಾರ:ದಿನಾಂಕ:23/06/2015 ರಂದು ಬೆಳಿಗ್ಗೆ 10:00 ಗಂಟೆಗೆ ಸಂತೆಕಟ್ಟೆ ಕಡೆಯಿಂದ ಒಬ್ಬ ನೀಲಿ ಬಣ್ಣದ ಓಮ್ನಿ ಕಾರಿನ ಚಾಲಕ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು, ಮಣ್ಣು ರಸ್ತೆಯಲ್ಲಿ ಕಲ್ಯಾಣಪುರದಿಂದ ಸಂತೆಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಗೋಪಾಲ ಸುವರ್ಣ (66) ತಂದೆ:ಅಂಗಾರ ಪೂಜಾರಿ, ವಾಸ:ಜೆನ್ನಿ ಹೌಸ್, ಎಡಬೆಟ್ಟು, ಕಲ್ಯಾಣಪುರ, ಉಡುಪಿರವರಿಗೆ, ಗೊರಟ್ಟಿ ಆಸ್ಪತ್ರೆಯ ಹತ್ತಿರ ತಲುಪಿದಾಗ, ಅವರ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಗೋಪಾಲ ಸುವರ್ಣರವರು ರಸ್ತೆಗೆ ಬಿದ್ದು ಅವರ ಎಡಭುಜಕ್ಕೆ ರಕ್ತಗಾಯವಾಗಿದ್ದು, ಕಣ್ಣಿನ ಬಳಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಗೊರಟ್ಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಢಿಕ್ಕಿ ಹೊಡೆದ ನೀಲಿ ಬಣ್ಣದ ಓಮ್ನಿ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 69/2015 ಕಲಂ:279, 337 ಐಪಿಸಿ 134 (ಎ & ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ:ಅಲೆವೂರಿನ ಗಣೇಶ (28) ಎಂಬವರು ಪಿರ್ಯಾದಿದಾರರಾದ ಉಮೇಶ್‌, ತಂದೆ:ಚೋಮ ಬಿ ಕೋಟ್ಯಾನ್‌, ವಾಸ:ಕೆಮ್ಮಣ್ಣು ಅಂಚೆ, ಹೂಡೆ, ಉಡುಪಿರವರ ಶ್ರೀದೇವಿ ಗ್ಲಾಸ್ ಹೌಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 20/06/15 ರಂದು ಅಂಗಡಿಯಲ್ಲಿ ಕೆಲಸಕ್ಕೆ ಬಂದವರು ವಾಪಸ್ಸು ಮನೆಗೆ ಹೋಗಿದ್ದು, ಮಧ್ಯಾಹ್ನ 2:00 ಗಂಟೆಗೆ ಗಣೇಶನ ಅಣ್ಣ ಸುರೇಶರವರು ಉಮೇಶ್‌ರವರಿಗೆ ಕರೆ ಮಾಡಿ ಗಣೇಶನು ಮನೆಯ ಬಳಿ ವಿಷ ತೆಗೆದುಕೊಂಡಿರುವುದಾಗಿ ತಿಳಿಸಿರುತ್ತಾರೆ. ಗಣೇಶನನ್ನು ಆತನ ಅಣ್ಣ ಸುರೇಶರವರು ಉಡುಪಿ ನ್ಯೂಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಈ ದಿನ ದಿನಾಂಕ 23/06/15ರಂದು 11:30 ಗಂಟೆಗೆ ಗಣೇಶನು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ಗಣೇಶನು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 27/15 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನುಷ್ಯ ಕಾಣೆ ಪ್ರಕರಣ
  • ಗಂಗೊಳ್ಳಿ:ಪಿರ್ಯಾದಿದಾರರಾದ ಶಂಕರ (32) ತಂದೆ:ವೆಂಕ, ಅಂಬೇಡ್ಕರ್‌‌ ನಗರ, ಸೇನಾಪುರ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರ ತಮ್ಮನಾದ ನಾಗರಾಜ (27) ಎಂಬವರು ದಿನಾಂಕ 21/06/2015 ರಂದು ರಾತ್ರಿ ಮನೆಯಲ್ಲಿ ಮಲಗಿದವರು, ದಿನಾಂಕ 22/06/2015 ರಂದು ಬೆಳಿಗ್ಗೆ 06:00 ಗಂಟೆಗೆ ಮನೆಯಲ್ಲಿ ಇಲ್ಲದೆ ಕಾಣೆಯಾಗಿರುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಗೆರೆಯಿರುವ ಅಂಗಿ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿ, ಒಂದು ಬ್ಯಾಗನ್ನು ಕೊಂಡೊಯ್ದಿರುತ್ತಾರೆ. ಕಾಣೆಯಾದ ನಾಗರಾಜರವರನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 88/2015 ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: