Monday, June 22, 2015

Daily Crime Reports As On 22/06/2015 At 17:00 Hrsಅಕ್ರಮ ಗಾಂಜಾ ಮಾರಾಟ ಪ್ರಕರಣ

  • ಉಡುಪಿ: ಗಿರೀಶ್ ಕುಮಾರ್ ಎಸ್‌, ಪಿಎಸ್‌ಐ ಉಡುಪಿ ನಗರ ಪೊಲೀಸ್ ಠಾಣೆ ಇವರು ಬೆಳಿಗ್ಗೆ ಸುಮಾರು 9:00 ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌‌ ನಲ್ಲಿರುವಾಗ ಪುತ್ತೂರು ಗ್ರಾಮದ ಅಂಬಾಗಿಲು ಮೀನು ಮಾರುಕಟ್ಟೆ ಬಳಿ ಸಾರ್ವಜನಿಕ ಸ್ಧಳದಲ್ಲಿ ಕೋಲ್ಕತ್ತ ಮೂಲದ ಇಬ್ಬರು  ಆಕ್ರಮವಾಗಿ ಗಾಂಜಾ ಎಂಬ ಮಾದಕ ವಸ್ತು ಹಿಡಿದುಕೊಂಡು ಅದನ್ನು ಮಾರಾಟ ಮಾಡಲು ಗಿರಾಕಿಗಾಗಿ ಕಾಯುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಪತ್ರಾಂಕಿತ ಅಧಿಕಾರಿಯವರಾದ ತಹಶೀಲ್ದಾರರು ಉಡುಪಿ ಹಾಗೂ ಪಂಚರ ಜೊತೆಯಲ್ಲಿ ಪುತ್ತೂರು ಗ್ರಾಮದ ಅಂಬಾಗಿಲು ಮೀನು ಮಾರುಕಟ್ಟೆ ಬಳಿ ಸಾರ್ವಜನಿಕ ಸ್ದಳದಲ್ಲಿ ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ನಡೆಸಿದಾಗ ಆರೋಪಿಗಳಾದ 1)ನೀಮಾಯಿ ಯಾನೆ ಬಲ್ ರಾಮ್ (40)  ತಂದೆ; ಮಂಗಳ್ ಸರ್ಕಾರ್ ವಾಸ; ಗಂಗಾರಮ್ ಪುರ ಗ್ರಾಮ, ಜಲಲ್ ಪುರ್ ಅಂಚೆ  ಮಾಲ್ಡ ಜಿಲ್ಲೆ. ಕೋಲ್ಕತ್ತ  ರಾಜ್ಯ 2) ಶ್ರೀಕಾಂತ್ (27) ತಂದೆ:ಸತರಂಜನ್ ದಾಸ್ ವಾಸ; ಪುಕುಡಿಯ ಪ್ರೌಢಶಾಲೆ  ಬಳಿ , ಖಘ ಚಿರಗ, ಮಾಲ್ಡ ಜಿಲ್ಲೆ. ಕೋಲ್ಕತ್ತ ಎಂಬವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ 500 ಗ್ರಾಂ ಗಾಂಜಾ ಇದರ ಅಂದಾಜು ಬೆಲೆ ಸುಮಾರು 3500/- ರೂಪಾಯಿ ಹಾಗೂ ಮೊಬೈಲ್ ಫೋನ್ -2, ಅಂದಾಜು ಮೌಲ್ಯ 4000 ಹಾಗೂ ನಗದು ರೂ 2500/- ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.  ಈ ಬಗ್ಗೆ  ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 153/2015 ಕಲಂ 8 A(C) r/w 20 (b) (ii) (A) NDPS Act  1985 ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


No comments: