Monday, June 22, 2015

Daily Crime Reports As on 22/06/2015 at 19:30 Hrs


ಕಳವು ಪ್ರಕರಣ

  • ಉಡುಪಿ: ಫಿರ್ಯದುದಾರರಾದ ಶ್ರೀಮತಿ ಜ್ಯೋತಿ (35) ಗಂಡ ಜಯಕರ ಪೂಜಾರಿ ವಾಸ: ಜೇಷ್ಠ ನಿಲಯ ನಾಲ್‌ಮರ್‌‌ ಕೊಳಲಗಿರಿ ಉಪ್ಪೂರು ಗ್ರಾಮ ಉಡುಪಿ ತಾಲೂಕು ರವರು ಉಡುಪಿ ಕರಾವಳಿ ಜಂಕ್ಷನ್‌ ಆನಂದ ಟ್ರಾವೆಲ್ಸ್‌‌ನಲ್ಲಿ ಆಂಕೌಟೆಂಟ್‌ ಕೆಲಸ ಮಾಡಿಕೊಂಡಿದ್ದು ಟ್ರಾವೆಲ್ಸ್‌ ಮಾಲಿಕರು ದಿನಾಂಕ 20/06/2015 ರಂದು 1,78,000 ರೂ ನಗದನ್ನು ಫಿರ್ಯಾದಿದಾರರಿಗೆ ಕೊಟ್ಟು ದಿನಾಂಕ: 22/06/2015 ರಂದು ಬಸ್ಸಿನ ತೆರಿಗೆ ಬ್ಯಾಂಕಿಗೆ ಕಟ್ಟಲು ಹೇಳಿದ್ದು ಅದನ್ನು ಕ್ಯಾಶ್‌ ಡ್ರಾವರ್‌ನಲ್ಲಿಟ್ಟು ದಿನಾಂಕ 20/06/2015 ರಂದು ಸಂಜೆ 17:30 ಗಂಟೆಗೆ ಮನಗೆ ಹೋಗಿದ್ದು ಫಿರ್ಯಾದಿದಾರರಿಗೆ ಬಾನುವಾರ ರಜೆಯಿರುವುದರಿಂದ ಆಫೀಸಿಗೆ ಬಾರದೇ ಇದ್ದು ದಿನಾಂಕ 22/06/2015 ರಂದು ಮೋಹನ ಪೂಜಾರಿಯವವರು ಟ್ರಾವಲ್ಸ್‌ ನ ಶೆಟ್ಟರ್ ಬಾಗಿಲನ್ನು ಪ್ರತಿ ದಿನದಂತೆ ಬೆಳಿಗ್ಗೆ 6:00 ಗಂಟೆಗೆ ಅರ್ಧಕ್ಕೆ  ಶೆಟ್ಟರ್‌ ತೆರೆದು ಹೋಗಿರುತ್ತಾರೆ. ಫಿರ್ಯಾದಿದಾರರು ಬೆಳಿಗ್ಗೆ 8:45 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಕ್ಯಾಶ್‌ ಡ್ರಾವರ್‌ನ ಲಾಕ್‌ ಮುರಿದು ನಗದು 1,78,000 ರೂ ಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಶ್ರೀಮತಿ ಜ್ಯೋತಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 154/2015 ಕಲಂ 454, 457, 380 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
  • ಉಡುಪಿ: ದಿನಾಂಕ 22-06-2015 ರಂದು ಪಿರ್ಯಾದಿದಾರರಾದ ನಾಗೇಶ್ ಆಚಾರ್ಯ ತಂದೆ ಲಕ್ಷ್ಮಣ ಆಚಾರ್ಯ. ವಾಸ ಮದ್ವ ನಗರ ಕಂಗನಬೆಟ್ಟು, ಕೊಡವುರು ಅಂಚೆ ಎಂಬವರು ಕೆಎ-20 ಹೆಚ್-9699 ನೇ M80 ಮೊಪೆಡ್‌ನಲ್ಲಿ ಅಂಬಾಗಿಲು ಕಡೆಯಿಂದ ಕಲ್ಸಂಕ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 01:00 ಗಂಟೆಗೆ ಗುಂಡಿಬೈಲು ಪಾಡಿಗಾರ್ ಗೇಟ್ ಬಳಿ ತಲುಪುವಷ್ಟರಲ್ಲಿ ಕೆ.ಎಲ್-44 ಸಿ-8686 ನೇ ಕಾರಿನ ಚಾಲಕ ಬಿಜು ಅಬ್ರಾಹಂ ಎಂಬವರು ಯಾವುದೇ ಸೂಚನೆಯನ್ನು ನೀಡದೇ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಒಮ್ಮೆಲೆ ಬಲಬದಿಯ ಬಾಗಿಲನ್ನು ತೆರೆದ ಪರಿಣಾಮ ಬಾಗಿಲು ಪಿರ್ಯಾದುದಾರರ M80 ಮೊಪೆಡ್‌ಗೆ ತಾಗಿ, ಪಿರ್ಯಾದುದಾರರು M80 ಮೊಪೆಡ್‌ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ನಾಗೇಶ್ ಆಚಾರ್ಯ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2015 ಕಲಂ 279, 337 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಫಿರ್ಯಾದಿದಾರರಾದ ನವೀನ್‌ (24) ತಂದೆ ಐತ ಕೊರಗ ವಾಸ: ರಂಗನಕೆರೆ ಹೇರಾಡಿ ಗ್ರಾಮ ಬಾರಕೂರು ಅಂಚೆ ಉಡುಪಿ ತಾಲೂಕು ಎಂಬವರ ತಂದೆ ಐತ ಕೊರಗ (45) ರವರು ಪ್ರತಿ ದಿನ ಕೂಲಿ ಕೆಲಸದ ಬಗ್ಗೆ ಉಡುಪಿಗೆ ಬರುತ್ತಿದ್ದು ದಿನಾಂಕ 21/06/2015 ರಂದು ಬೆಳಿಗ್ಗೆ 6:30 ಗಂಟೆಗೆ ಮನೆಯಿಂದ ಕೂಲಿ ಕೆಲಸಕ್ಕೆ ಬಂದವರು ಮನೆಗೆ ವಾಪಸ್ಸು ಹೋಗದೇ ಇದ್ದು ದಿನಾಂಕ 22/06/2015 ರಂದು ನೆರೆಮನೆಯ ಅನೀಪ್‌ ಎಂಬವರು ಪೋನ್‌ ಮಾಡಿ ದಿನಾಂಕ 21/06/2015 ರಂದು ಬೆಳಿಗ್ಗೆ 10:30 ಗಂಟೆ ಸಮಯಕ್ಕೆ ಕಾಫಿಯ ಹೋಟೇಲ್‌ ಬಳಿ ಬದ್ದಿದವರನ್ನು 108 ವಾಹನದವರು ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ದಿನಾಂಕ: 21/06/2015 ರಂದು ರಾತ್ರಿ 23:10 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಮೃತರು ಅತಿಯಾದ ಶರಬು ಸೇವಿಸುವ ಅಭ್ಯಾಸವುಳ್ಳವರಾಗಿದ್ದು ದಿನಾಂಕ: 21/06/2015 ರಂದು ಬೆಳಿಗ್ಗೆ 10:30 ಗಂಟೆಗೆ ಅತಿಯಾದ ಶರಬು ಸೇವಿಸಿ ಬಿದ್ದು ಅಥವಾ ಇತರೇ ಯಾವುದೋ ಕಾರಣದಿಂದ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ನವೀನ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 30/2015 ಕಲಂ 174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: