Sunday, June 21, 2015

Daily Crime Reports As On 21/06/2015 At 07:00 Hrs



ಅಪಘಾತ ಪ್ರಕರಣ
  • ಹೆಬ್ರಿ:  ಪಿರ್ಯಾದಿ ಚಂದ್ರ (30) ಎಂಬುವವರು ದಿನಾಂಕ 19-06-2015 ರಂದು ತನ್ನ ಕೆ.ಎ.20.ಎ.1897 ನೇ 407 ಟೆಂಪೋದಲ್ಲಿ ಸೋಮೇಶ್ವರ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿರುವಾಗ   ಸಮಯ ಸುಮಾರು ಸಂಜೆ 4:00 ಗಂಟೆಗೆ ಸೀತಾನದಿ ಕೈಕಂಬ ಜಂಕ್ಷನ್‌ ತಲುಪುವಾಗ, ಮುದ್ರಾಡಿ ಕಡೆಯಿಂದ ಸೋಮೇಶ್ವರ ಕಡೆಗೆ ಹೋಗುತ್ತಿರುವ ಕೆ.ಎ.19.ಝಡ್‌.3111 ನೇ  ಮಾರುತಿ ಓಮಿನಿ ಕಾರಿನ  ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿ ಚಂದ್ರ  ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರ  ಹಾಗೂ  ವಾಹನದಲ್ಲಿದ್ದ ಇಬ್ಬರು ಕೂಲಿಗಳಿಗೆ ಸಣ್ಣ-ಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ  68/15 ಕಲಂ 279, 337 ಐ.ಪಿ.ಸಿ  ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ಉದಯ ಮರಕಾಲ(36),ತಂದೆ:ತಿಮ್ಮಪ್ಪ ಮರಕಾಲ,ವಾಸ:ದೇವಸ್ಥಾನ ಬೆಟ್ಟು,ಬೇಳೂರು ಗ್ರಾಮ,ಕುಂದಾಪುರ ತಾಲೂಕು.ಇವರು ದಿನಾಂಕ:21/06/2015 ರಂದು ಮದ್ಯಾಹ್ನ 14:30 ಗಂಟೆ ಸಮಯಕ್ಕೆ ತನ್ನ ಆಟೋರಿಕ್ಷಾ ನಂಬ್ರ  KA20 A9067 ನೇಯದರಲ್ಲಿ ರಾಘು ಶೆಟ್ಟಿ,,ಪ್ರದೀಪ್ ಶೆಟ್ಟಿ, ಮತ್ತು ಆಶಾ,ಹಾಗೂ  ಅವರ ಚಿಕ್ಕ  ಮಗು ಶ್ರದ್ದಾಳನ್ನು  ಬೇಳೂರಿನಿಂದ ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಬಿಡಲು  ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಇಂಡಿಯನ್   ಪೌಲ್ಟ್ರಿ ಫಾರಂ ಬಳಿ ರಾ,ಹೆ 66 ರಲ್ಲಿ ಆಟೋ ರಿಕ್ಷಾವನ್ನು ಚಲಾಯಿಸಿ ಕೊಂಡು  ಹೋಗುತ್ತಿರುವಾಗ  KA20 Z 1196 ನೇ ಕಾರಿನ ಚಾಲಕ  ಅಜಿತ್‌ ಎಂಬುವರು ಆತನ ಕಾರನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿ ಉದಯ ಮರಕಾಲ ಇವರ ಆಟೋರಿಕ್ಷಾಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ  ಪರಿಣಾಮ ರಿಕ್ಷಾ ಸಂಪೂರ್ಣ  ಜಖಂ ಗೊಂಡಿದ್ದು ಪಿರ್ಯಾದಿದಾರರಿಗೂ ಹಾಗೂ ಸಹ ಪ್ರಯಾಣೆಕರಿಗೆ ತೀವ್ರ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ: ಪೊಲೀಸ್‌ ಠಾಣೆಯಲ್ಲಿ ಅಪರಾಧ 146/2015 ಕಲಂ:279,338  ಐಪಿಸಿ   ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     

ಹಲ್ಲೆ ಪ್ರಕರಣ   
  • ಕುಂದಾಪುರ:  ಪಿರ್ಯಾದಿ ಮಂಜುಳಾ ವಿ ಶೇಟ್‌ (48) ಗಂಡ: ದಿ. ಕೆ. ವಿಶ್ವನಾಥ ಶೇಟ್‌ ವಾಸ: ಗುರುಕೃಪಾ ನಿಲಯ, ಈಸ್ಟ್‌ ಬ್ಲಾಕ್‌ ರಸ್ತೆ, ಕಸಬಾ ಗ್ರಾಮ, ಕುಂದಾಪುರ ತಾಲೂಕು  ಎಂಬ ಮನೆಯಲ್ಲಿ ವಾಸ್ತವ್ಯವಿದ್ದು, ದಿನಾಂಕ 20.06.2015 ರಂದು ಮಧ್ಯಾಹ್ನ 2:30 ಗಂಟೆಗೆ ಆಪಾದಿತರುಗಳಾದ 1) ನಾಗರತ್ನ 2) ಪ್ರೇಮಾ 3) ಗುರುರಾಜ್‌ 4) ಬಾಬು 5) ಶೈಲಜಾ 6) ವಿಕ್ಕಿ @ ವಿಕ್ರಮ್‌ ಶೇಟ್‌  ಎಲ್ಲರ ವಿಳಾಸ: ಹೊಸನಗರ, ಶಿವಮೊಗ್ಗ ಜಿಲ್ಲೆ. ಇವರು  ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಕೆಎ 20 ಡಿ 8898 ನೇ ಕಾರಿನಲ್ಲಿ ಬಂದು ಪಿರ್ಯಾದುದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ, ಆಪಾದಿತರಲ್ಲಿ ನಾಗರತ್ನಳು ಏಕಾಏಕಿಯಾಗಿ ಪಿರ್ಯಾದುದಾರರಿಗೆ ಕೈಯಿಂದ ಕೆನ್ನೆಗೆ ಹೊಡೆದು, ನೆಲಕ್ಕೆ ದೂಡಿ ಹಾಕಿ, ಅವಾಚ್ಯವಾಗಿ ಬೈದಿದ್ದು, ಗುರುರಾಜನು ಪಿರ್ಯಾದುದಾರರಿಗೆ ಹೊಡೆದು, ‘ನೀನು ಈ ಮನೆಯನ್ನು ಬಿಟ್ಟು ಹೋಗದೇ ಇದ್ದರೆ ನಿಮ್ಮೆಲ್ಲರ ಕೈಕಾಲುಗಳನ್ನು ಮುರಿದು ಹಾಕುತ್ತೇವೆ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ  ಅಪರಾಧ ಕ್ರಮಾಂಕ 241/2015, ಕಲಂ: 143, 147, 448, 504, 323, 354(ಎ), 506 ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     

ಅಸ್ವಾಭಾವಿಕ ಮರಣ ಪ್ರಕರಣ:
  • ಕೋಟ: ಪಿರ್ಯಾದಿ ಗೋಪಾಲ ಶೆಟ್ಟಿ(46),ತಂದೆ:ದಿ.ಮಹಾಬಲ.ಶೆಟ್ಟಿ ,ವಾಸ:ಸಂದು ಶ್ರೀ ಅಕ್ಕಮ್ಮ ನಿಲಯ,ಹರ್ಕಾಡಿ ಮಕ್ಕಿಮನೆ,ಕಕ್ಕುಂಜೆ ಗ್ರಾಮ,ಕುಂದಾಪುರ ತಾಲೂಕು ಇವರ ಭಾವ ಬಾಬು @ ದೇವದಾಸ ಶೆಟ್ಟಿ ಪ್ರಾಯ:63 ವರ್ಷ ಎಂಬುವರು ನಾಲ್ಕಾರು ವರ್ಷದ ಹಿಂದೆ ವಿದುತ್ಯ್ ಶಾಕ್ ಹೊಡೆದು ಕೈಯ ಸ್ವಾಧೀನತೆಯನ್ನು ಕಳೆದು ಕೊಂಡಿದ್ದು ಯಾವುದೇ ಕೆಲಸ ಕಾರ್ಯ ಮಾಡಲು ಆಗದೇ ಇದ್ದು ಇದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:19/06/2015 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ:20/06/2015 ರ ಬೆಳಿಗ್ಗೆ 06::00  ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಕಕ್ಕುಂಜೆ ಗ್ರಾಮದ ಹರ್ಕಾಡಿ ಮಕ್ಕಿ ಮನೆ  ಎಂಬಲ್ಲಿರುವ ತನ್ನ ಮನೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ  . ಈ ಬಗ್ಗೆ ಕೋಟ ಠಾಣೆಯಲ್ಲಿ ಯು.ಡಿಆರ್‌ ನಂ 27/2015 ಕಲಂ:174 ಸಿ.ಆರ್.ಪಿ.ಸಿ  ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮಟ್ಕಾ ಜುಗಾರಿ ಪ್ರಕರಣ

  • ಮಣಿಪಾಲ:ದಿನಾಂಕ 20.06.15ರಂದು ಪೊಲೀಸ್‌ ನಿರೀಕ್ಷಕರು ಮಣಿಪಾಲ ರವರು ಎ.ಎಸ್.ಐ ಆನಂದ ರವರು ನೀಡದ ಮಾಹಿತಿಯಂತೆ ಮಣಿಪಾಲ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಅಪಾದಿತನಾದ ಅಂತೋನಿ ಡಿ ಸೋಜಾ(33), ತಂದೆ: ಅಲ್ಪ್ರೈಡ್‌ ಡಿಸೋಜಾ, ವಾಸ: ನರವಾಡು, ಮದಗ, ತೆಂಕಬೆಟ್ಟು ಪೋಸ್ಟ್‌‌, ಉಪ್ಪೂರು ಗ್ರಾಮ, ಉಡುಪಿ ತಾಲೂಕು. ಎಂಬವನನ್ನು ದಸ್ತಗಿರಿ ಮಾಡಿ ಆತನಿಂದ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸಿದ ರೂ. 1,410/- ಮಟ್ಕಾ ನಂಬರ್‌ ಬರೆದ ಚೀಟಿ, ಬಾಲ್‌ ಪೆನ್‌ ಹಾಗೂ ಮೊಬೈಲ್‌ ಪೋನ್‌ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 116/15 ಕಲಂ : 78 (i) (iii) ಕೆ.ಪಿ. ಆಕ್ಟ್  ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: