Friday, June 19, 2015

Daily Crime Reports As on 19/06/2015 At 17:00 Hrs


ದನ ಕಳವು ಪ್ರಕರಣ
  • ಅಜೆಕಾರು: ಪಿರ್ಯಾಧಿ ಸುಕೇಶ ಹೆಗ್ಡೆ (36) ತಂದೆ: ಸದಾಶಿವ ಹೆಗ್ಡೆ ವಾಸ: ಕುಂಜಕ್ಯಾರು ಮನೆ ಕಡ್ತಲ ಗ್ರಾಮ ಇವರಿಗೆ ಇತ್ತೀಚಿಗೆ ಕಡ್ತಲ ಪರಿಸರದಲ್ಲಿ ಕೆಲವೊಂದು ಮನೆಯಿಂದ ಮೇಯಲು ಬಿಟ್ಟ ದನಗಳನ್ನು ಯಾರೋ ಕಳ್ಳರು ಕದ್ದು ಮಾರಾಟ ಮಾಡುವ ಬಗ್ಗೆ ಮಾಹಿತಿ ಇದ್ದು ಅದರಂತೆ ದಿನಾಂಕ 18/19.06.2015 ರಂದು ರಾತ್ರಿ ಕಡ್ತಲ ಗ್ರಾಮದ ಸಿರಿಬೈಲು ತೀರ್ಥತೊಟ್ಟು ಎಂಬಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲು ತುಂಬಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ 02:00 ಗಂಟೆಗೆ ಸದ್ರಿ ಸ್ಥಳಕ್ಕೆ ಸ್ನೇಹಿತರ ಜೊತೆ ಹೋಗಿ ನೋಡಲಾಗಿ ಅಲ್ಲಿ ಒಂದು ಜೈಲೋ ವಾಹನ ನಂಬ್ರ ಕೆ.ಎ 19 ಎಎ 1434 ಮತ್ತು ಪಿಕಪ್‌ ವಾಹನ ನಂಬ್ರ ಕೆ ಎ 19 ಡಿ 6903 ರಲ್ಲಿ ಕಳವು ಮಾಡಿದ 5 ಜಾನುವಾರುಗಳನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ವಾಹನಕ್ಕೆ ತುಂಬಿಸಿ ಸಾಗಾಟ ಮಾಡಲು ಇಟ್ಟಿರುವುದನ್ನು ಕಂಡು ಅಜೆಕಾರು ಠಾಣೆಗೆ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2015 ಕಲಂ 8,9,11 ಕರ್ನಾಟಕ ಗೋ ಹತ್ಯೆ ನಿಷೇದ ಮತ್ತು ಗೋ ಸಂರಕ್ಷಣಾ ಕಾಯಿದೆ-1964, ಕಲಂ 11(1)(ಎ) ಪ್ರಾಣಿ ಹಿಂಸೆ ಪ್ರತಿಭಂದಕ ಕಾಯ್ದೆ ಮತ್ತು 379 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: