Wednesday, June 17, 2015

Daily Crime Reports As on 17/06/2015 at 19:30 Hrs



ಅಕ್ರಮ ರಕ್ತಚಂದನ ಮರದ ತುಂಡುಗಳ ಸಾಗಾಟ ಪ್ರಕರಣ

  • ಮಣಿಪಾಲ: ದಿನಾಂಕ 17/06/2015 ರಂದು ಮಣಿಪಾಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಶ್ರೀ ಎಸ್‌.ನಾಗೇಶ್‌ ಮೇಸ್ತ ರವರಿಗೆ ಅಂಬಾಗಿಲು ರಸ್ತೆ ಕಡೆಯಿಂದ ಮಣಿಪಾಲದ ಕಡೆಗೆ ಕೇರಳದ ಕೆಎಲ್‌ ರಿಜಿಸ್ಟ್ರೇಶನ್‌ ಪಿಕಪ್‌ ವಾಹನದಲ್ಲಿ ಹಾಗೂ ಇನ್ನೋವಾ ಕಾರಿನಲ್ಲಿ ಯಾರೋ ಮರಗಳ ತುಂಡುಗಳನ್ನು ಸಾಗಾಟ ಮಾಡಿಕೊಂಡು ಬರುತ್ತಿರುವುದಾಗಿ ಸಿಕ್ಕಿದ ಖಚಿತ ಮಾಹಿತಿಯಂತೆ ಠಾಣಾ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 7:45 ಗಂಟೆಗೆ ಪೆರಂಪಳ್ಳಿ ರಸ್ತೆಯಲ್ಲಿ ಭಾರತೀಯ ಆಹಾರ ನಿಗಮದ ಗೋಡೌನ್ ಕಟ್ಟಡದ ಬಳಿ ರಸ್ತೆಯ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿಕೊಂಡಿರುವಾಗ ಅಂಬಾಗಿಲು ಕಡೆಯಿಂದ ಮಣಿಪಾಲದ ಕಡೆಗೆ ಒಂದು ಕೇರಳ ರಿಜಿಸ್ಟ್ರೇಶನ್ ಪಿಕ್‌ಅಪ್‌ ವಾಹನ KL-03-W-8171 ಬರುತ್ತಿರುವುದನ್ನು ಕಂಡು ತಡೆದು ನಿಲ್ಲಿಸಿದಾಗ ವಾಹನದ ಹಿಂಬದಿ ಮರದ ತುಂಡುಗಳನ್ನು ತುಂಬಿಸಲಾಗಿದ್ದು, ಸದ್ರಿ ವಾಹನದ ಹಿಂಬದಿಯಲ್ಲಿ ಒಂದು Grey ಕಲರಿನ ಇನ್ನೋವಾ ಕಾರು ಮಣಿಪಾಲದ ಕಡೆಗೆ ಬರುತ್ತಿರುವುದನ್ನು ನಿಲ್ಲಿಸಿದಾಗ ಕಾರು ನಂಬ್ರ KL-31-E-5353 ಆಗಿದ್ದು ಕಾರಿನ ಒಳಗಡೆ ಒಟ್ಟು ಆರು ಮಂದಿ ಕುಳಿತಿದ್ದು, ಕಾರಿನಲ್ಲಿ ಸೀಟಿನ ಅಡಿಯಲ್ಲಿ ಕೂಡ ಸಣ್ಣ ಸಣ್ಣ ಮರದ ತುಂಡುಗಳನ್ನು ತುಂಬಿಸಿದ್ದು ಕಂಡು ಬಂತು. ಸದ್ರಿ ಕಾರಿನ ಹಿಂಬದಿ ಒಂದು Grey ಕಲರಿನ ರಿಡ್ಜ್‌ ಕಾರು ಬರುತ್ತಿದ್ದು, ಎದುರಿನಲ್ಲಿ ವಾಹನವನ್ನು ನಿಲ್ಲಿಸಿದ್ದನ್ನು ಕಂಡು ಒಮ್ಮೆಲೇ ರಸ್ತೆಯಲ್ಲಿ ತಿರುಗಿಸಿ ವಾಪಾಸು ಅಂಬಾಗಿಲು ಕಡೆ ಪರಾರಿಯಾದಾಗ ಡಿಸಿಐಬಿ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 8:30 ಗಂಟೆಗೆ ವಾಹನಗಳನ್ನು ನಿಲ್ಲಿಸಿ ಪಿಕ್ ಆಪ್ ವಾಹನದ ನಂಬ್ರ ಕೆ.ಎಲ್-03-ಡಬ್ಲ್ಯೂ-8171 ಹಾಗೂ ಇನ್ನೋವ ಕಾರು ನಂಬ್ರ ಕೆ.ಎಲ್.31.ಇ.5353ನೇದನ್ನು ವಶಕ್ಕೆ ತೆಗೆದುಕೊಂಡು ವಾಹನಗಳಲ್ಲಿದ್ದ 7 ಜನ ಆರೋಪಿಗಳಾದ 1.ಸೈಫ್, ಪ್ರಾಯ 32 ವರ್ಷ, ತಂದೆ: ಹನೀಫ್, ವಾಸ: ನಟ್ಟಾನಿ ವಿಲಾಹಿಲ್‌, ಪಡುತಾಹಿಲ್‌, ಶೂರ್‌‌ನಾಡು ಪೋಸ್ಟ್‌, ಕುನ್ನತ್ತೂರ್‌ ತಾಲೂಕು, ಕೊಲ್ಲಂ ಜಿಲ್ಲೆ, ಕೇರಳ, 2. ನದೀಂ ಸುನಿಲ್, ಪ್ರಾಯ 23 ವರ್ಷ, ತಂದೆ: ಸುನಿಲ್‌ ವಾಹಿದ್‌‌, ವಾಸ: ತೆಂಗಿನ ತಾರಾಯಿ, ಎಲ್ಲಿಪಾಕುಲಂ ರಸ್ತೆ, ಪಲ್ಲಿಕಾಲ್‌ ಪೋಸ್ಟ್‌, ಆಲಾಪಿ ಜಿಲ್ಲೆ. ಮೊವೆಲ್‌ಕಂ ತಾಲೂಕು, 3.ನಿಸಾರ್‌‌.ಬಿ, ಪ್ರಾಯ 36 ವರ್ಷ, ತಂದೆ: ಬಶೀರ್‌, ವಾಸ: ನಿಜಾಮ್‌ ಮಂಜಿಲ್‌, ಮೊಟ್ಟಕೆಲ್‌ ಗ್ರಾಮ, ಪಲ್ಲಿಕಲ್‌ ಪೋಸ್ಟ್‌, ತೆವವಲ್‌‌ಕಾರ್‌‌, ಚವರಾ ತಾಲೂಕು, ಕೊಲ್ಲಂ ಜಿಲ್ಲೆ, 4.ಅಮೀನ್‌.ಎ, ಪ್ರಾಯ 23 ವರ್ಷ, ತಂದೆ: ಅಹಮ್ಮದ್‌ ಕುಂಜು, ವಾಸ: ಕಲ್ಲೇತ್‌ ಹೌಸ್‌, ಎಲ್ಲಿಪಾಕುಲಂ, ಪಲ್ಲಿಕಲ್‌ ಪೋಸ್ಟ್‌‌, ಆಲಾಫಿ ಜಿಲ್ಲೆ, 5.ನಿಯಾಜ್‌‌, ಪ್ರಾಯ 23 ವರ್ಷ, ತಂದೆ: ನಿಸಾರ್‌, ವಾಸ: ತಾರಿಯಲ್ ಪುತ್ತೇನ್ ವೀಡು, ಇಪ್ಪಕುಲಂ, ಪಲ್ಲಿಕಲ್ ಪೋಸ್ಟ್‌, ಆಲಾಫಿ ಜಿಲ್ಲೆ, 6,ಆಯ್‌ಮೆನ್‌.ಎಮ್‌.ಎಸ್‌, ಪ್ರಾಯ 26 ವರ್ಷ, ತಂದೆ: ಮೊಹಮ್ಮದ್‌ ಶಹಜಹಾನ್‌, ವಾಸ: ಅಲ್ಬರ್ಕ್‌, ಕಟ್ಟಾಚಿರಾ, ಪಲ್ಲಿಕಲ್‌ ಪೋಸ್ಟ್‌‌‌, ಆಲಾಫಿ ಜಿಲ್ಲೆ, ಮೊವೆಲ್‌ಕಂ ತಾಲೂಕು, 7.ಶಹಜಹಾನ್‌,32 ವರ್ಷ,ತಂದೆ: ಸುಬೈರಿ ಕುಟ್ಟಿ, ವಾಸ: ಬೈದೆತ್‌ ಹೌಸ್‌, ತೊಡಿಯೂರು, ಎಸ್‌ಆರ್‌‌ಪಿಎಮ್‌ ಪೋಸ್ಟ್‌‌, ಕರಿನಾಗಪಲ್ಲಿ ತಾಲೂಕು, ಕೊಲ್ಲಂ ಜಿಲ್ಲೆ ರವರನ್ನು ಹಾಗೂ ಅವರ ವಶದಲ್ಲಿದ್ದ ಒಟ್ಟು 575 ಕೆ.ಜಿ ರಕ್ತ ಚಂದನ ಮರದ ತುಂಡುಗಳು, 8 ಮೊಬೈಲ್‌ ಪೋನ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಸದ್ರಿ ರಕ್ತ ಚಂದನದ ಮರದ ತುಂಡುಗಳನ್ನು ಕೇರಳದಿಂದ ಮಣಿಪಾಲದ ಸಚಿನ್‌ ಶೆಟ್ಟಿ, ನೆಲ್ಸನ್‌, ಆಸ್ಟಿನ್‌ ಎಂಬವರಿಗೆ ಮಾರಾಟಕ್ಕಾಗಿ ನಾವು ತೆಗೆದುಕೊಂಡು ಬಂದಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ. ಆಪಾದಿತರು ಯಾವುದೇ ಪರವಾನಿಗೆ ಇಲ್ಲದೆ, ದಾಖಲೆ ಪತ್ರವಿಲ್ಲದೆ ರಕ್ತ ಚಂದನವೆಂಬ ಮರದ ತುಂಡುಗಳನ್ನು ಮಾರಾಟಕ್ಕಾಗಿ ತಮ್ಮ ವಶದಲ್ಲಿಟ್ಟುಕೊಂಡು ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/15 ಕಲಂ 50 (ಬಿ) ಕರ್ನಾಟಕ ಅರಣ್ಯ ಕಾಯ್ದೆ ಮತ್ತು 144 ಕರ್ನಾಟಕ ಅರಣ್ಯ ಅದಿನಿಯಮ ಜೊತೆಗೆ 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: