Sunday, June 14, 2015

Daily Crime Reports As on 14/06/2015 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಶಂಕರನಾರಾಯಣ: ಪಿರ್ಯಾದಿದಾರರಾದ ವಿಜಯ ಪೂಜಾರಿ ತಂದೆ: ಕುಷ್ಟ ಪೂಜಾರಿ ವಾಸ: ಜ್ಯೋತಿ ನಿಲಯ ಹಜಾರಗುಡ್ಡೆ ಬೆಳ್ವೆ ಪೋಸ್ಟ್ ಅಲ್ಬಾಡಿ ಗ್ರಾಮ ಎಂಬವರ ಚಿಕ್ಕಪ್ಪ ತೇಜ (62) ರವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಅದೇ ಕಾರಣದಿಂದ ದಿನಾಂಕ 08/06/2015 ರಂದು ಮಧ್ಯಾಹ್ನ ಸುಮಾರು 02.30 ಗಂಟೆ ಸಮಯಕ್ಕೆ ಶರಾಬಿನಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ 14/06/2015 ರಂದು 13:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ತೇಜ ರವರು ಮೃತಪಟ್ಟಿರುತ್ತಾರೆ ಎಂಬುದಾಗಿ ವಿಜಯ ಪೂಜಾರಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 9/2015 ಕಲಂ 174 ಸಿ. ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: