Wednesday, June 10, 2015

Daily Crime Reports As on 10/06/2015 at 19:30 Hrsಜುಗಾರಿ ದಾಳಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 10/06/2015 ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕನಾದ ಶ್ರೀ ಸುಬ್ಬಣ್ಣ ಬಿ. ರವರಿಗೆ ಹೊಸಾಡು ಗ್ರಾಮದ  ಕಂಚುಗೋಡು ರಾಮ ಮಂದಿರದ ಹತ್ತಿರ ಸರಕಾರಿ ಹಾಡಿಯಲ್ಲಿ ಸಾರ್ವಜನಿಕ  ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವುದಾಗಿ ಮಾಹಿತಿ ಬಂದಂತೆ ಕೂಡಲೇ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 13.45 ಗಂಟೆಗೆ ದಾಳಿ ನಡೆಸಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1. ಸತೀಶ ಪ್ರಾಯ 25 ವರ್ಷ ತಂದೆ ಬಾಬು ಖಾರ್ವಿ ವಾಸ ಕಂಚುಗೋಡು ಹೊಸಾಡು ಗ್ರಾಮ ಕುಂದಾಪುರ  ತಾಲೂಕು. 2). ಗುರುರಾಜ  ಖಾರ್ವಿ ಪ್ರಾಯ 24 ವರ್ಷ ತಂದೆ ನಂದ ಖಾರ್ವಿ ವಾಸ  ಕಂಚುಗೋಡು ಹೊಸಾಡು ಗ್ರಾಮ ಕುಂದಾಪುರ  ತಾಲೂಕು, 3). ವಿವೇಕ ಖಾರ್ವಿ ಪ್ರಾಯ 23 ವರ್ಷ ತಂದೆ ದಿ. ರಾಮಚಂದ್ರ ಖಾರ್ವಿ ವಾಸ ಕಂಚುಗೋಡು ಹೊಸಾಡು ಗ್ರಾಮ ಕುಂದಾಪುರ  ತಾಲೂಕು, 4). ಸುಭಾಶ್ ಖಾರ್ವಿ ಪ್ರಾಯ 29 ವರ್ಷ ತಂದೆ ನಾರಾಯಣ ಖಾರ್ವಿ ವಾಸ ಕಂಚುಗೋಡು ಹೊಸಾಡು ಗ್ರಾಮ ಕುಂದಾಪುರ  ತಾಲೂಕು. 5).  ನಾಗರಾಜ ಖಾರ್ವಿ ಪ್ರಾಯ 50 ವರ್ಷ ತಂದೆ  ಗೋಪಾಲ ಖಾರ್ವಿ ವಾಸ ಕಂಚುಗೋಡು ಭಗತ್ ನಗರ  ಹೊಸಾಡು ಗ್ರಾಮ ಕುಂದಾಪುರ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ, ಆಪಾದಿತರು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 3000/- ರೂ , ವಿವಿಧ ಜಾತಿಯ ಇಸ್ಪೀಟ್ ಎಲೆಗಳು 52, ಹಾಗೂ ಪ್ಲಾಸ್ಟಿಕ್ ನೆಲಕ್ಕೆ ಹಾಸಿದ  ಹಳೆಯ ನ್ಯೂಸ್  ಪೇಪರ್ 1 ನ್ನು ಮಹಜರು ಮುಖೇನ ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2015 ಕಲಂ 87 ಕರ್ನಾಟಕ  ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 10/06/2015 ರಂದು ಸಮಯ ಬೆಳಿಗ್ಗೆ 9:00 ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು   ಗ್ರಾಮದ  ಯೂನಿಟಿ ಹಾಲ್ ಬಳಿ ಪಶ್ಚಿಮ ಬದಿಯ ರಾ.ಹೆ 66 ರಸ್ತೆಯಲ್ಲಿ ಆಪಾದಿತ ವಿಷ್ಣು ಆಚಾರಿ ಎಂಬವರು KA 09-ED-5707 ನೇ  ಬೈಕನ್ನು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ವಿರುದ್ಧ ದಿಕ್ಕಿನಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟಲು ನಿಂತುಕೊಂಡಿದ್ದ ಪಿರ್ಯಾದಿದಾರರಾದ ಪದ್ದು ದೇವಾಡಿಗ ಪ್ರಾಯ:55 ವರ್ಷ, ತಂದೆ: ಸುಬ್ಬ ದೇವಾಡಿಗ, ವಾಸ: ಹಂಗಳೂರು ಗ್ರಾಮ, ಕುಂದಾಪುರ ತಾಲೂಕು ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಸೊಂಟ, ಮುಖ ಹಾಗೂ ಬಲ ಕೈಗೆ ರಕ್ತಗಾಯ ಹಾಗೂ ಒಳ ನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಪದ್ದು ದೇವಾಡಿಗ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: