Wednesday, June 03, 2015

Daily Crime Reports As on 03/06/2015 at 19:30 Hrsಅಪಘಾತ ಪ್ರಕರಣಗಳು  

  • ಕುಂದಾಪುರ: ದಿನಾಂಕ 03/06/2015 ರಂದು ಸಮಯ ಮಧ್ಯಾಹ್ನ 1:00 ಗಂಟೆಗೆ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಕೌಜೂರು ಎಂಬಲ್ಲಿ ರಸ್ತೆಯಲ್ಲಿ, ಆಪಾದಿತ ಪ್ರಶಾಂತ್ ಕುಮಾರ್ ಶೆಟ್ಟಿ ಕೆ. ಆರ್ ಎಂಬವರು KA 14-N-8600ನೇ ಕಾರನ್ನು ನೇರಳಕಟ್ಟೆ  ಕಡೆಯಿಂದ  ತಲ್ಲೂರು  ಕಡೆಗೆ ಅತೀ ವೇಗ  ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು, ತಲ್ಲೂರು ಕಡೆಯಿಂದ ನೇರಳಕಟ್ಟೆಗೆ ಪಿರ್ಯಾದಿದಾರರಾದ ಜಯಕರ ಪೂಜಾರಿ (25) ತಂದೆ ರಾಮ ಪೂಜಾರಿ ವಾಸ: ಕುಂಟೋಡಿ ಜಡ್ಡು, ಮೂಡುಮುಂದು, ಬೆಳ್ಳಾಲ ಗ್ರಾಮ, ಕುಂದಾಪುರ ತಾಲೂಕು ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-R-0556ನೇ ಬೈಕಿಗೆ ಎದುರುಗುಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮುಂಗಾಲು ಗಂಟಿಗೆ, ಎಡಕಾಲಿನ ಮುಂಗಾಲು ಗಂಟಿಗೆ, ಎರಡು ಕೈಗಳ ಮೊಣಗಂಟಿನ ಬಳಿ, ಮುಖ, ಬಲಕೆನ್ನೆಗೆ ಹಣೆಗೆ ರಕ್ತಗಾಯ ಹಾಗೂ ಒಳನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಎಂಬುದಾಗಿ ಜಯಕರ ಪೂಜಾರಿ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2015 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ. 

  • ಬೈಂದೂರು: ದಿನಾಂಕ 02-06-2015 ರಂದು ಮದ್ಯಾಹ್ನ 01:30 ಗಂಟೆಗೆ ಪಿರ್ಯಾಧಿದಾರರಾದ ಶಿವಾನಂದ ಡಿ. (26) ತಂದೆ: ಗಣಪತಿ ಡಿ ವಾಸ: ದುಬಾರಿ ಮನೆ ಮಯ್ಯಾಡಿ ಬೈಂದೂರು ಗ್ರಾಮ ಕುಂದಾಪುರ ತಾಲೂಕು ರವರು KA 20 ED 0956 ನೇ ಸುಜುಕಿ ಏಸರ್ದ್ವಿಚಕ್ರ ವಾಹನದಲ್ಲಿ ಮಹಾಬಲೇಶ್ವರ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೈಂದೂರು-ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಮಯ್ಯಾಡಿಯಿಂದ ಮಯ್ಯಾಡಿ ಅಂಚೆ ಕಛೇರಿಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಕುಂದಾಪುರ ತಾಲುಕು ಬೈಂದೂರು ಗ್ರಾಮದ ಮಯ್ಯಾಡಿ ಮೂರ್ಕೈ ಎಂಬಲ್ಲಿಗೆ ತಲುಪುತ್ತಿದ್ದಂತೆ ಬೈಂದೂರಿನಿಂದ ಕೊಲ್ಲೂರು ಕಡೆಗೆ KA 20 Z 6412 ನೇ ಬೊಲೇರೋ ವಾಹನವನ್ನು ಅದರ ಚಾಲಕ ಸಂತೋಷ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರರಾದ ಮಹಾಬಲೇಶ್ವರವರು ಮೋಟಾರ್ಸೈಕಲ್ಸಮೇತ ರಸ್ತೆಗೆ ಬಿದ್ದು ಮಹಾಬಲೇಶ್ವರರವರಿಗೆ ತಲೆಗೆ ರಕ್ತಗಾಯವಾಗಿ ಎಡಕಾಲಿಗೆ ಹಾಗೂ ಎಡಕೈಗೆ ಗುದ್ದಿದ ಒಳ ಜಖಂ ಆಗಿರುತ್ತದೆ. ಪಿರ್ಯಾಧಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಗಾಯಗೊಂಡ ಮಹಾಬಲೇಶ್ವರವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಶಿವಾನಂದ ಡಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 159/2015 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಬೈಂದೂರು: ದಿನಾಂಕ 02-06-2015 ರಂದು ರಾತ್ರಿ 07:30 ಗಂಟೆಗೆ ಭಾಸ್ಕರ ಶೆಟ್ಟಿ ಎಂಬವರು ನಾವುಂದ ಗ್ರಾಮದ ಗಾರ್ಡರ್ಸೆಡ್ಎಂಬಲ್ಲಿ ಅರೆಹೊಳೆ ಕಡೆಯಿಂದ ಉಳ್ಳೂರು ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹೇರೂರು ಕಡೆಯಿಂದ ನಾವುಂದ ಕಡೆಗೆ K A 20 X 8360 ನೇ ಮೋಟಾರ್ಸೈಕಲನ್ನು ಅದರ ಸವಾರ ರವೀಂದ್ರ ಶೆಟ್ಟಿ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭಾಸ್ಕರ ಶೆಟ್ಟಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಸ್ಕರ ಶೆಟ್ಟಿ ಹಾಗೂ ಮೋಟಾರ್ಸೈಕಲ್ಸವಾರ ಇಬ್ಬರು ರಸ್ತೆಗೆ ಬಿದಿದ್ದು ಬಾಸ್ಕರ ಶೆಟ್ಟಿಯವರಿಗೆ ಬಲ ಕಾಲು ಮತ್ತು ಬಲಕೈಗೆ ರಕ್ತ ಬರುವ ಗಾಯವಾಗಿರುತ್ತದೆ. ಗಾಯಗೊಂಡ ಬಾಸ್ಕರ ಶೆಟ್ಟಿಯವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರದ ವಿವೇಕ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಶೇಖರ ಪೂಜಾರಿ (43) ತಂದೆ: ದಿ| ಮಂಜು ಪೂಜಾರಿ ವಾಸ: ಗೂಡಾಡಿ ಮನೆ ಉಳ್ಳೂರು 11 ನೇ ಗ್ರಾಮ ಕುಂದಾಪುರ ತಾಲೂಕು ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 160/2015 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: