Wednesday, June 03, 2015

Daily Crime Reports As On 03/06/2015 At 17:00 Hrs

ಅಪಘಾತ ಪ್ರಕರಣ
  • ಗಂಗೊಳ್ಳಿ: ದಿನಾಂಕ 02/06/2015 ರಂದು ಸಂಜೆ 04-30 ಗಂಟೆಗೆ KA20C-7065 ನೇ ದುರ್ಗಾಂಬಾ ಬಸ್ಸನ್ನು ಅದರ ಚಾಲಕ ಪ್ರತಾಪ ಶೆಟ್ಟಿ ಎಂಬವರು ಬಟ್ವಾಂಡಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ತಾರು ರಸ್ತೆಯಲ್ಲಿ  ಚಲಾಯಿಸಿಕೊಂಡು ಬರುತ್ತಾ ಹೊಸಾಡು ಗ್ರಾಮದ  ಹೊಸಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರಿನಲ್ಲಿ ಹೋಗುತ್ತಿದ್ದ KA20C-896 ನೇ ಅಟೋರಿಕ್ಷಾ ಓವರ್ ಟೇಕ್ ಮಾಡಿ ಒಮ್ಮೆಲೆ ಎಡಕ್ಕೆ  ತಿರುಗಿಸಿದ ಪರಿಣಾಮ ಬಸ್ಸಿನ ಹಿಂಭಾಗ ರಿಕ್ಷಾಕ್ಕೆ ಡಿಕ್ಕಿಹೊಡೆದು ಪರಿಣಾಮ ರಿಕ್ಷಾ ಮಗುಚಿಬಿದ್ದು ರಿಕ್ಷಾ ಚಾಲಕ ಡ್ಯಾನಿಶ್ ಮತ್ತು ಪ್ರಯಾಣಿಕ ಕೃಷ್ಣಪ್ಪ ಶೆಟ್ಟಿ ರವರು ಗಾಯಗೊಂಡಿರುತ್ತಾರೆ  ಈ ಬಗ್ಗೆ ಢೇನೀಸ್‌ ಪ್ರಸನ್ನ (57) ತಂದೆ: ಪಿಲಿಪ್ ಪ್ರಸನ್ನ, ಅರಾಟೆ ಕಳಿನ ಬಾಗಿಲು, ವೈಟ್‌ರೊಸ್‌  ಹೌಸ್‌, ಹೊಸಾಡು ಗ್ರಾಮ, ಕುಂದಾಪುರ ತಾಲುಕು, ರವರು  ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 81/ 2015 ಕಲಂ 279, 337, 338 ಐಪಿಸಿ . ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಹೆಬ್ರಿ: ಪರಮೇಶ್ವರ ನಾಯ್ಕ್‌ ಎ.ಎಸ್‌ ಐ ಹೆಬ್ರಿ ಪೊಲೀಸ್ ಠಾಣೆ ರವರು ದಿನಾಂಕ: 02/06/2015 ರಂದು ರಾತ್ರಿ ಇಲಾಖಾ ಪೊಲೀಸ್ ವಾಹನದಲ್ಲಿ ಠಾಣಾ ಪಿಸಿ 1609 ನೇಯವರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ:03/06/2015 ರಂದು 03:00 ಗಂಟೆಗೆ ಕಾರ್ಕಳ ತಾಲೂಕು, ಹೆಬ್ರಿ ಗ್ರಾಮದ ತಾಣ ಎಂಬಲ್ಲಿಗೆ ತಲುಪಿದಾಗ ತಾಣ ಅರ್ಧ ನಾರೀಶ್ವರ ದೇವಸ್ಥಾನದ ಬದಿಯಲ್ಲಿರುವ ಗೂಡಾಂಗಡಿಯ ಬದಿಯಲ್ಲಿ ಆರೋಪಿತ ವಿಜಯ (25) ತಂದೆ: ರಾಮ ಕೊರಗ, ವಾಸ: ಪಡುಕುಡೂರು ಶಾಲೆಯ ಬಳಿ, ವರಂಗ ಗ್ರಾಮ, ಕಾರ್ಕಳ ತಾಲೂಕು ಇವನು ತನ್ನ ಇರುವಿಕೆಯ ಬಗ್ಗೆ ಮರೆ ಮಾಚಿ ನಿಂತು ಕೊಂಡಿದ್ದು, ಹಿಡಿದು ವಿಚಾರಿಸಿದಾಗ ಸಮರ್ಪಕವಾದ ಯಾವುದೇ ಉತ್ತರ ನೀಡದೇ ತಡಬಡಾಯಿಸಿದ್ದು ಅನುಮಾನದಿಂದ  ಸ್ಥಳದಲ್ಲಿ ಆತನನ್ನು ದಸ್ತಗಿರಿ ಮಾಡಿ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 64/15 ಕಲಂ : 109 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 ಜೀವ ಬೆದರಿಕೆ ಪ್ರಕರಣ:
  • ಶಂಕರನಾರಾಯಣ ಪಿರ್ಯಾದಿ ಶ್ರೀಮತಿ ಜ್ಯೋತಿ ನಾಯ್ಕ ಪ್ರಾಯ 33 ವರ್ಷ ಗಂಡ ಸದಾಶಿವ ನಾಯ್ಕ ವಾಸ. ಮರೂರು, ಹೆಂಗವಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು  ಗ್ರಾಮ ಪಂಚಾಯತ್‌  ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದು ಆರೋಪಿತರುಗಳಾದ 1.ನಾಗರಾಜ ತಂದೆ ಬಚ್ಚ ನಾಯ್ಕ 2.  ಚಂದ್ರ ಮಡಿವಾಳ ತಂದೆ: ಕುಷ್ಟ ಮಡಿವಾಳ 3 ಚಂದ್ರ ನಾಯ್ಕ 4 ವಿಜಯಶೆಟ್ಟಿ 5 ರಘುರಾಮ ಶೆಟ್ಟಿ. ರವ್ರುಗಳು  ದಿನಾಂಕ 29-05-2015 ರಂದು ಪಿರ್ಯಾದಿದಾರರಿಗೆ ಚುನಾವಣ ಪ್ರಚಾರಕ್ಕೆ ಅಡ್ಡಿ ಬರುವುದರ ಜೊತೆಗೆ ಪಿರ್ಯಾದಿದಾರರು  ಯಾವುದೇ ಉದ್ದೇಶಕ್ಕೆ ಎಲ್ಲಿಗೆ ಹೋದರು ಅವರನ್ನು  ಹಿಂಬಾಲಿಸಿಕೊಂಡು ಸುಮಾರು 6 ಕಿ.ಮೀ ದೂರದ ಪಿರ್ಯಾದಿದಾರರ  ಮನೆಯಾದ ಹೆಂಗವಳ್ಳಿ ಗ್ರಾಮದ ಮರೂರು ಎಂಬಲ್ಲಿಗೆ ಬಂದು ತುಂಬಾ ಹೊತ್ತು ಕಾಯುತ್ತಿದ್ದರು. ಇದರಿಂದ ಪಿರ್ಯಾದಿದಾರರಿಗೆ ನಿರ್ಭಯ ಹೊರಗಡೆ ತಿರುಗಲು ಭಯವಾಗುವುದರಿಂದ ರಕ್ಷಣೆ ನೀಡುವಂತೆ ವಿನಂತಿಸಿಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2015 ಕಲಂ 506 R/w 34 ಐಪಿಸಿ   ಯಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

No comments: