Sunday, June 28, 2015

Daily Crime Reports As On 28/06/2015 At 17:00 Hrs

ಅಪಘಾತ ಪ್ರಕರಣಗಳು
  • ಹೆಬ್ರಿ: ಪಿರ್ಯಾದಿದಾರರಾದ ಆನಂದ ಗೌಡ (28)ತಂದೆ: ತಬುರ ಗೌಡ, ವಾಸ: ಮತ್ತಾವು ಬೆದರಕಾಡು, ಕಬ್ಬಿನಾಲೆ ಗ್ರಾಮ, ಕಾರ್ಕಳ ತಾಲೂಕು ಇವರು  ದಿನಾಂಕ 26-06-2015 ರಂದು ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಸಂಜೆ 5:30 ಗಂಟೆಗೆ ಕಬ್ಬಿನಾಲೆ ಗ್ರಾಮದ ಗುಬ್ಬಿಮಾರ್‌ ಎಂಬಲ್ಲಿಗೆ ತಲುಪುವಾಗ ಗಂಗಾಧರ ಹೆಬ್ಬಾರ್ ಎಂಬುವವರು ಕೆ.ಎ.20.ಕೆ.0307 ನೇ ಮೋಟಾರ್‌ ಸೈಕಲ್‌ ನಲ್ಲಿ ಅವರ ಮಗ ಅನಂತಕೃಷ್ಣ ರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕಬ್ಬಿನಾಲೆ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಕೆಎ 20 ಎಂಎ 1656 ನೇ ಓಮಿನಿ ಕಾರನ್ನು ಅದರ ಚಾಲಕ ಮಹೇಶ್‌ ಕಾಮತ್‌ ಎಂಬುವವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು  ಗಂಗಾಧರ ಹೆಬ್ಬಾರ್‌ ರವರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಗಾಧರ ಹೆಬ್ಬಾರ್  ಮತ್ತು ಅವರ ಮಗ ಅನಂತಕೃಷ್ಣ ರಸ್ತೆಗೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ  ಹೆಬ್ರಿ ಠಾಣಾ  ಅಪರಾಧ ಕ್ರಮಾಂಕ 71/15 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
  • ಕೊಲ್ಲೂರು: ದಿನಾಂಕ 26.06.15 ರಂದು ಪಿರ್ಯಾದಿದಾರರಾದ ಶಶಿಧರ ಶೆಟ್ಟಿ   ಪ್ರಾಯ 43  ತಂದೆ ಸಂಜೀವ ಶೆಟ್ಟಿ ವಾಸ; ಕೆಲಾ  ಹಗ್ಲಾಡಿಮನೆ ಅಮಾಸೆಬೈಲ್ ಗ್ರಾಮ ಕುಂಧಾಪುರ ತಾಲೂಕು ಇವರು ಕೆಎ .20 ವಿ 1910 ನೇ ಮೋಟಾರ್ ಸೈಕಲಿನಲ್ಲಿ ತನ್ನ ಮಗಳಾದ ಅಕ್ಷಯರನ್ನು ಹಿಂಬದಿ ಕುಳ್ಳಿರಿಸಿಕೊಂಡು ಕೆರಾಡಿಯ ವರ ಸಿದ್ದಿವಿನಾಯಕ ಪಿ.ಯು  ಕಾಲೇಜಿನಲ್ಲಿ ಲೆಕ್ಚರ್ ಹುದ್ದೆಗೆ ಸಂದರ್ಶನ ಮಾಡಿ ವಾಪಾಸ್ಸು ಕೆರಾಡಿ ಮಾರಣಕಟ್ಟೆ ಮಾರ್ಗವಾಗಿ ಹೊಟೆಲ್ ಬಾಬು ಶೆಟ್ಟಿರವರ  ಮನೆಯ ಬಳಿ ಬರುವಾಗ ಬೆಳಗ್ಗೆ 11;00 ಗಂಟೆಗೆ KA 20 EF 4639 ನೇ ಹೀರೊ ಡಿಲಕ್ಸ್ ಮೋಟಾರುಸೈಕಲ್‌ನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ಶಶಿಧರ ಶೆಟ್ಟಿ ರವರ  ಮೊಟಾರ್ ಸೈಕಲಿಗೆ ಎದುರಿನಿಂದ  ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಬಲಕಾಲಿನ ತೋರು ಬೆರಳು, ಮತ್ತು ಹೆಬ್ಬರಳು ಸಂಪೂರ್ಣ ಜಖಂ ಗೊಂಡಿದ್ದು ಮತ್ತು ಅಕ್ಷಯರವರಿಗೆ ಬಲಕಾಲಿಗೆ ಗುದ್ದಿದ ನೋವು ಉಂಟಾಗಿರುತ್ತದೆ. ಈ ಬಗ್ಗೆ  ಕೊಲ್ಲೂರು ಪೊಲೀಸ್ ಠಾಣಾ ಅಪರಾದ ಕ್ರಮಾಂಕ 85/2015 ಕಲಂ: 279, 337, 338 ಐ ಪಿ ಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 28/06/2015 ರಂದು ಸಮಯ ಸುಮಾರು ಸಂಜೆ 9:30 ಗಂಟೆಗೆ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಕರಿಕಲ್  ಬಳಿ ರಸ್ತೆಯಲ್ಲಿ, ಆಪಾದಿತ ತೋಮಸ್ ಎಂಬವರು KA 20 N 7255 ನೇ ಕಾರನ್ನು ಹಾಲಾಡಿ ಕಡೆಯಿಂದ ಕೋಟೇಶ್ವರ ಕಡೆಗೆ ಅತೀವೇಗ ಹಾಗೂ  ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಹಾಲಾಡಿ ಕಡೆಯಿಂದ ಕೋಟೇಶ್ವರ ಕಡೆಗೆ ಬರುತ್ತಿದ್ದ  KA 20 A 7723 ಬಸ್ಸ್ ಗೆ ಹಿಂದಿನಿಂದ   ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ತೋಮಸ್ ಹಾಗೂ ಕಾರಿನಲ್ಲಿದ್ದವರಿಗೆ ಗಾಯವಾಗಿದ್ದು, ಕೋಟೇಶ್ವರ ಎನ್,ಆರ್, ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಈ ಬಗ್ಗೆ  ಕುಂದಾಪುರ ಸಂಚಾರ  ಪೊಲೀಸ್ ಠಾಣಾ ಅಪರಾದ ಕ್ರಮಾಂಕ 75/2015  ಕಲಂ 279 , 337  ಐಪಿಸಿಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ: ಪಿರ್ಯಾಧಿದಾರಾದ ಶ್ರೀ ಪ್ರಥಮ ಶೆಟ್ಟಿ ಪ್ರಾಯ: 19 ವರ್ಷ ತಂದೆ: ಸೀತಾರಾಮ ಶೆಟ್ಟಿ ವಾಸ: ಪ್ರಥ್ವಿ ಮೇಲ್ಮನೆ, ಪಡುಬಿದ್ರೆ ಅಂಚೆ  ಪಾದೆಬೆಟ್ಟು ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 28/06/2015 ರಂದು 13:30  ಗಂಟೆಗೆ ಕೆಎ 20 ಎಮ್ಎ 1330 ನೇ ಸ್ವಿಪ್ಟ್ ಕಾರಿನಲ್ಲಿ  ಸೀತಾರಾಮ ಶೆಟ್ಟಿ ಮತ್ತು ಪ್ರಣೀತ್ ಹಾಗೂ ಪ್ರದೀಪ್ ರವರನ್ನು ಕುಳ್ಳಿರಿಸಿಕೊಂಡು ಅಜೆಕಾರಿಗೆ ಹೋಗುವರೇ ಪಡುಬಿದ್ರೆಯಿಂದ ಹೊರಟಿದ್ದು 11:50 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಅತ್ತೂರು ಸ್ವಾಗತ ಗೋಪುರ ಬಳಿ ತಲುಪಿದಾಗ ಕಾರಿನ ಸಿಗ್ನಲ್ ಲೈಟ್ ಹಾಕಿ ಕಾರನ್ನು ಬಲಬದಿಗೆ ತಿರುಗಿಸುತ್ತಿರುವಾಗ ಹಿಂದಿನಿಂದ ಕೆಎ 19 ಎಎ 2559 ನೇ ಬಸ್ ಚಾಲಕ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುತ್ತದೆ. ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ 112/15  ಕಲಂ: 279 ಐಪಿಸಿ  ಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ 27.06.15ರಂದು ರಾತ್ರಿ 20:35ಗಂಟೆಗೆ ಪಿರ್ಯಾದಿದಾರರಾದ ಸೂರಜ್‌, ತಂದೆ: ಸದಾನಂದ ಆಚಾರ್ಯ, ವಾಸ: ಜನಾರ್ಧನ ಕೃಪಾ, ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ, ಪರ್ಕಳ, ಉಡುಪಿ ಇವರು   ಹಾಗೂ ತಮ್ಮ ಸುಜಯರವರು ಕೆಎ 20 ಆರ್‌ ‌3423ನೇ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಮನೆಯ ಕಡೆಗೆ ಹೊಟೇಲ್‌ ಆಶ್ಲೇಷದ ಎದುರು ಹೋಗುತ್ತಿರುವಾಗ ಎದುರಿನಿಂದ ಹುಂಡೈ ಸ್ಯಾಂಟ್ರೋ ಕಾರು ನಂಬ್ರ ಕೆಎ 05ಜಡ್‌ ‌2770ನೇಯ  ಚಾಲಕನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸೂರಜ್‌,ಹಾಗೂ ಅವರ ತಮ್ಮ ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದನು. ಪರಿಣಾಮ ರಸ್ತೆಗೆ ಬಿದ್ದು ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ  ಮಣಿಪಾಲ  ಪೊಲೀಸ್ ಠಾಣಾ ಅಪರಾದ ಕ್ರಮಾಂಕ 128/15 ಕಲಂ 279,337 ಐಪಿಸಿ & ಕಲಂ 134(ಎ)(ಬಿ) ಐಎಮ್‌ವಿ ಕಾಯಿದೆಯಂತೆ  ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ವಂಚನೆ ಪ್ರಕರಣ
  • ಕೊಲ್ಲೂರು: ಪಿರ್ಯಾದಿದಾರರಾದ ಶ್ರೀಮತಿ ಶೋಭ  (40) ಗಂಡ; ದಿವಂಗತ ಸೋಮರಾಜ ವಾಸ; ಕಡಿಂಜೆ  ಪಳ್ಳಿಪತ್ರ ಮುಖ್ಯ ರಸ್ತೆ ಕೊಲ್ಲೂರು  ಗ್ರಾಮ ಕುಂದಾಪುರ ತಾಲೂಕು ಇವರು 15 ವರ್ಷಗಳಿಂದ ಪರಿಚಯವಿರುವ ಆರೋಪಿ 1) ಜನಾರ್ಧನ ಖಾರ್ವಿ ರವರು ಕುಂದಾಪುರದಲ್ಲಿ 10 ಸೆಂಟ್ಸ್ ಜಾಗ ಮಾಡಿಕೊಡುವುದಾಗಿ ಸುಳ್ಳು ಹೇಳಿ ಕೊಲ್ಲೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ ಶ್ರೀಮತಿ ಶೋಭ ಹೆಸರಿನಲ್ಲಿ ರೂ. 7 ಲಕ್ಷ ರೂ. ಲೋನ್ ಮಾಡಿಸಿ ಹಣವನ್ನು ಪಡೆದುದ್ದಲ್ಲದೆ, ಚಿನ್ನವನ್ನು ಗಿರವಿ ಇಟ್ಟು ಅದರಿಂದ ಬಂದ ಹಣವನ್ನು ಅಪಾದಿತರು ಮೋಸದಿಂದ ತೆಗೆದುಕೊಂಡು ಹೋಗಿದ್ದು,  ಹಾಗೂ ಆರೋಪಿತರು 2) . ಶ್ರೀಮತಿ ಅನಿಲ 3) ಭಾಗ್ಯ ಮದುವೆಗೆ ಹೋಗುವ ನೆಪದಲ್ಲಿ ಶ್ರೀಮತಿ ಶೋಭರವರ 10 ಪವನ್ ಚಿನ್ನದ ಸರವನ್ನು ಕೇಳಿ ಹಾಕಿಕೊಂಡು ಹೋಗಿದ್ದು ವಾಪಾಸ್ಸು ಕೊಡದೇ ಅಡವಿಟ್ಟಿದ್ದು ಚಿನ್ನವನ್ನು ಜನಾರ್ಧನ ಖಾರ್ವಿ ರವರು ತಾನೇ ಬಿಡಿಸಿಕೊಡುವದಾಗಿ ಹೇಳಿರುತ್ತಾರೆ  ಜಾಗ ರಿಜಿಸ್ಟ್ರೇಶನ್ ಮಾಡಿಸಿಕೊಡದೇ ಚಿನ್ನವನ್ನು ವಾಪಾಸ್ಸು ನೀಡದೇ ಮೋಸ ಮಾಡಿದ್ದು, ಶ್ರೀಮತಿ ಶೋಭ  ಮತ್ತು  ಮಗಳಿಗೆ ಜೀವ ಬೆದರಿಕೆಹಾಕಿರುತ್ತಾನೆ. ಎಂಬುದಾಗಿ ಶ್ರೀಮತಿ ಶೋಭ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣಾ ಅಪರಾದ ಕ್ರಮಾಂಕ 84/2015 ಕಲಂ:420, .504 .506  ಐ.ಪಿ.ಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ಕಳವು ಯತ್ನ ಪ್ರಕರಣ
  • ಉಡುಪಿ: ಪಿರ್ಯದಿದಾರರಾದ ರಾಮದಾಸ ಇವರು ಉಡುಪಿ ಕಿನ್ನಿಮುಲ್ಕಿಯಲ್ಲಿರುವ ಎಮ್.ಎಸ್.ಐ.ಎಲ್.ಮದ್ಯ ಮಾರಾಟ ಮಳಿಗೆಯ ಮೇಲ್ವಿಚಾರಕರಾಗಿದ್ದು  ದಿನಾಂಕ 27/06/2015 ರಂದು ರಾತ್ರಿ 22:00 ಗಂಟೆಗೆ ಮಳಿಗೆಗೆ ಬೀಗ ಹಾಕಿ ಹೋಗಿದ್ದು,  ದಿನಾಂಕ 28/06/2015 ರಂದು ಬೆಳಿಗ್ಗೆ 09:35 ಗಂಟೆಗೆ  ಸ್ಟಾಕ್ ರಿಜಿಸ್ಟರ್ ಚಕ್ ಮಾಡಲು ಬಂದಾಗ ಯಾರೋ ಕಳ್ಳರು ಮಳಿಗೆಯ ಬೀಗ ಮುರಿದು ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ ಎಂಬುದಾಗಿ ರಾಮದಾಸ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ 155/2015 ಕಳವು  454,,457,511  ಐ.ಪಿ.ಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ
  • ಉಡುಪಿ: ಪವನ್‌ ರಾವ್ ರವರು ಉಡುಪಿ 76 ಬಡಗುಬೆಟ್ಟು ಗ್ರಾಮದ ಬೈಲೂರು ಜಗನ್ನಾಥ ನಗರದ 3 ನೇ ಅಡ್ಡ ರಸ್ತೆಯಲ್ಲಿರುವ ಮನೆಯಲ್ಲಿ ತಾಯಿಯಾದ ವಸಂತಿ ಎಸ್ ರಾವ್‌ ರವರೊಂದಿಗೆ ವಾಸ ಮಾಡಿಕೊಂಡಿರುತ್ತಾರೆ, ಆದರೆ ದಿನಾಂಕ 28/06/2015 ರಂದು 08:00 ಗಂಟೆಯ ಸುಮಾರಿಗೆ ಪವನ್‌ ರವರು ಬೆಡ್ ರೂಮಿನಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಈ ಬಗ್ಗೆ ಉಡುಪಿ ನಗರ ಠಾಣಾ ಯು,ಡಿ,ಆರ್‌‌  31/2015  ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: