Sunday, May 31, 2015

Daily Crimes Reported as On 31/05/2015 at 17:00 Hrs


ಹಲ್ಲೆ ಪ್ರಕರಣ
  • ಕುಂದಾಪುರ:ದಿನಾಂಕ 30/05/2015 ರಂದು 19.30 ಗಂಟೆಗೆ ಕುಂದಾಪುರ ತಾಲೂಕು ಕನ್ಯಾನ ಗ್ರಾಮದ ಹಟ್ಟಿಯಂಗಡಿ ಕ್ರಾಸ್ ಬಳಿ ಪಿರ್ಯಾದಿದಾರರಾದ ವಸಂತ ಶೆಟ್ಟಿ (22) ತಂದೆ:ರಾಜಗೋಪಾಲ ಶೆಟ್ಟಿ ವಾಸ:ದೇವಸದ ಹೊಸಿಮನೆ, ಕನ್ಯಾನ ಗ್ರಾಮ, ಕುಂದಾಪುರ ತಾಲೂಕುರವರು ನಿಂತುಕೊಂಡಿದ್ದು ಆ ವೇಳೆ ಆರೋಪಿಗಳಾದ 1) ಕಿರಣ್‌ ಶೆಟ್ಟಿ, 2) ಶೇಷು, 3)ರಾಘವೇಂದ್ರ, 4) ಇಶಾ, 5) ಸುಧಾಕರ ಹಾಗೂ ಇನ್ನೊರ್ವ ಅಪರಿಚಿತ ವ್ಯಕ್ತಿ ಒಟ್ಟು ಸೇರಿ ವಸಂತ ಶೆಟ್ಟಿರವರೊಂದಿಗೆ ಗಲಾಟೆಗೆ ಬಂದು ನಂತರ ವಸಂತ ಶೆಟ್ಟಿರವರಿಗೆ ಕೈಯಿಂದ ಮತ್ತು ಕೋಲಿನಿಂದ ಹೊಡೆದು ಕೆಳಗೆ ಬೀಳಿಸಿ ನಂತರ ಅಲ್ಲಿಂದ ಹೋಗುವಾಗ ವಸಂತ ಶೆಟ್ಟಿರವರಿಗೆ ಜೀವ ಬೆದರಿಕೆ ಹಾಕಿರುತ್ತಾರೆ.ಈ ಘಟನೆಗೆ ವಸಂತ ಶೆಟ್ಟಿರವರು ಆರೋಪಿಗಳ ವಿರುದ್ದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೆಲಸ ಮಾಡಿರುವುದು ಕಾರಣವಾಗಿರುತ್ತದೆ. ಈ ಬಗ್ಗೆ ವಸಂತ ಶೆಟ್ಟಿರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 219/2015, ಕಲಂ:143, 147, 148, 323, 324, 506 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬ್ರಹ್ಮಾವರ:ದಿನಾಂಕ:30/05/2015 ರಂದು ಸಂಜೆ 4:00 ಗಂಟೆಗೆ ಪಿರ್ಯಾದಿದಾರರಾದ ಭುಜಂಗ ಶೆಟ್ಟಿ (43), ತಂದೆ:ರಾಮಣ್ಣ ಶೆಟ್ಟಿ ವಾಸ:ಹುಗ್ಗೇರಿ ಮನೆ, ಮುದ್ದುಮನೆ ಅಂಚೆ, 33ನೇ ಶೀರೂರು ಗ್ರಾಮ, ಉಡುಪಿ ತಾಲೂಕುರವರ ಮಕ್ಕಳಾದ  ನಿಖಿಲ್, ನಿಶಾಂತ್ ಮತ್ತು ಸಂಬಂಧಿಕರ ಮಕ್ಕಳಾದ ಮೈತ್ರಿ, ಶರಣ್‌ರವರು ಭುಜಂಗ ಶೆಟ್ಟಿರವರ ಹೆಂಡತಿಯ ಅಣ್ಣನಾದ ರವೀಶ್‌ರವರ ಜೊತೆಗೆ ಉಡುಪಿ ತಾಲೂಕು, 33 ನೇ ಶೀರೂರು ಗ್ರಾಮ, ಮುದ್ದುಮನೆ ಎಂಬಲ್ಲಿ ಭುಜಂಗ ಶೆಟ್ಟಿರವರ ಮನೆಯ ಸಮೀಪ ಇರುವ ಸೀತಾನದಿಗೆ ಹೋಗಿ ಹೊಳೆ ಬದಿಯ ನೀರಿನಲ್ಲಿ ಆಟ ಆಡುತ್ತಿರುವಾಗ, ಸಂಜೆ ಸುಮಾರು 5:15 ಗಂಟೆಗೆ ಭುಜಂಗ ಶೆಟ್ಟಿರವರ ಮಗನಾದ ನಿಖಿಲ್ (10) ಆಕಸ್ಮಿಕವಾಗಿ ನೀರಿನ ಸೆಳತಕ್ಕೆ ಸಿಕ್ಕಿ ಮುಳುಗಿದವನನ್ನು ಮೇಲಕ್ಕೆತ್ತಿ, ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು ಸಂಜೆ 6:00 ಗಂಟೆಗೆ ಪರೀಕ್ಷಿಸಿದ ವೈದ್ಯರು, ನಿಖಿಲ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಭುಜಂಗ ಶೆಟ್ಟಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 28/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು:ಪಿರ್ಯಾದಿದಾರರಾದ ಶಶಿಧರ (18) ತಂದೆ:ಮಾಸ್ತಿ ಗೌಡ ವಾಸ:ಮೇಲ್ ಕೈರಾಣ ಬಲಗೋಣು, ಕಾಲ್ತೋಡು ಗ್ರಾಮ ಕುಂದಾಪುರ ತಾಲೂಕುರವರ ತಾಯಿ ಲಲಿತಾ (40) ಎಂಬವರು ನಿದ್ದೆ ಬಾರದೇ ಇರುವಂತಹ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದಕ್ಕೆ ಕುಂದಾಪುರದ ಶ್ರೀಮಾತಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಮಾಡುತ್ತಿದ್ದರೂ ಗುಣಮುಖವಾಗದೇ ಇದ್ದುದರಿಂದ ಮಾನಸಿಕವಾಗಿ ಜೀವನದಲ್ಲಿ ನೊಂದು ದಿನಾಂಕ:30/05/15 ರಂದು ಮಧ್ಯ ರಾತ್ರಿಯಿಂದ ದಿನಾಂಕ:31/05/15 ರ ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ ಕಾಲ್ತೋಡು ಗ್ರಾಮದ ಬಲಗೋಣು, ಮೇಲ್ ಕೈರಾಣ ಎಂಬಲ್ಲಿನ ಮನೆ ಬಳಿಯ ಹಾಡಿಯಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಶಶಿಧರರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 19/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಕಾರ್ಕಳ ನಗರ:ದಿನಾಂಕ:30/05/2015 ರಂದು 19:30 ಗಂಟೆಗೆ ಪಿರ್ಯಾದಿದಾರರಾದ ಸದಾನಂದ ರಾವ್ (45), ತಂದೆ:ದಿವಂಗತ ನಾರಾಯಣ ರಾವ್‌, ವಾಸ:ಶ್ರೀ ನಿಕೇತನ, ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಪೆರ್ವಾಜೆ, ಕಸಬ ಗ್ರಾಮ, ಕಾರ್ಕಳ ತಾಲೂಕುರವರು ತನ್ನ ಪತ್ನಿ ಶ್ರೀಮತಿ ತುಳಸಿ ಎಂಬವರನ್ನು ತನ್ನ KA 20 J 5841 ನೇ ನಂಬ್ರದ ಹೀರೋ ಹೋಂಡಾ ಸಿಡಿ 100 ಮೋಟಾರು ಸೈಕಲಿನಲ್ಲಿ ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಾರ್ಕಳ ಪೇಟೆಯಿಂದ ಮನೆಯ ಕಡೆಗೆ ಪೆರ್ವಾಜೆ ರಸ್ತೆಯಲ್ಲಿನ ಡಾ||ಸಚ್ಚಿದಾನಂದ ಪ್ರಭು ಇವರ ಮನೆ ಸಮೀಪ ತೆರಳುತ್ತಿದ್ದಾಗ ರಾಧಾಕೃಷ್ಣ ಶೆಟ್ಟಿ ಎಂಬವರು ತನ್ನ KA 20 Z 7395 ನೇ ನಂಬ್ರದ ಮಾರುತಿ ಸಿಲೆರಿಯೋ ಕಾರನ್ನು ಪೆರ್ವಾಜೆ ದೇವಸ್ಥಾನ ಕಡೆಯಿಂದ ಕಾರ್ಕಳ ಪೇಟೆ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಸದಾನಂದ ರಾವ್ರವರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿರುತ್ತಾರೆ. ಅಪಘಾತದ ಪರಿಣಾಮ ಸದಾನಂದ ರಾವ್ರವರ ಬಲ ಕೈಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ರಾಧಾಕೃಷ್ಣ ಶೆಟ್ಟಿಯವರು ಅಪಘಾತದಿಂದ ಗಾಯಗೊಂಡ ಸದಾನಂದ ರಾವ್ರವರನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೂ ದಾಖಲಿಸದೇ ಅಪಘಾತದ ಮಾಹಿತಿಯನ್ನು ಪೊಲೀಸ್‌ ಠಾಣೆಗೂ ನೀಡದೇ ಸ್ಥಳದಿಂದ ತೆರಳಿರುತ್ತಾರೆ.ಈ ಬಗ್ಗೆ ಸದಾನಂದ ರಾವ್ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 81/2015 ಕಲಂ:279, 337, 338 ಐ.ಪಿ.ಸಿ ಮತ್ತು ಕಲಂ 134 (ಎ) (ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ:ಈ ದಿನ ದಿನಾಂಕ:31/05/2015 ರಂದು ಪಿರ್ಯಾದಿದಾರರಾದ ಶಿವಣ್ಣ (47), ತಂದೆ:ದಿವಂಗತ ಚನ್ನು ಶೆಟ್ಟಿ, ವಾಸ:ಹಳ್ಳಿ ಮೈಸೂರು, ಹೊಳೆನರಸಿಪುರ, ಹಾಸನ ಜಿಲ್ಲೆರವರು ತನ್ನ ಲಾರಿ ನಂಬ್ರ ಕೆಎ-46, 1107 ನೇದನ್ನು ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಉಡುಪಿ ಅಂಬಲಪಾಡಿಯ ರಿಲಾಯನ್ಸ್ ಪೆಟ್ರೋಲ್ ಬಂಕ್‌ನ ಎದುರು ತಲುಪುವಾಗ ಲಾರಿಯ ಹಿಂಬದಿಯಿಂದ ಕಾರು ನಂಬ್ರ ಕೆಎ 20 ಎನ್ 8353 ನೇದನ್ನು ಅದರ ಚಾಲಕ ರಾದಾಕೃಷ್ಣ ಶೆಣೈರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸೌಮ್ಯ ಶೆಣೈರವರು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿದ್ದು, ಆರೋಪಿ ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿದೆ, ಈ ಅಪಘಾತಕ್ಕೆ ಕಾರು ನಂಬ್ರ ಕೆಎ 20 ಎನ್ 8353 ನೇದರ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ಈ ಬಗ್ಗೆ ಶಿವಣ್ಣರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 56/2015 ಕಲಂ:279,337,304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
  • ಕೋಟ:ದಿನಾಂಕ:31/05/2015 ರಂದು 11:30 ಗಂಟೆಗೆ ಪಿರ್ಯಾದಿದಾರರಾದ ಬಸಪ್ಪ ಎ.ಇ, ಪಿ.ಎಸ್.ಐ, ಕೋಟ ಠಾಣೆರವರು ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯಲ್ಲಿರುವಾಗ ದೊರೆತ ಖಚಿತ ವರ್ತಮಾನದಂತೆ  ಕುಂದಾಪುರ  ತಾಲೂಕು ಮೊಳಹಳ್ಳಿ ಗ್ರಾಮದ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬಾತನು ಜನರನ್ನು ಸೇರಿಸಿಕೊಂಡು ಹಣವನ್ನು ಪಣವನ್ನಾಗಿರಿಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದುದ್ದನ್ನು ಖಚಿತ ಪಡಿಸಿಕೊಂಡು 12:00 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ ಆರೋಪಿ ಸಂತೋಷ್‌ ಶೆಟ್ಟಿ ಎಂಬವರನ್ನು  ದಸ್ತಗಿರಿ ಮಾಡಿ, ಆರೋಪಿಯಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ-1, ಬಾಲ್ ಪೆನ್ನು-1, ನಗದು ರೂಪಾಯಿ 250/-ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 132/2015 ಕಲಂ 78(i), (iii) ಕೆ.ಪಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: