Sunday, May 31, 2015

Daily Crimes Reported as On 31/05/2015 at 07:00 Hrs

ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ: 29/05/15  ರಂದು ಬೆಳಿಗ್ಗೆ ಪದ್ಮಾವತಿ ಎಂಬವರು ಸೇನೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಿಂದ ಎನ್ ಹೆಚ್ 66 ನ್ನು ಕ್ರಾಸ್ ಮಾಡಿ ಎನ್ ಹೆಚ್ 66 ರ ಪೂರ್ವ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಸಮಯ ಸುಮಾರು  11:00 ಗಂಟೆಗೆ ಬೈಂದೂರು ಹೊಸ ಬಸ್ ನಿಲ್ದಾಣದ ಕಡೆಯಿಂದ ಯಡ್ತರೆ ಕಡೆಗೆ ಕೆ ಎ 20 ಡಿ 0943 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಪೂರ್ವಕ್ಕೆ ಚಲಾಯಿಸಿ ಪದ್ಮಾವತಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪದ್ಮಾವತಿರವರ ತಲೆಗೆ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 153/15 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ 26-05-2015 ರಂದು ಸಂಜೆ 06:30 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ನಾವುಂದ ಬಸ್ ನಿಲ್ದಾಣದ ಬಳಿ ರಾಹೆ 66 ರ  ಪೂರ್ವ ಬದಿಯಲ್ಲಿ ಸಂಜೀವ ಪೂಜಾರಿ ಎಂಬುವವರು ನಾವುಂದ ಕಡೆಯಿಂದ ನಾವುಂದ ಬಸ್‌ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿರುವ ಸಮಯ ಕೆ.ಎ 20 ಇಬಿ 0201 ನೇ ಮೋಟಾರ್ ಸೈಕಲನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಒಂದು ಕಾರಿಗೆ ಮುಂದೆ ಹೋಗಲು ಅನುವು ಮಾಡಿಕೊಡುವಾಗ ಮೊಟಾರ್‌ ಸೈಕಲ್‌ ಸವಾರನ ಹತೋಟಿ ತಪ್ಪಿ ರಸ್ತೆಯ ತೀರಾ ಪೂರ್ವ ಬದಿಗೆ ಸವಾರಿ ಮಾಡಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಜೀವ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು ಬಲಕಾಲಿನ ತೋರು ಬೆರಳಿಗೆ ತರಚಿದ ಗಾಯವಾಗಿ ತಲೆಗೆ ಗುದ್ದಿದ ಒಳ ಪೆಟ್ಟಾಗಿರುತ್ತದೆ. ಗಾಯಗೊಂಡ ಸಂಜೇವ ಪೂಜಾರಿಯವರನ್ನು ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 154/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಶಂಕರನಾರಾಯಣ: ದಿನಾಂಕ 29.05.15 ರಂದು ಬೆಳಿಗ್ಗೆ  10:30 ಗಂಟೆ ಸುಮಾರಿಗೆ ಪಿರ್ಯಾದಿ ಕಾಳು ನಾಯ್ಕ ಇವರು ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ತೊಂಬತ್ತು ಶಾಲೆಯ ಬಳಿ ವಸುಂದರಾ ಹೆಗ್ಡೆಯವರ  ಅಂಗಡಿಯ ಎದುರುಗಡೆ  ಸಹೋದರಿ ಹಾಗೂ ಮನೆಯವರೊಂದಿಗೆ   ಮತ ಚಲಾಯಿಸಲು  ಹೋಗುತ್ತಿರುವಾಗ ಆರೋಪಿತರಾದ ಮೋಹನ ಹೆಗ್ಡೆ ಮತ್ತು ವಸುಂಧರ ಹೆಗ್ಡೆ ಇವರು ಪಿರ್ಯಾದಿದಾರರನ್ನು ರಸ್ತೆಯ  ಮಧ್ಯದಲ್ಲಿ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ಕೈಯಿಂದ  ಕೆನ್ನೆ ಹಾಗೂ ಬೆನ್ನಿಗೆ  ಹೊಡೆದು  ಬೈದು  ಹೆದರಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2015 ಕಲಂ 341.504.506.323. ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: