Saturday, May 30, 2015

Daily Crimes Reported as On 30/05/2015 at 17:00 Hrs


ಕಳವು ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಪ್ರಶಾಂತ ಶೆಟ್ಟಿ ತಂದೆ:ವಾಸು ಶೆಟ್ಟಿ, ವಾಸ:ಅನಂತ ಟವರ್ಸ್, ಕೊರ್ಟ್ ರಸ್ತೆ, ಉಡುಪಿರವರು ಮೂಡನಿಡಂಬೂರು ಗ್ರಾಮದ ಕೋರ್ಟ್ ರಸ್ತೆಯಲ್ಲಿರುವ ಅನಂತ ಟವರ್ಸ್ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿರುವ ತನ್ನ ಕಚೇರಿಗೆ ದಿನಾಂಕ:29/05/2015 ರಂದು ಸಂಜೆ 7:00 ಗಂಟೆಗೆ ಬೀಗ ಹಾಕಿ ಹೋಗಿದ್ದು ಅವರು ಈ ದಿನ ದಿನಾಂಕ:30/05/2015 ರಂದು ಬೆಳಿಗ್ಗೆ ಸುಮಾರು 8:00 ಗಂಟೆಗೆ ಕಚೇರಿಗೆ ಬಂದು ನೋಡಿದಾಗ ಯಾರೋ ಕಳ್ಳರು ರಾತ್ರಿ ಕಾಲದಲ್ಲಿ ಅವರ ಕಚೇರಿಯ ಶೆಟರ್ ಬೀಗವನ್ನು ತುಂಡು ಮಾಡಿ ಗಾಜಿನ ಬಾಗಿಲನ್ನು ಒಡೆದು ಒಳಪ್ರವೇಶಿಸಿ ಡ್ರಾವರ್‌ನಲ್ಲಿದ್ದ ಒಟ್ಟು ಸುಮಾರು  7,400/- ರೂಪಾಯಿ ನಗದು ಹಾಗೂ ಎಂ.ಐ.4.ಐ ಕಂಪೆನಿಯ ಸುಮಾರು 12,990/-ರೂಪಾಯಿ ಬೆಲೆಬಾಳುವ ಮೊಬೈಲನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಪ್ರಶಾಂತ ಶೆಟ್ಟಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 136/15 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಉಡುಪಿ ನಗರ:ಪಿರ್ಯಾದಿದಾರರಾದ ಕೆ.ಸುಂದರ ಶೇರಿಗಾರ, ವಾಸ:ಎಲ್‌.ವಿ.ಟಿ ದೇವಸ್ಥಾನದ ಹಿಂಭಾಗ, ಗೋಪಾಲಪುರ ಪುತ್ತೂರು ಗ್ರಾಮ ಉಡುಪಿ ತಾಲೂಕುರವರ ಮಗ ಅನಿಲ್ (24) ಎಂಬವರು ದಿನಾಂಕ:29-05-2015 ರಂದು ಸಂಜೆ 6:00 ಗಂಟೆಗೆ ಯುವಕ ಮಂಡಲಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವನು ದಿನಾಂಕ:30/05/2015 ರಂದು ರಾತ್ರಿ 01:00 ಗಂಟೆಗೆ ಮನೆಗೆ ಬಂದಿದ್ದು, ಊಟ ಮಾಡಿ ಬಂದಿರುವುದಾಗಿ ಹೇಳಿ ರೂಂ ಗೆ ಹೋಗಿ ಬಾಗಿಲು ಹಾಕಿ ಕೊಂಡಿರುತ್ತಾನೆ, ಕೆ.ಸುಂದರ ಶೇರಿಗಾರರವರು ಬೆಳಿಗ್ಗೆ 04:00 ಗಂಟೆಗೆ ಅನಿಲನ ರೂಮ್‌ನಲ್ಲಿ ಬೆಳಕು ಇರುವುದನ್ನು ನೋಡಿ ಅನುಮಾನಗೊಂಡು ಕಿಟಕಿಯಿಂದ ನೋಡಿದ್ದಾಗ ಸೀರೆಯಿಂದ ಫ್ಯಾನಿಗೆ ಕಟ್ಟಿ ಕುತ್ತಿಗೆಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಅನಿಲನಿಗೆ ಕುಡಿತದ ಚಟ ಇದ್ದು, ಕೆಲಸಕ್ಕೆ ಸರಿಯಾಗಿ ಹೋಗದೆ, ಖರ್ಚಿಗೆ ಹಣದ ಅಡಚಣೆಯಿಂದ ಅಥವಾ ಬೇರೆ ಯಾವುದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಕೆ.ಸುಂದರ ಶೇರಿಗಾರರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 26/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ನಗರ:ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ದುರ್ಗಾ ನಗರ ಬಸರಿ 5 ಸೆಂಟ್ಸ್ ಕಾಲೋನಿ ನಿವಾಸಿ ಪಿರ್ಯಾದಿದಾರರಾದ ಗಣೇಶ (27), ತಂದೆ:ಅಯ್ಯಸ್ವಾಮಿ, ವಾಸ:ಬಸರಿ 5 ಸೆಂಟ್ಸ್ ಕಾಲೋನಿ, ದುರ್ಗಾ ನಗರ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕುರವರ ಬಾವ ಮಣಿ (45) ಎಂಬವರು ದಿನಾಂಕ:28/05/2015 ರಂದು 10:00 ಗಂಟೆಯಿಂದ 30/05/2015 ರಂದು 12:00 ಗಂಟೆಯ ಮಧ್ಯೆ ಯಾವುದೋ ವಿಷಯದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಬಸರಿ 5 ಸೆಂಟ್ಸ್ ಪಾದೆಯ ಬಳಿ ಮರಕ್ಕೆ ಲುಂಗಿಯನ್ನು ಕಟ್ಟಿ, ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಣೇಶರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 18/2015 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

1 comment:

Emmanuel said...

God bless you!
Immanuel