Saturday, May 30, 2015

Daily Crimes Reported as On 30/05/2015 at 07:00 Hrs

ಅಪಘಾತ ಪ್ರಕರಣ : 
  • ಕುಂದಾಪುರ : ದಿನಾಂಕ 28/05/2015 ರಂದು ಸಮಯ ಸುಮಾರು ಸಂಜೆ  05:30 ಗಂಟೆಗೆ ಕುಂದಾಪುರ  ತಾಲೂಕು ಕೊಟೇಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಬಂಕ್ ಬಳಿ ರಾ.ಹೆ 66 ಏಕಮುಖ ರಸ್ತೆಯಲ್ಲಿ ಆಪಾದಿತ ವಸಂತ್ ಎಂಬವರು ಶ್ರೀನಿವಾಸ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು KA-20 EG-3975ನೇ ಬೈಕ್ ನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ನಿರಂಜನ್ ಪುರಾಣಿಕ್ ಬಿ ಪ್ರಾಯ 21 ವರ್ಷ  ತಂದೆ:ಪ್ರಭಾಕರ ಪುರಾಣಿಕ್ ಬಿ   ವಾಸ: ಮನೆ ನಂ 5/7/3 ಮಾರ್ಗೊಳಿ, ಬಸ್ರೂರು ಕುಂದಾಪುರ ಇವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20 L-8389ನೇ ಬೈಕ್ ಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ನಿರಂಜನ್ ಪುರಾಣಿಕ್ ಹಾಗೂ ವಸಂತ್ ಸಹ ಸವಾರರೊಂದಿಗೆ ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಬಗ್ಗೆ ದಾಖಲಾಗಿರುತ್ತಾರೆ ಎಂಬುದಾಗಿ ನಿರಂಜನ್ ಪುರಾಣಿಕ್‌ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 60/2015  ಕಲಂ 279 , 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕೊಲ್ಲೂರು : ದಿನಾಂಕ 29.05.15 ರಂದು ಮದ್ಯಾಹ್ನ 3.30 ಗಂಟೆಗೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಮೂಡಮುಂದ ಶಾಲೆಯ ಹತ್ತಿರ ದಾರಿ ಬದಿಯಲ್ಲಿ ಸ್ಥಳೀಯರಾದ ಬಸವರಾಜ ಶೆಟ್ಟಿ, ಮಹಾಬಲ ಪೂಜಾರಿ, ಚಂದ್ರ ಪೂಜಾರಿ, ಮಂಜ ಹಾಗೂ ಇನ್ನೊಬ್ಬನು ಓಟಿನ ವಿಷಯದಲ್ಲಿ ಜಗಳವಾಡುತ್ತಿದ್ದವರನ್ನು ತಪ್ಪಿಸಲು ಹೋದ ಬಸವರಾಜ ಶೆಟ್ಟಿ ರವರ ಅಣ್ಣ ಬಾಲಕೃಷ್ಣ  ಶೆಟ್ಟಿ ರವರಿಗೆ ಮಹಾಬಲ ಪೂಜಾರಿಯು ಮರದ ಸೋಂಟೆಯಿಂದ ಹೊಡೆದು, ಉಳಿದ ಮೂವರಾದ ಚಂದ್ರ ಪೂಜಾರಿ, ಮಂಜ ಹಾಗೂ ಮತ್ತೊಬ್ಬನು ಸಮಾನ ಉದ್ದೇಶದಿಂದ ಅವಾಚ್ಯ ಶಬ್ದದಿಂದ ಬೈದು ಕಾಲಿನಿಂದ ತುಳಿದು  ಜೀವ ಬೆದರಿಕೆ ಒಡ್ಡಿರುವುದಾಗಿದೆ ಎಂಬುದಾಗಿ ಬಾಲಕೃಷ್ಣ ಶೆಟ್ಟಿ 48 ತಂದೆ; ಹೆರಿಯಣ್ಣ ಶೆಟ್ಟಿ ವಾಸ; ಗರಡಿ ಮನೆ ಬೆಳ್ಳಾಲ ಗ್ರಾಮ ಮತ್ತು ಅಂಚೆ ಕುಂದಾಪುರ ಇವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 69/15 ಕಲಂ 323,324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ : 
  • ಮಣಿಪಾಲ : ದಿನಾಂಕ 29/05/15 ರಂದು ರಾತ್ರಿ ಸುಮಾರು 10:30 ಗಂಟೆಗೆ ಶಬರೀಶ್ ಸುವರ್ಣ (29) ತಾಯಿ : ಪ್ರಭಾವತಿ ಮೆನನ್, ವಾಸ: ಅನುಗೃಹ, ನೆಹರು ನಗರ ಅಲೆವೂರು ಇವರು ಅಲೆವೂರು ಗ್ರಾಮದ, ನೆಹರೂ ನಗರದಲ್ಲಿರುವ ತನ್ನ ಮನೆಯ ಆವರಣ ಗೋಡೆಯಲ್ಲಿ ಒಬ್ಬರೇ ಕುಳಿತಿದ್ದ ಸಮಯ ಆರೋಪಿಗಳಾದ ಅಶೋಕ ಭಂಡಾರಿ, ಸುರೇಶ ಭಂಡಾರಿ ಹಾಗೂ ಸುರೇಶ ಭಂಡಾರಿಯ ಭಾವ ನೆಂಟ  ಕೆಎ 220 3004 ನೇ ಮಾರುತಿ ವ್ಯಾಗನರ್ ಕಾರಿನಲ್ಲಿ ಬಂದು ಶಬರೀಶ್‌ ರನ್ನು ಹಾಗೂ ಅವರ ತಾಯಿಯನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅವರ ಪೈಕಿ ಅಶೋಕ  ಭಂಡಾರಿಯವರು ರಾಡ್ ನಿಂದ ಶಬರೀಶ್‌ರ ತಲೆಯ ಹಿಂಭಾಗಕ್ಕೆ ಹೊಡೆದಿದ್ದು, ಉಳಿದವರು ಕೈಯಿಂದ ಹೊಡೆದಿರುತ್ತಾರೆ. ಈ ಬಗ್ಗೆ ಶಬರೀಶ್‌ ರವರಿಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಶಬರೀಶ್‌ ರವರ ತಾಯಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಲೆವೂರು -2 ನೇ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು,  ಅವರಿಗೆ ಚುನಾವಣೆ ಸಮಯ ಬೆಂಬಲಿಸಿದ್ದೇ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ ಎಂಬುದಾಗಿ ಶಬರೀಶ್‌ರವರು ನೀಡಿದ ದೂರಿನಂತೆ ಮಣಿಪಾಳ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 100/15 ಕಲಂ. 323, 324, 506 r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: