Friday, May 29, 2015

Daily Crimes Reported as On 29/05/2015 at 07:00 Hrs

ಮಟ್ಕಾ ಜುಗಾರಿ ಪ್ರಕರಣ : 
  • ಉಡುಪಿ ನಗರ : ದಿನಾಂಕ: 28.05.2015 ರಂದು 18.00 ಗಂಟೆಗೆ ಗ್ರಾಮ ಪಂಚಾಯತ್ ಚುನಾವಣಾ ಬಂದೋಬಸ್ತ್ ಕರ್ತವ್ಯದಲ್ಲಿ ಬನ್ನಂಜೆಯಲ್ಲಿ ರೌಂಡ್ಸ್ ನಲ್ಲಿರುವಾಗ ಉಡುಪಿ ತಾಲೂಕು ಮೂಡುನಿಡಂಬೂರು  ಗ್ರಾಮದ ಮಲ್ಪೆ ಕಡೆಗೆ ಹೋಗುವ ಸಿಟಿ ಬಸ್ ನಿಲ್ಧಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ 3 ಜನ ವ್ಯಕ್ತಿಗಳು 1 ರೂಪಾಯಿಗೆ 70 ರೂಪಾಯಿಯನ್ನು ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ತನ್ನ ಸ್ವಂತ ಲಾಭಕೋಸ್ಕರ ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಪಂಚಾಯತುದಾರರೊಂದಿಗೆ, ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ, ಸದ್ರಿ ಸ್ಥಳಕ್ಕೆ 18.30 ಗಂಟೆಗೆ ಧಾಳಿ ನಡೆಸಿ, ಕೂಗಿ ಹೇಳುತ್ತಿದ್ದ, ಮಟ್ಕಾ ಚೀಟಿ ಬರೆಯುತ್ತಿದ್ದ ಹಾಗೂ ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದವನನ್ನು ಸುತ್ತುವರಿದು ಹಿಡಿದುಕೊಂಡಿದ್ದು, ಕೂಗಿ ಹೇಳುತ್ತಿದ್ದವನ ಹೆಸರು  ವಿಳಾಸ ಕೇಳಲಾಗಿ ಕಣ್ಣನ್(45), ತಂದೆ; ರಾಮನ್ ವಾಸ; ಕೆ.ಎಸ್.ಆರ್.ಟಿ.ಸಿ ಡಿಪೋ ಎದುರು ನಿಟ್ಟೂರು ಪುತ್ತೂರು ಗ್ರಾಮ, ಉಡುಪಿ ಎಂಬುದಾಗಿಯೂ ಮಟ್ಕಾ ಚೀಟಿ ಬರೆಯುತ್ತಿದ್ದವನ ಹೆಸರು ವಿಳಾಸ ಕೇಳಲಾಗಿ ರಾಘವೇಂದ್ರ(23), ತಂದೆ; ರವಿ, ವಾಸ; ದೇವಿ ನಿಲಯ, ನೆಹರೂ ಮೈದಾನದ ಬಳಿ, ಅಲೆವೂರು ಉಡುಪಿ ಎಂಬುದಾಗಿ ತಿಳಿಸಿದ್ದು ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ಸದಾಶಿವ ಶೆಟ್ಟಿ (28), ತಂದೆ; ಸಂಜೀವ ಶೆಟ್ಟಿ ವಾಸ; ಗಣೇಶ ನಿಲಯ, ಹನುಮಾನ್ ಗ್ಯಾರೇಜ್ ರಸ್ತೆ, ಚಿಟ್ಪಾಡಿ, 76 ಬಡಗ ಬೆಟ್ಟು ಗ್ರಾಮ, ಉಡುಪಿ ಎಂಬುದಾಗಿ ತಿಳಿಸಿದ್ದು, ತಾವು  ಅಂಬಾಗಿಲು ವಾಸಿ ಲಿಯೋ ಕರ್ನೇಲಿಯೋ ಅವರ ಆದೇಶದಂತೆ ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುವುದಾಗಿ ಒಪ್ಪಿಕೊಂಡಿರುತ್ತಾರೆ. ತಾವು ಸಾರ್ವಜನಿಕರಿಂದ ರೂ. 1 ಕ್ಕೆ ರೂ. 70 ನ್ನು ಗೆದ್ದರೆ ಕೊಡುವುದಾಗಿ ಕೂಗಿ ಹೇಳುತ್ತಿದ್ದುದಾಗಿಯೂ, ಸಾರ್ವಜನಿಕರು ನೀಡಿದ ಹಣದ ಬಗ್ಗೆ ಒಂದು ಚೀಟಿಯಲ್ಲಿ ಬರೆದು ಅದರ ಎದುರುಗಡೆ ಅವರು ಹೇಳಿದ ನಂಬ್ರವನ್ನು ಬರೆಯುತ್ತಿದ್ದುದಾಗಿಯೂ ತಿಳಿಸಿರುತ್ತಾರೆ. ಅಲ್ಲದೇ ಮಟ್ಕಾ ಜುಗಾರಿಯ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಲಿಯೋ ಕರ್ನೇಲಿಯೋರವರಿಗೆ ಕೊಡುತ್ತಿದ್ದು, ಈ ಬಗ್ಗೆ ನಮಗೆ ಅವರು 100 ರೂಪಾಯಿಗೆ 20 ರೂಪಾಯಿ ಕಮಿಷನ್‌ ನೀಡುವುದಾಗಿ ತಿಳಿಸಿರುತ್ತಾರೆ. ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ರೂ. 4760/-  ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬರೆಯಲು ಬಳಸಿದ ಬಾಲ್‌ ಪೆನ್‌-1 ನ್ನು ಮಹಜರು ಮುಖಾಂತರ ಸ್ವಾದೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 135/15 ಕಲಂ. 78(1)(3) ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: