Wednesday, May 27, 2015

Daily Crimes Reported as On 27/05/2015 at 07:00 Hrs

ಅಪಘಾತ ಪ್ರಕರಣ : 
  • ಗಂಗೊಳ್ಳಿ : ದಿನಾಂಕ 23 /05/2015 ರಂದು 19:45 ಗಂಟೆಗೆ ಹೇಮಲತಾ (34) ಗಂಡ: ಜಗನ್ನಾಥ ದೇವಾಡಿಗ ವಾಸ: ನರಸಿಂಹ ನಿಲಯ, ಕಳವಾಡಿ ಯಡ್ತರೆ ಗ್ರಾಮ ಬೈಂದೂರು ಇವರು ತಮ್ಮ ಗಂಡನ ಬಾಬ್ತು ಹೀರೋ ಹೊಂಡಾ ಮೋಟಾರ್ ಸೈಕಲ್ ನಂ 20 ಎಸ್. 8772ರಲ್ಲಿ ಹಿಂಬದಿ ಸವಾರಳಾಗಿ ಮರವಂತೆಯಿಂದ ಬೈಂದೂರು ಕಡೆಗೆ ರಾ.ಹೇ. 66 ರಲ್ಲಿ ಪ್ರಯಾಣಿಸುತ್ತೀರುವಾಗ ಸದ್ರಿ ಮೋಟಾರ್ ಸೈಕಲ್ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮರವಂತೆಯ ಅಪೂರ್ವ ಹೊಟೇಲ್ ಬಳಿ ಮೋಟಾರ್‌ ಸೈಕಲ್ ಮೇಲೆ ನಿಯಂತ್ರಣ ತಪ್ಪಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಎಡಕ್ಕೆವಾಲಿದ್ದು ಬಲಕಾಲು ಮೋಟಾರ್ ಸೈಕಲ್ ಚಕ್ರಕ್ಕೆ ತಾಗಿದ ಪರಿಣಾಮ ಬಲ ಕಾಲಿನ ಪಾದದ ಮಾಂಸ ಕಿತ್ತು ಹೋಗಿದ್ದು ಚಿಕಿತ್ಸೆ ಬಗ್ಗೆ ಆತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 78/2015 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ : 
  • ಕುಂದಾಪುರ  : ಜಿ. ವೆಂಕಟೇಶ್ ಶೆಣೈ ರವರು ಕುಂದಾಪುರ ಎಪಿಎಂಸಿ ಮಾರ್ಕೇಟ್ ಯಾರ್ಡ್ ನಲ್ಲಿ ವೆಂಕಟೇಶ್ ಕೃಪಾ ಎಜನ್ಸಿಸ್ ಕಟ್ಟಡದ 10 ನಂಬ್ರದಲ್ಲಿ ರಖಂ ವ್ಯಾಪಾರವನ್ನು ನಡೆಸಿಕೊಂಡಿದ್ದು, ನಿನ್ನೆ ದಿನ ದಿನಾಂಕ: 25/05/2015 ರಂದು ಸಂಜೆ 4:30 ಕ್ಕೆ ಅಂಗಡಿಯನ್ನು ಮುಚ್ಚಿ ಹೋಗಿದ್ದು, ಈ ದಿನ ದಿನಾಂಕ: 26/05/2015 ರಂದು ಬೆಳಗಿನ ಜಾವ 5:20 ಕ್ಕೆ ಎಪಿಎಂಸಿ ಕಾರ್ಯದರ್ಶಿ ಯವರು ಪೋನ್ ಮಾಡಿ ಅಂಗಡಿ ಕಟ್ಟಡಕ್ಕೆ ಬೆಂಕಿ ತಗಲಿರುವ ವಿಷಯ ತಿಳಿಸಿದ್ದು, ಜಿ. ವೆಂಕಟೇಶ್ ಶೆಣೈ ರವರು ಗಂಗೊಳ್ಳಿಯಿಂದ ಕುಂದಾಪುರಕ್ಕೆ ಬಂದು ನೋಡಿದಾಗ ಈ ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಲ್ಲ ಎಂದು ಮೆಸ್ಕಾಂ ಉನ್ನತ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದು, ಅಲ್ಲದೇ ಸುಮಾರು ನಾಲ್ಕು ತಿಂಗಳ ಹಿಂದೆ ಗಂಗೊಳ್ಳಿ ಯಲ್ಲಿರುವ ವೆಂಕಟೇಶ್ ಕೃಪಾ ಸಂಸ್ಥೆಯ ಅಂಗಡಿಗೆ ಉದ್ದೇಶ್ ಪೂರ್ವಕವಾಗಿ ಬೆಂಕಿಯನ್ನು ಹಚ್ಚಿದ್ದು, ಇಂದು ನಡೆದ ಘಟನೆಯು ಕೂಡಾ ಉದ್ದೇಶ ಪೂರ್ವಕವಾಗಿ ಹಿಂದಿನ ದ್ವೇಷದಿಂದ ಮಾಡಿರುವುದಾಗಿದೆ. ಈ ಘಟನೆಯಿಂದ ಸುಮಾರು 25,00,000/- ಮೌಲ್ಯ ದಿನಸೀ ಸಾಮಾನು ಸುಟ್ಟು ಹೋಗಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 217/2015 ಕಲಂ: 436 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ : ದಿನಾಂಕ: 26/05/2015 ರಂದು ಬೆಳಿಗ್ಗೆ 7.25 ಗಂಟೆಗೆ ಉಡುಪಿ ತಾಲೂಕು ಕುಮ್ರಗೋಡು ಗ್ರಾಮದ ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಎದುರು ರಾ.ಹೆ 66ರಲ್ಲಿ ಆರೋಪಿ ಬ್ರಿಜೇಶ್ ಕೆ.ಆರ್.ಯಾದವ್, ಜಿಜೆ-05-ವೈವೈ -8510 ನೇ ಲಾರಿ ಚಾಲಕ ತನ್ನ ಲಾರಿಯನ್ನು ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಅತಿ ವೇಗ ಹಾಗ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬಲ ಬದಿಯಲ್ಲಿದ್ದ 3 ವಿದ್ಯುತ್ ಕಂಬಗಳಿಗೆ ಹಾನಿಗೊಳಿಸಿ ಮೆಸ್ಕಾಂ ಇಲಾಖೆಗೆ ರೂ 40,000/- ನಷ್ಷವುಂಟಾಗಿರುವುದಾಗಿದೆ ಎಂಬುದಾಗಿ ನೀಡಿದದೂರಿನಂತೆ ಬ್ರಹ್ಮಾವರ ಪೊಲಿಸ್ ಠಾಣೆ ಅಪರಾಧ ಕ್ರಮಾಂಕ: 102/2015 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
  • ಬೈಂದೂರು : ಗಣೇಶ್‌ ದೇವಾಡಿಗ ಪಡುಕೋಣೆ (50) ತಂದೆ: ದಿ| ಶೇಷಪ್ಪ ವಾಸ: ಹೆಮ್ಮಾಡಿಮನೆ ಪಡುಕೋಣೆ ಹಡವು ಗ್ರಾಮ & ಅಂಚೆ ಕುಂದಾಪುರ ತಾಲೂಕು ಇವರ ತಮ್ಮ ಸುರೇಶ್‌ ದೇವಾಡಿಗ ಪ್ರಾಯ: 42 ವರ್ಷ ರವರು ಕುಂದಾಪುರ ತಾಲುಕು ನಾವುಂದ ಗ್ರಾಮದ ಜಗದೀಶ ಪುಜಾರಿಯವರ ಕೋಳಿ ಪಾರ್ಮನಲ್ಲಿ ಹಾಗೂ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ ಎಂದಿನಂತೆ ಈ ದಿನ ದಿನಾಂಕ 26-05-2015 ರಂದು ಕೆಲಸಕ್ಕೆ ಹೋದವರು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ತನಗೆ ಆಯಾಸವಾಗುತ್ತಿದೆ ಕೆಲಸ ಮಾಡಲು ಆಗುವುದಿಲ್ಲ ಎಂಬುದಾಗಿ ತಂಗಿಯ ಮಗ ರಾಘವೇಂದ್ರನಿಗೆ ತಿಳಿಸಿದ್ದು ನಂತರ 4 ಗಂಟೆ ಬಿಟ್ಟು ರಾಘವೇಂದ್ರನಿಗೆ ಕರೆ ಮಾಡಿ ತಾನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ರಾಘವೇಂದ್ರನಿಗೆ ಅಲ್ಲಿಗೆ ಬರುವಂತೆ ತಿಳಿಸಿದ್ದು, ಮದ್ಯಾಹ್ನ 02:15 ಗಂಟೆಗೆ ರಾಘವೇಂದ್ರನು ಗಣೇಶ್‌ ದೇವಾಡಿಗರಿಗೆ ಕರೆ ಮಾಡಿ ಸುರೇಶ್‌ ದೇವಾಡಿಗನು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಸುರೇಶ್‌ ದೇವಾಡಿಗನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಬರುವಾಗ ದಿನಾಂಕ 26-05-2015 ರಂದು ಬೆಳಿಗ್ಗೆ 11:30 ಗಂಟೆಯಿಂದ ಮದ್ಯಾಹ್ನ 02:05 ಗಂಟೆಯ ನಡುವಿನ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿ ಎಂಬುದಾಗಿನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 18/2015 ಕಲಂ. 174 ಸಿಅರ್‌ಪಿಸಿಯಂತೆ ಪ್ರಕರಣದಾಖಲಿಸಿ ಕೊಳ್ಳಲಾಗಿದೆ. 
  • ಕಾರ್ಕಳ ನಗರ : ದಿನಾಂಕ 25/05/2015 ರಂದು 21:30 ಗಂಟೆಯಿಂದ ದಿನಾಂಕ 26/05/2015 ರಂದು ಬೆಳಗ್ಗೆ 7:30 ಗಂಟೆಯ ಮಧ್ಯೆ ಕಾರ್ಕಳ ಕಸಬ ಗ್ರಾಮದ, ಕಾರ್ಕಳ ಪೇಟೆಯಲ್ಲಿರುವ ಪ್ರತಿಭಾ ನರ್ಸಿಂಗ್‌‌ ಹೋಂನಲ್ಲಿ ನರ್ಸ್‌‌ ಆಗಿ ಕೆಲಸ ಮಾಡುತ್ತಿದ್ದ ಆದರ್ಶ, ತಂದೆ: ದಿವಂಗತ ಶಿವಪ್ಪ, ವಾಸ: ರಾಜೀವ ನಗರ,ಎನ್.ಆರ್.ಪುರ, ಟೌನ್, ಎನ್.ಆರ್.ಪುರ ಅಂಚೆಮತ್ತುತಾಲೂಕು. ಚಿಕ್ಕಮಗಳೂರು  ಇವರ ತಂಗಿ ಸುಮಾರು 20 ವರ್ಷ, ಪ್ರಾಯದ ಕುಮಾರಿ ಅನುಷಾ ಎಂಬವರು ತಾನು ವಾಸ್ತವ್ಯ ಮಾಡುತ್ತಿದ್ದ ನರ್ಸಿಂಗ್‌ ಹೋಂನ ಕೊಠಡಿಯಲ್ಲಿರುವ ಫ್ಯಾನ್‌‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ :  17/2015 U/S 174 (3) (IV) CRPC  ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: