Tuesday, May 26, 2015

Daily Crimes Reported as On 26/05/2015 at 07:00 Hrs



ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 25/05/2015 ರಂದು ಸಂಜೆ ಸುಮಾರು 6.45 ಗಂಟೆಗೆ ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ  ಅರೆಹೊಳೆ ಜಂಕ್ಷನ್ ಸಮೀಪ ಕೆ.ಎ 19 ಎಮ್‌ಸಿ 5488 ನೇ ಇನ್ನೋವಾ ಕಾರನ್ನು ಅದರ ಚಾಲಕನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ರಾ.ಹೆ 66 ರಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಿರಿಂಜೇಶ್ವರ ದಿಂದ ನಾವುಂದ ಕಡೆಗೆ ಮಿತ ವೇಗವಾಗಿ ಬರುತ್ತಿದ್ದ ನೋಂದಣಿಯಾಗದ ಒಂದು ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮಾದವ ಖಾರ್ವಿ ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವೃ ತರಹದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.  ಆರೋಪಿ ಇನ್ನೋವಾ ಕಾರಿನ ಚಾಲಕನು ತನ್ನ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಗಾಯಾಳುವನ್ನು ಉಪಚರಿಸದೇ  ಹಾಗೂ ಠಾಣೆಗೆ ಮಾಹಿತಿ ನೀಡದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/2015 ಕಲಂ 279, 304 (ಎ) ಐಪಿಸಿ 134(ಎ)(ಬಿ) ಜೊತೆಗೆ 187 ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ಹೆಬ್ರಿ: ಪಿರ್ಯಾದಿ ಶಂಕರ ಕುಲಾಲ ಇವರ ಅಕ್ಕನ ಮಗ ವಿಜಯನು ದಿನಾಂಕ 11-05-2015 ರಂದು ಕೆ..20..ಬಿ.2945 ನೇ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರ ಮಗಳಾದ ರತಿಯನ್ನು ಎಂಬುವವರನ್ನು ಕುಳ್ಳಿರಿಸಿಕೊಂಡು ಹೆಬ್ರಿಯಿಂದ ಕುಚ್ಚೂರು ಮಾರ್ಗವಾಗಿ ಮಾಡಿಮೂರುಕೈಗೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 5:30 ಗಂಟೆಗೆ ಕಾರ್ಕಳ ತಾಲೂಕು, ಹೆಬ್ರಿ ಗ್ರಾಮದ, ರಾಗಿಹಕ್ಲು, ಗೋಪಾಲ ನಾಯ್ಕ್ ರವರ ಚಕ್ಕುಲಿ ಫ್ಯಾಕ್ಟರಿ ಎದುರು ತಲುಪಾವಾಗ್ಯೆ ವಿಜಯನು ತನ್ನ ಬಾಬ್ತು ಮೋಟಾರ್ ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದುದರ ಪರಿಣಾಮ ಹತೋಟಿ ತಪ್ಪಿ ರತಿ ಇವರು ರಸ್ತೆಯಲ್ಲಿ ಬಿದ್ದು, ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಿರ್ವಾ: ಪಿರ್ಯಾದಿ ಮೈಕಲ್‌  ಮಥಾಯಿಸ್‌  ಇವರು  ದಿನಾಂಕ: 25.05.2015 ರಂದು ಶಿರ್ವಾ  ಪೇಟೆಗೆ   ಹೋಗುವರೇ   ತನ್ನ  ಬಾಬ್ತು  ಮೋಟಾರ್‌  ಸೈಕಲ್‌  ನಂಬ್ರ: ಕೆಎ 20 ಯು 82 ನೇದನ್ನು   ಸವಾರಿ  ಮಾಡಿಕೊಂಡು  ಮನೆಯಿಂದ  ಹೊರಟು ಬೆಳಿಗ್ಗೆ  9.40 ಗಂಟೆ ಸಮಯಕ್ಕೆ ಶಿರ್ವ  ಪೆಟ್ರೋಲ್‌   ಬಂಕ್‌  ಬಳಿ  ತಲುಪುವಾಗ್ಯೆ  ಪಿರ್ಯಾದಿದಾರರ  ಹಿಂದಿನಿಂದ   ಅಂದರೆ  ಪಿಲಾರು ಕಡೆಯಿಂದ  ಕೆಎ 20 ಆರ್‌ 4011 ನೇದರ  ಮೋಟಾರ್‌  ಸೈಕಲ್‌  ಸವಾರ ಡ್ಯಾನಿವರ್‌  ಬರ್ಬೋಜ ತನ್ನ  ಬಾಬ್ತು  ಮೋಟಾರ್‌  ಸೈಕಲ್‌ನ್ನು   ಅತೀ  ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರ  ಮೋಟಾರ್‌ ಸೈಕಲ್‌ಗೆ  ಹಿಂದಿನಿಂದ  ಡಿಕ್ಕಿ  ಹೊಡೆದ ಪರಿಣಾಮ  ಪಿರ್ಯಾದಿದಾರರಿಗೆ  ಬಲಕಾಲಿನ  ಪಾದದ  ಮೇಲೆ  ಮೂಳೆ  ಮುರಿತದ ತೀವೃ  ರಕ್ತಗಾಯವಾಗಿದ್ದು, ಡ್ಯಾನಿವರ್‌  ಬರ್ಬೋಜ  ಈತನಿಗೂ ತಲೆಗೆ ರಕ್ತ ಗಾಯ, ಕಾಲಿಗೆ ತರಚಿದ ಗಾಯವಾಗಿದ್ದು  ಅವರಿಬ್ಬರು ಕೆಎಮ್‌ಸಿ  ಮಣಿಪಾಲ  ಆಸ್ಪತ್ರೆಯಲ್ಲಿ   ಚಿಕಿತ್ಸೆಗಾಗಿ  ಒಳರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/15 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ: 25/05/2015 ರಂದು 12.30 ಗಂಟೆಗೆ ಉಡುಪಿ ತಾಲೂಕು ಹನೆಹಳ್ಳಿ ಗ್ರಾಮದ ಬಾರ್ಕೂರು ಎನ್.ಜೆ.ಸಿ ಕಾಲೇಜಿನ ಎದುರುಗಡೆ ರಸ್ತೆಯಲ್ಲಿ ಆರೋಪಿ ಗುರುಪ್ರಸಾದ, ಕೆಎ-20-ಪಿ-6973 ನೇ ಕ್ರೈನ್ ಚಾಲಕ ತನ್ನ ಬಾಬ್ತು ಕ್ರೈನ್ ನಂಬ್ರ ಕೆಎ-20-ಪಿ-6973 ನೇ ಯದನ್ನು ಬಾರ್ಕೂರು ಕಡೆಯಿಂದ ಮಂದರ್ತಿ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಯಾವುದೇ ಸೂಚನೆ ನೀಡದೆ ತನ್ನ ಬಲ ಬದಿಯಲ್ಲಿ ವಾಹನ ಬರುವುದನ್ನು ಗಮನಿಸದೆ ಒಮ್ಮೆಲೆ ಬಲಕ್ಕೆ ಚಲಾಯಿಸಿ ಬಾರ್ಕೂರು ಕಡೆಯಿಂದ ಮಂದರ್ತಿ ಕಡೆಗೆ ಬರುತ್ತಿದ್ದ ಕೆಎ-20-ಇಡಿ-1198 ನೇ ಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಕ್ಷಿವ್ ಹೋಂಡಾ ಸವಾರರಾದ ಆರತಿ ಎಸ್. ಪೂಜಾರಿ ಯವರಿಗೆ ಎಡ ಕಾಲಿನ ಪಾದದ ಬಳಿ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ 24/05/2015 ರಂದು ಸಂಜೆ ಸುಮಾರು 7:40 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು, ವಾರಂಬಳ್ಳಿ ಗ್ರಾಮದ, ಭರಣಿ ಪೆಟ್ರೋಲ್ ಬಂಕ್ ಬಳಿ, ರಾ.ಹೆ 66 ರಲ್ಲಿ  ಪಿರ್ಯಾದಿ ಪೌಲ್ ಡಿಅಲ್ಮೇಡಾ ಇವರು ತನ್ನ ಬಾಬ್ತು ಕೆಎ-20-ಎ-7432 ನೇ ಆಟೋರಿಕ್ಷಾದಲ್ಲಿ ಉಪ್ಪಿನಕೋಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿರುವಾಗ ಆರೋಪಿ ನರಸಿಂಹ ಆಚಾರ್ಯ, ಕೆಎ-20-ಎನ್-9878 ಕಾರಿನ ಚಾಲಕ ತನ್ನ ಬಾಬ್ತು ಕೆಎ-20-ಎನ್‌-9878 ನೇ ಕಾರನ್ನು ಎದುರಿನಿಂದ ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಯಾವುದೇ ಸೂಚನೆ ನೀಡದೇ ಒಮ್ಮೇಲೆ ಬಲಕ್ಕೆ ಬಂದು ಆಟೋರಿಕ್ಷಾದ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ರಿಕ್ಷಾದ ಎದುರು ಭಾಗ ಗುದ್ದಿ, ಮೊಣಕಾಲಿನ ಮೊಣಗಂಟಿನ ಬಳಿ ಮತ್ತು ಎರಡೂ ಕೈಯ ಮೊಣಗಂಟಿನ ಬಳಿ ತರುಚಿದ ಗಾಯವಾಗಿದ್ದು,  ಅಲ್ಲದೇ ಆಟೋರಿಕ್ಷಾದ ಎದುರು ಭಾಗ ಜಖಂ ಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 25/05/2015 ರಂದು ಸಮಯ ಸುಮಾರು ರಾತ್ರಿ 10:15 ಗಂಟೆಗೆ ಕುಂದಾಪುರ ತಾಲೂಕು  ಕೋಣಿ ಪಂಚಾಯತ್ ಬಳಿ ರಾಜ್ಯ ರಸ್ತೆಯಲ್ಲಿ ಆಪಾದಿತ  ಬಿ. ತಿಮ್ಮ  ಬಿಲ್ಲವ ಎಂಬವರು KA20-D- 1688 ನೇ  ಮಿನಿ ಬಸ್ ನ್ನು ಕುಂದಾಪುರ ಕಡೆಯಿಂದ  ಬಸ್ರೂರು  ಕಡೆಗೆ  ಅತೀವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು ಬಸ್ರೂರು  ಕಡೆಯಿಂದ  ಕುಂದಾಪುರ  ಕಡೆಗೆ ಮಿಥುನ್ ಎಂಬಾತನು 9 ವರ್ಷದ ರಂಜಿತ ಎಂಬಾತನನ್ನು ಸೈಕಲ್‌ ನ ಮುಂಭಾಗದಲ್ಲಿ  ಕುಳಿಸಿಕೊಂಡು  ಸವಾರಿ  ಮಾಡಿಕೊಂಡು  ಹೋಗುತ್ತಿದ್ದ  ಸೈಕಲ್‌ ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ  ರಂಜಿತನ ತಲೆಗೆ ತಲೆಗೆ  ಹಾಗೂ  ಮೈ ಕೈಗೆ ಗಂಭೀರ  ರಕ್ತಗಾಯವಾಗಿ  ಮೃತಪಟ್ಟಿದ್ದು, ಮಿಥುನ್ ತಲೆಗೆ  ಹಾಗೂ  ಮೈ ಕೈಗೆ ಗಂಭೀರ ಗಾಯವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ  ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2015 ಕಲಂ 279, 338, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

  • ಬ್ರಹ್ಮಾವರ: ದಿನಾಂಕ: 25/05/2015 ರಂದು ಅನಂತಪದ್ಮನಾಭ ಕೆ.ವಿ, ಪೊಲೀಸ್ ಉಪ ನಿರೀಕ್ಷಕರು,  ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಉಡುಪಿ ತಾಲೂಕು ಆರೂರು ಗ್ರಾಮದ ಆರೂರ್ ಕ್ರಾಸ್ ಬಳಿ ಇರುವ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜಗಾರಿ ನಡೆಸುತ್ತಿದ್ದ ಸ್ಥಳಕ್ಕೆ 16.25 ಗಂಟೆಗೆ ದಾಳಿ  ನಡೆಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆಪಾದಿತ .ಸಂತಾನ್ ಡಿ. ಕ್ರಾಸ್ತಾ( 65) ತಂದೆ: ಪಿಲಿಪ್ ಡಿ ಕ್ರಾಸ್ತಾ ವಾಸ: ಚಟ್ಟಾರೆಕಲ್ಲು ನೀಲಾವರ ಗ್ರಾಮ ಈತನನ್ನು ದಸ್ತಗಿರಿ  ಮಾಡಿ  ವಿಚಾರಿಸಿದಾಗ ತಾನು ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸಿ ಆಪಾದಿತ ಚಂದ್ರ ಕರ್ಜೆ ಈತನಿಗೆ ನೀಡುವುದಾಗಿ ತಿಳಿಸಿದ್ದು ಆತನ ವಶದಲ್ಲಿ ಸಿಕ್ಕಿದ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ರೂ 600/- ಮಟ್ಕಾ ಟೀಟಿ-1 , ಬಾಲ್ ಪೆನ್ -1 ಸ್ವಾಧೀನಪಡಿಸಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/15 ಕಲಂ :78(I))(vi) ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವುಪ್ರ ಕರಣ

  • ಹೆಬ್ರಿ: ಪಿರ್ಯಾದಿದಾರರಾದ ಸರೋಜ ಶೆಡ್ತಿ (47 ) ಎಂಬುವವರಿಗೆ 3 ದನಗಳು ಹಾಗೂ 2 ಕರುಗಳಿದ್ದು, ದಿನಾಂಕ 15-05-2015 ರಂದು ಬೆಳಿಗ್ಗೆ 5:30 ಗಂಟೆಗೆ ಪಿರ್ಯಾದಿದಾರರು ಹಾಲು ಕರೆಯಲು ಹೋದ ಸಂದರ್ಬದಲ್ಲಿ ಹಟ್ಟಿಯಲ್ಲಿ ಕಟ್ಟಿದ 3 ದನಗಳು ಹಾಗೂ 2 ಕರುಗಳ ಪೈಕಿ 1 ದನವು ಕಟ್ಟಿದ ಸ್ಥಳದಲ್ಲಿ ಇಲ್ಲದೇ ಯಾರೋ ಕಳ್ಳರು ಮಾರಾಟ ಮಾಡುವುದಕ್ಕಾಗಿ ಕಳುವು ಮಾಡಿರುವುದಾಗಿಯೂ ಸದ್ರಿ ದನವನ್ನು ಪಾಂಡುಕಲ್ಲು ನಿವಾಸಿ ಉದಯ ಬಿನ್‌ ಶ್ರೀಮತಿ ಮಂಜಿ ಎಂಬುವವರು ಕಳುವು ಮಾಡಿರಬಹುದೆಂದು ಸಂಶಯ ವ್ಯಕ್ತಪಡಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/15 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: