Saturday, May 23, 2015

Daily Crimes Reported as On 23/05/2015 at 19:30 Hrs


ಅಪಘಾತ ಪ್ರಕರಣಗಳು
  • ಗಂಗೊಳ್ಳಿ:ದಿನಾಂಕ:23/05/2015 ರಂದು ಪಿರ್ಯಾದಿದಾರರಾದ ಮಂಜುನಾಥ ಪೂಜಾರಿ (33) ತಂದೆ:ನಾರಾಯಣ ಪೂಜಾರಿ ವಾಸ:ನಾವುಡರ ಮನೆ, ತಾರಾಪತಿ, ಪಡುವರಿ ಗ್ರಾಮ, ಕುಂದಾಪುರ ತಾಲೂಕುರವರು ಅವರ ಸಂಬಂಧಿ ನಾಗಪ್ಪ ಪೂಜಾರಿಯನ್ನು ಮೋಟಾರ್ ಸೈಕಲ್ ನಂಬ್ರ ಕೆ.ಎ 20 ಇಇ 1298 ರಲ್ಲಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿರುವಾಗ 11:00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ಮರವಂತೆ ಮಾರಸ್ವಾಮಿ ಬೀಚ್ ಎದುರು ರಸ್ತೆಯಲ್ಲಿ ಇರುವಾಗ ಕೆ.ಎ 03 ಎಬಿ 6854 ಕಾರನ್ನು ಅದರ ಚಾಲಕ ಯಾವುದೇ ರೀತಿಯ ಸೂಚನೆ ನೀಡದೆ ಮಧ್ಯ ರಸ್ತೆಗೆ ತಿರುಗಿಸಿದ ಪರಿಣಾಮ ಮೋಟಾರ್ ಸೈಕಲ್‌ಗೆ ತಾಗಿ, ಮೋಟಾರ್ ಸೈಕಲ್ ರಸ್ತೆಗೆ ಬಿದ್ದ ಪರಿಣಾಮ ಮಂಜುನಾಥ ಪೂಜಾರಿರವರಿಗೆ ಎಡಕಾಲಿನ ಪಾದಕ್ಕೆ, ಎಡಕೈಯ ಮಣಿಗಂಟಿಗೆ,  ಹಿಂಬದಿಯ ಸವಾರರಿಗೆ ಎಡಕಾಲಿಗೆ ತೀವ್ರ ತರದ ಪೆಟ್ಟಾಗಿದ್ದು, ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದು, ಕಾರು ಚಾಲಕ ನಿರ್ಲಕ್ಷತನದಿಂದ ಯಾವುದೇ ರೀತಿಯ ಸೂಚನೆ ನೀಡದೆ ಕಾರನ್ನು ಒಮ್ಮೆಲೇ ರಸ್ತೆಯಲ್ಲಿ ತಿರುಗಿಸಿದ ಪರಿಣಾಮ ಈ ಅಪಘಾತವಾಗಿರುತ್ತದೆ.ಈ ಬಗ್ಗೆ ಮಂಜುನಾಥ ಪೂಜಾರಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 76/2015 ಕಲಂ:279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
  • ಕಾರ್ಕಳ ನಗರ:ದಿನಾಂಕ:23/05/2015 ರಂದು 11:10 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಜಂಕ್ಷನ್ ಎಂಬಲ್ಲಿ KA 19 D 5589 ನೇ ಬಸ್ಸನ್ನು ಅದರ ಚಾಲಕ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನಿಂದ ಇಳಿಯುವರೆ ಬಸ್ಸಿನ ಎದುರು ಬಾಗಿಲ ಹತ್ತಿರ ನಿಂತಿದ್ದ ಪಿರ್ಯಾದಿದಾರರಾದ ಕುಮಾರಿ ಶಿವಾನಿ ಎಂ. ಶೆಟ್ಟಿ (21) ತಾಯಿ:ಲತಾ ಶೆಟ್ಟಿ, ವಾಸ:ಆಶೀರ್ವಾದ್ ಮಠದಬೆಟ್ಟು, ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕುರವರು ರಸ್ತೆಗೆ ಎಸೆಯಲ್ಪಟ್ಟು, ಪರಿಣಾಮ ತಲೆಗೆ ತೀವೃ ತರದ ಗಾಯವಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಅಫಘಾತಕ್ಕೆ ಕೆಎ 19 ಡಿ 5589 ನೇ ಬಸ್ಸಿನ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ಈ ಬಗ್ಗೆ ಕುಮಾರಿ ಶಿವಾನಿ ಎಂ. ಶೆಟ್ಟಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 79/2015 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: