Saturday, May 23, 2015

Daily Crimes Reported as On 23/05/2015 at 17:00 Hrs


ಅಪಘಾತ ಪ್ರಕರಣಗಳು
  • ಕೋಟ:ಪಿರ್ಯಾದಿದಾರರಾದ ನವೀನ್ (34), ತಂದೆ:ದಿವಂಗತ ಚಂದ್ರ ಪೂಜಾರಿ, ವಾಸ:ತಾಂಡ್ಲ್ ಹೌಸ್, ಕರಿಕಲ್‌ಕಟ್ಟೆ, ಮಣೂರು ಗ್ರಾಮ, ಉಡುಪಿ ತಾಲೂಕುರವರು ದಿನಾಂಕ:22/05/2015 ರಂದು ಮಣೂರು ಗ್ರಾಮದ ಕರಿಕಲ್‌ಕಟ್ಟೆ ಎಂಬಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಯ ಸಮೀಪ ನಿಂತುಕೊಂಡಿದ್ದ ಸಮಯ ರಾತ್ರಿ ಸುಮಾರು 8:00 ಗಂಟೆಗೆ ಕೆಎ 20 ಆರ್‌ 3608 ನೇ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಸತೀಶ ಪೂಜಾರಿಯವರು ಮಣೂರು ಗ್ರಾಮದ ಸಿ.ಎ ಬ್ಯಾಂಕ್‌ನ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯಲ್ಲಿ ಸವಾರಿ ಮಾಡಿಕೊಂಡು ಅವರ ಮನೆಯ ಕಡೆಗೆ ಹೋಗುತ್ತಿದ್ದಾಗ ಕೆಎ 20 ಸಿ 7252 ನೇ ನಂಬ್ರದ ಬಸ್ ಚಾಲಕ ಮಂಜುನಾಥ ಪೂಜಾರಿ ಎಂಬವರು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೆಎ 20 ಆರ್‌ 3608 ನೇ ನಂಬ್ರದ ಮೋಟಾರು ಸೈಕಲ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಸತೀಶ ಪೂಜಾರಿ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ನವೀನ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 126/2015 ಕಲಂ:279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾಪು:ದಿನಾಂಕ:22/05/2015 ರಂದು ಪಿರ್ಯಾದಿದಾರರಾದ ಪ್ರವೀಣ್ ಚಂದ್ರ (35) ತಂದೆ:ಚಂದ್ರಶೇಖರ್ ಶೆಟ್ಟಿಗಾರ್, ವಾಸ:ಮನೆ ನಂಬ್ರ 2-21 ಪಕ್ಷಿಕೆರೆ, ಹಳೆಯಂಗಡಿ, ಮಂಗಳೂರುರವರು ತನ್ನ ಕಾರು ನಂಬ್ರ ಕೆ.19 ಎಮ್.2887 ನೇ Hyundai i10 ನೇದರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ ರಾತ್ರಿ 8:00 ಗಂಟೆಗೆ ಉದ್ಯಾವರ ಗ್ರಾಮದ Lotus Hotel ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಆರೋಪಿ ಚಾಲಕ ಅಹ್ನಾಪ್‌ ಎಂಬವನು ಕೆ.ಎಲ್ 13 ಟಿ 6761 ನೇ ಲಾರಿಯನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪ್ರವೀಣ್ ಚಂದ್ರರವರ ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುತ್ತದೆ. ಈ ಬಗ್ಗೆ ಪ್ರವೀಣ್ ಚಂದ್ರರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 109/2015 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: