Saturday, May 23, 2015

Daily Crimes Reported as On 23/05/2015 at 07:00 Hrs

ಸರಕಾರಿ ಕರ್ತವ್ಯಕ್ಕೆ ಅಡ್ಡಿ
  • ಮಣಿಪಾಲ : ದಿನಾಂಕ 21.05.15ರಂದು ಮಣಿಪಾಲ ಠಾಣೆಯ ಮಹಿಳಾ ಎಎಸ್‌ಐ, ಶ್ರೀಮತಿ ಶೋಭಾ ಇವರನ್ನು ರಾತ್ರಿ ರೌಂಡ್ಸ್ ಬಗ್ಗೆ ಕರ್ತವ್ಯಕ್ಕೆ ನೇಮಿಸಿದ್ದು ದಿನಾಂಕ 22.05.15ರಂದು ರಾತ್ರಿ ಸುಮಾರು 01:00ಗಂಟೆಗೆ ಈಶ್ವರ ನಗರದಲ್ಲಿರುವ ಹೊಟೇಲ್‌ ಆಶ್ಲೇಷದ ಎದುರುಗಡೆ 5-6 ಜನರೊಂದಿಗೆ ಸೀಗರೆಟ್ ಸೇದುತ್ತಿದ್ದ ಒಬ್ಬ ವ್ಯಕ್ತಿಗೆ ವಿಚಾರಿಸಿ COTPA ಕಾಯಿದೆಯಂತೆ ಕೇಸು ಹಾಕಿ ದಂಡ ಕಟ್ಟಿದ ರಶೀದಿಯನ್ನು ನೀಡುತ್ತಿರುವಾಗ ಆತನು ತನ್ನ ಹೆಸರು ಗಣೇಶ ಶೆಣೈ, ಮಾಲಕರು, ಹೋಟೆಲ್ ಆಶ್ಲೇಷಾ, ಮಣಿಪಾಲ ಎಂದು ತಿಳಿಸಿ, ನೀವು ಪೊಲೀಸ್ ಏನು ಮಾಡುತ್ತೀರಿ, ಹಾಗೂ ಇತರೇ ಅವಾಚ್ಯ ಶಬ್ದಗಳಿಂದ ಬೈದು, ಅಸಭ್ಯವಾಗಿ ವರ್ತಿಸಿ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ, ಶ್ರೀಮತಿ ಶೋಭಾ ರವರಿಗೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿದೆ. ಈ ಬಗ್ಗೆ ಶ್ರೀಮತಿ ಶೋಭಾ, ಎಎಸ್‌ಐ, ಮಣಿಪಾಲ ಪೊಲೀಸ್ ಠಾಣೆ ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 93/15 ಕಲಂ 353, 354 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಮಟ್ಕಾ ಜುಗಾರಿ ಪ್ರಕರಣ
  • ಕುಂದಾಪುರ  : ದಿನಾಂಕ 22/05/2015 ರಂದು ನಾಸೀರ್ ಹುಸೇನ್ ಪಿ ಎಸ್ ಐ ಕುಂದಾಪುರ ಪೊಲೀಸ್ ಠಾಣೆ   ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಬಸ್‌ ನಿಲ್ದಾಣದ‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು 19:00 ಗಂಟೆಗೆ ದಾಳಿ ನಡೆಸಿ, ಆರೋಪಿ ನರಸಿಂಹ ಮೊಗವೀರ (54) ತಂದೆ: ದಿ. ಬಚ್ಚ ಮೊಗವೀರ ವಾಸ: ಬಡಾಬೆಟ್ಟು, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿದ್ದು, ಮಟ್ಕಾ-ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ರಮೇಶ ದೇವಾಡಿಗ, ಕೋಟೇಶ್ವರ ಎಂಬವರಿಗೆ ನೀಡಿ ಕಮಿಷನ್ ಪಡೆಯುತ್ತಿರುವುದಾಗಿ ತಿಳಿಸಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿ ಮಟ್ಕಾ-ಜುಗಾರಿ ಆಟಕ್ಕೆ ಬಳುಸುತ್ತಿದ್ದ ಮಟ್ಕಾ ಚೀಟಿ-1, ಬಾಲ್ ಪೆನ್ನು-1, ನಗದು ರೂ. 410/- ನ್ನು ಸ್ವಾಧೀನಪಡಿಸಿಕೊಂಡದ್ದಾಗಿದೆ.ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  191/2015 ಕಲಂ : 78 (1) (111) ಕೆ.ಪಿ.ಆಕ್ಟ್ ಪ್ರಕ ರಣ ದಾಖಲಿಸಿಕೊಳ್ಳ ಲಾಗಿದೆ.
ಅಪಘಾತ ಪ್ರಕರಣ :
  • ಬೈಂದೂರು : ದಿನಾಂಕ 20-05-2015 ರಂದು ಮದ್ಯಾಹ್ನ 01:00 ಗಂಟೆಯ ಸಮಯಕ್ಕೆ ಕುಂದಾಪುರ ತಾಲುಕು ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಆಂಜನೇಯ ದೇವಸ್ಥಾನದ ಬಳಿ ರಾಹೆ 66 ರಲ್ಲಿ ಶೀನ ಪ್ರಾಯ: 59 ವರ್ಷ ತಂದೆ: ದಿ| ಹೆರಿಯ ವಾಸ: ಸಾಯಿ ಕೃಪಾ ನಿಲಯ ಹಳಗೇರಿ ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ನರಸಿಂಹನು ಕೆ.ಎ 20 ವಿ 2432 ನೇ ಮೋಟಾರು ಸೈಕಲ್‌ನಲ್ಲಿ ಹಳಗೇರಿ ಯಿಂದ ಕಿರಿಮಂಜೇಶ್ವರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕೆ.ಎ 47 4759 ನೇ ಟಾಟಾ ಏಸ್‌ ವಾಹನವನ್ನು ಅದರ ಚಾಲಕ ಗಣಪತಿಯು  ಕಿರಿಮಂಜೇಶ್ವರ ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡಿ ಆತನ ತೀರಾ ಬಲಬದಿಗೆ ಚಲಾಯಿಸಿ ನರಸಿಂಹರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ನರಸಿಂಹರವರು ಮೊಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಆತನ ಎರಡು ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ನರಸಿಂಹರವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಿಸಲಾಗಿದೆ.  ಈ ಬಗ್ಗೆ ಶೀನ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  151/2015 ಕಲಂ 279, 337 ಐಪಿಸಿಯಂತೆ ಪ್ರಕರಣದಾಖಲಿಸಿ ಕೊಳ್ಳಲಾಗಿದೆ.     
  • ಉಡುಪಿ ಸಂಚಾರ : ಪ್ರಭಾಕರ ಎಸ್ ಕೋಟ್ಯಾನ್ (32) ತಂದೆ ಸಾಧು ಮರಕಾಲ ವಾಸ:ಇಂದಿರಾ ನಗರ ಕೋಟೆ ಕಟಪಾಡಿ ಉಡುಪಿರವರು ದಿನಾಂಕ 22/05/2015 ರಂದು ಕೆಲಸದ ನಿಮಿತ್ತ ಎಂ.ಜಿ.ಎಂ ಹತ್ತಿರವಿರುವ ಯಮಹಾ ಶೋರೂಂಗೆ ಹೋಗಿ ವಾಪಾಸು ಉಡುಪಿ ಕಡೆಗೆ ಹೋಗುತ್ತಿರುವಾಗ ತಮ್ಮ ಬೈಕಿನಲ್ಲಿ ಮತ್ತು ಕೆಎ-20 ಎಎಫ್-5535 ನೇ ಸ್ಕೂಟರಿನಲ್ಲಿ ವಿರಾಜ್ ಮತ್ತು ಸಹಸವಾರರಾಗಿ ವಿವೇಕ್ ರವರು ಯಮಹಾ ಶೋ ರೂಂನಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಸಂಜೆ ಸಮಯ ಸುಮಾರು 05;45 ಗಂಟೆ ಸಮಯದಲ್ಲಿ ಕಡಿಯಾಳಿ ಪೆಟ್ರೋಲ್ ಬಂಕ್ ಯೂ ಟರ್ನ್ ಬಳಿ ಕೆಎ-19 ಎಎ-3713 ನೇ ಗೂಡ್ಸ್ ಟೆಂಪೊ ಚಾಲಕನು ಯಾವುದೇ ಸೂಚನೆಯನ್ನು ನೀಡದೇ ಒಮ್ಮೇಲೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ತಿರುಗಿಸಿ ಪ್ರಭಾಕರ ಅವರ ಎದುರಿನಿಂದ ಹೋಗುತ್ತಿದ್ದ ಕೆಎ-20 ಎಎಫ್-5535 ನೇ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಸವಾರ ವಿರಾಜ್‌ನಿಗೆ ಕೈ ಮತ್ತು ಕಾಲಿಗೆ ಗುದ್ದಿದ ಹಾಗೂ ಸಹಸವಾರ ವಿವೇಕನಿಗೆ ತಲೆ ಮತ್ತು ಕಾಲಿಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪ್ರಭಾಕರ ಎಸ್ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 52/2015 ಕಲಂ 279, 337 ಐಪಿಸಿಯಂತೆ ಪ್ರಕರಣದಾಖಲಿಸಿ ಕೊಳ್ಳಲಾಗಿದೆ.     
ಇತರೇ ಪ್ರಕರಣ :
  • ಶಂಕರನಾರಾಯಣ : ಆರೋಪಿ ಶೋಭಾ ಶೆಟ್ಟಿ ಮತ್ತು ಅವರ ಜೊತೆಗೆ ಬಂದ ವಿದೇಶಿ ವ್ಯಕ್ತಿಯು ಬಿ. ಸಂತೋಷ್‌ ಕುಮಾರ್‌ ಶೆಟ್ಟಿ ತಂದೆ ಭುಜಂಗ ಶೆಟ್ಟಿ ವಾಸ: ಸೌರಭ ನಿಲಯ;, ಆರ್ಡಿ ಅಲ್ಪಾಡಿ ಗ್ರಾಮ ಇವರ ಸಂಸಾರಕ್ಕೆ ಪದೇ ಪದೇ ಕಿರುಕುಳ ನೀಡುತ್ತಾ ಅಸಭ್ಯವಾಗಿ ಆಶ್ಲೀಲವಾಗಿ ವರ್ತನೆ ಮಾಡುತ್ತಾ ಕೈಯಲ್ಲಿ ಮಚ್ಚನ್ನು ಜಳಪಿಸುತ್ತಾ ಸಂತೋಷ್‌ ಕುಮಾರ್‌ ಶೆಟ್ಟಿ ಹಾಗೂ ಅವರ ಸಂಸಾರವನ್ನು ಕೊಲೆ ಮತ್ತು ನಾಶ ಮಾಡುವುದಾಗಿ ಇಂಗ್ಲಿಷ್‌ ಮತ್ತು ಕೆನಡಾ ಭಾಷೆಯಲ್ಲಿ ಬೆದರಿಕೆ ಹಾಕಿರುತ್ತಾರೆ ಹಾಗೂ ದಿನಾಂಕ  22/05/2015 ರಂದು ಸಂಜೆ 7.30 ಗಂಟೆಗೆ ಆರೋಪಿ ಶೋಭಾ ಶೆಟ್ಟಿ ಮತ್ತು ವಿದೇಶಿ ವ್ಯಕ್ತಿಯ 4 ಜನ ಬೆಂಬಲಿಗರು ಕೆಎ -20- ಇಡಿ-5127, ಕೆಎ 20 – ಇಡಿ 2489 ಬೈಕಿನಲ್ಲಿ  ಬಂದು ಸಂತೋಷ್‌ ಕುಮಾರ್‌ ಶೆಟ್ಟಿಯವರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ಬಗಳಿಂದ ಬೈದು  ಕೈಯಿಂದ ಹೊಡೆದು ಕುಂದಾಪುರ ತಾಲೂಕು ಅಲ್ಪಾಡಿ ಗ್ರಾಮದ ಆರ್ಡಿ ಎಂಬಲ್ಲಿರುವ ಮನೆಗೆ ಆಕ್ರಮ ಪ್ರವೇಶ ಮಾಡಿ, ದನದ ಕೊಟ್ಟಿಗೆ, ಬೈ ಹುಲ್ಲು ಶೇಖರಣಾ ಘಟಕ, ಅಡಿಕೆ ತೋಟವನ್ನು ಧ್ವಂಸ ಮಾಡುತ್ತಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 125/15 ಕಲಂ: 506, 504 323, 448, 427  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: