Wednesday, May 13, 2015

Daily Crimes Reported as On 13/05/2015 at 07:00 Hrsಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದುದಾರರಾದ ತಿಲಕ್ (21) ರವರು ದಿನಾಂಕ: 11/05/2015 ರಂದು ತನ್ನ ಗೆಳೆಯ ವಿನೀಶ್ (20) ರವರೊಂದಿಗೆ ರಾತ್ರಿ ಸಮಯ ಸುಮಾರು 10:05 ಗಂಟೆ ಸಮಯದಲ್ಲಿ ಕಾಪುವಿಗೆ ಹೋಗುವರೇ ಉಡುಪಿ ಪೈ ಇಂಟರ್ನ್ಯಾಷನಲ್ ಬಳಿ ರಸ್ತೆ ದಾಟುವರೇ ನಿಂತುಕೊಂಡಿರುವಾಗ ಡಯಾನ ಸರ್ಕಲ್ ಕಡೆಯಿಂದ ಲಯನ್ ಸರ್ಕಲ್ ಕಡೆಗೆ ಕೆಎ-20 ಡಿ-570 ನೇ ಅಟೋರಿಕ್ಷಾ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಗೆಳೆಯ ವಿನೀಶ್ (20) ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವನು ರಸ್ತೆಗೆ ಬಿದ್ದಿದ್ದು ಆತನಿಗೆ ಬಲ ಸೊಂಟದ ಬಳಿ ಗುದ್ದಿದ ನೋವು ಮತ್ತು ಬಲಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಕೂಡಲೇ ಒಂದು ಅಟೋರಿಕ್ಷಾದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಮೇರೆಗೆ ಒಂದು ಆ್ಯಂಬುಲನ್ಸ್ನಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2015 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಂಕರನಾರಾಯಣ: ಪಿರ್ಯಾಧಿ ಚಿನ್ನ ನಾಯ್ಕ ಇವರು KA 42 G 133 ನೇ 108 ಆಂಬುಲೆನ್ಸ್ ನಲ್ಲಿ ಎಮೆರ್ಜೆನ್ಸಿ ಮೆಡಿಕಲ್ ಟ್ರೀಟ್ ಮೆಂಟ್ (EMT) ಆಗಿ ಕರ್ತವ್ಯ ಮಾಡುಕೊಂಡಿದ್ದು ಈ ದಿನ ದಿನಾಂಕ 12/05/2015 ಬೆಳಿಗ್ಗೆ 06.44 ಗಂಟೆಯ ಸಮಯಕ್ಕೆ 108 ಆಂಬುಲೆನ್ಸ್ ನ ಹೆಡ್ ಆಫೀಸ್ ಬೆಂಗಳೂರು ಕಾಲ್ ಸೆಂಟರಿನಿಂದ ಹೆಂಗವಳ್ಳಿ ರೋಡ್ ಎಂಬಲ್ಲಿ ಓರ್ವರಿಗೆ ಬ್ಲಡ್ ಪ್ರಶರ್ ಜಾಸ್ತಿಯಾಗಿರುತ್ತದೆ ಕೂಡಲೇ ಅಲ್ಲಿಗೆ ಹೋಗಿ ಎಂಬುದಾಗಿ ತಿಳಿಸಿದಂತೆ ಪಿರ್ಯಾಧಿದಾರು ಆಂಬುಲೆನ್ಸ್ ನಲ್ಲಿ ಹೆಂಗವಳ್ಳಿ ರೋಡ್ ಎಂಬಲ್ಲಿಗೆ ಹೋಗುತ್ತಿರುವಾಗ ಬೆಳಿಗ್ಗೆ 7:20 ಗಂಟೆಗೆ ಹೆಂಗವಳ್ಳಿ ಗ್ರಾಮದ ಹೊಯಿಗೆ ಬೆಳಾರ್ ಎಂಬಲ್ಲಿಗೆ ತಲುಪಿದಾಗ ಆಂಬುಲೆನ್ಸ್ ಚಾಲಕ ಯೋಗಿಶ್ ನಾಯ್ಕ  ಸ್ಟೇರಿಂಗ್ ಅಡಿಭಾಗದಲ್ಲಿಂದ ಹೊಗೆ ಬರುತ್ತಿದ್ದನ್ನು ಗಮನಿಸಿ  ಚಲಾಯಿಸಿಕೊಂಡೇ ಅಜಾಗರೂಕತೆಯಿಂದ ಇಣುಕಿ ನೋಡಿದ್ದು ಇದರಿಂದ ಆಂಬುಲೆನ್ಸ್ ಎಡಕ್ಕೆ ಹೋಗಿ ಎಡಕ್ಕೆ ವಾಲಿ ರಸ್ತೆಯ ಚರಂಡಿಯಲ್ಲಿ ಬಿದ್ದ ಪರಿಣಾಮ ಚಾಲಕನ ಎಡಕೈಯ ಹೆಬ್ಬೆರಳಿನ ಉಗುರು ಕಿತ್ತು ಬಂದಿದ್ದು ತಲೆಯ ಹಿಂಬಾಗಕ್ಕೆ ಗೀರಿದ ರಕ್ತಗಾಯವಾಗಿದ್ದು 108 ಆಂಬುಲೆನ್ಸ್ ನ ಎಡಬದಿ ಜಖಂ ಆಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/15 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

  • ಶಂಕರನಾರಾಯಣ: ದಿನಾಂಕ 12-05-2015 ರಂದು 17:45 ಗಂಟೆಗೆ ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಜಿಬ್ರಿಜೆಡ್ಡು ಎಂಬಲ್ಲಿ ಆರೋಪಿ ಸೂರು ಪೂಜಾರ್ತಿ (58) ಗಂಡ: ಪಾಪಚ್ಚಿ @ ಜೋಸೆಫ್ ವಾಸ: ಜಿಬ್ರಿಜೆಡ್ಡು, ಕಮಲಶಿಲೆ ಗ್ರಾಮ ಕುಂದಾಪುರ ತಾಲೂಕು ಇವರು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಮದ್ಯವನ್ನು ಹೊಂದಿ ಮಾರಾಟ ಮಾಡುತ್ತಿದ್ದು ಎ.ಎಸ್‌.ಐ ಶುಭಕರ ರವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ 1,222/- ರೂಪಾಯಿ ಮೌಲ್ಯದ MYSORE LANCER Whisky 90 MLಸ್ಯಾಚೆಟ್‌‌‌‌ಗಳು-47,240/- ರೂಪಾಯಿ ನಗದು ಮತ್ತು ಪ್ಲಾಸ್ಟಿಕ್‌ಚೀಲವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/15 ಕಲಂ 32, 34 ಕೆಇ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ದಿನಾಂಕ 12.05.15ರಂದು ಬೆಳಿಗ್ಗೆ 09:00ಗಂಟೆಯಿಂದ ಸಂಜೆ 5:00ಗಂಟೆಯ ಮಧ್ಯಾವಧಿಯಲ್ಲಿ ಗುರುದತ್ತ್‌‌ ಕಲ್ಮಾಡಿ ಎಂಬವರು ಮಣಿಪಾಲದಲ್ಲಿನ  ಲಾಡ್ಜ್‌‌ನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ . ಈ ಬಗ್ಗೆ ಮಣಿಪಾಲ  ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 21/2015  ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No comments: