Tuesday, May 12, 2015

Daily Crimes Reported as On 12/05/2015 at 07:00 Hrs


ಅಪಘಾತ ಪ್ರಕರಣಗಳು
  • ಕೋಟ:ಪಿರ್ಯಾದಿದಾರರಾದ ಗೋಪಾಲ ಕುಂದರ್ (57),ತಂದೆ:ದಿವಂಗತ ಕೃಷ್ಣಮರಕಾಲ, ವಾಸ:ಲಕ್ಷ್ಮೀ ನಿಲಯ, ಬಾರಿಕೆರೆ, ಕೋಟತಟ್ಟು ಗ್ರಾಮರವರು ದಿನಾಂಕ:09/05/2015 ರಂದು ಸಂಜೆ 4:45 ಗಂಟೆಗೆ ಉಡುಪಿ ತಾಲೂಕು ಗಿಳಿಯಾರು ಗ್ರಾಮದ ಕೋಟ ಗೋ ಆಸ್ಪತ್ರೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ-66 ಪೂರ್ವ ಬದಿಯ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕೆಎ 20 ಇ.ಡಿ 4647 ನೇ ನಂಬ್ರದ ಸುಜುಕಿ ಮೋಟಾರ್ ಸೈಕಲ್ ಸವಾರ ಲಕ್ಷ್ಮೀಕಾಂತ್ ನಾಯಕ್ ಎಂಬವರು ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋಪಾಲ ಕುಂದರ್‌ರವರಿಗೆ ಢಿಕ್ಕಿ ಹೊಡೆದ ಪರಿಣಾಮ, ಬಲಕಾಲಿನ ಗಂಟಿನ ಕೆಳಗೆ ಮೂಳೆ ಮುರಿತದ ಗಾಯ ಹಾಗೂ ಬಲ ಸೊಂಟ,ತಲೆಯ ಹಿಂಭಾಗಕ್ಕೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಗೋಪಾಲ ಕುಂದರ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 99/2015 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ:ಪಿರ್ಯಾದಿದಾರರಾದ ಪ್ರೇಮಾನಂದ (47), ತಂದೆ:ನಾರಾಯಣ, ವಾಸ:ವಿನಾಯಕ ನಗರ, ಕುಂಭಾಶಿ, ಕುಂದಾಪುರ ತಾಲೂಕುರವರು ದಿನಾಂಕ:11/05/2015 ರಂದು ಮಧ್ಯಾಹ್ನ 3:00 ಗಂಟೆಗೆ ಉಡುಪಿಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ತನ್ನ ಕೆಎ 23 ಎನ್ 0313ನೇ ನಂಬ್ರದ ನ್ಯಾನೋ ಕಾರನ್ನು ಚಲಾಯಿಸಿಕೊಂಡು ಬರುವಾಗ ಕೋಟತಟ್ಟು ಗ್ರಾಮದ ಆಶ್ರಿತಾ ಕಾಲೇಜು ಬಳಿ ತಲುಪುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಭುಜಂಗ ಶೆಟ್ಟಿ ಎಂಬವರು ಕೆಎ 20 ಎಮ್‌ 8740 ನೇ ನಂಬ್ರದ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರೇಮಾನಂದರವರ ಮುಂದೆ ಹೋಗುತ್ತಿದ್ದ ಕೆಎ 20 ಇಸಿ 3601 ನೇ ನಂಬ್ರದ ಮೊಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದು ಬಳಿಕ ಪ್ರೇಮಾನಂದರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ, ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಅಲ್ಲದೆ ಮೋಟಾರ್ ಸೈಕಲ್ ಸವಾರ ಸತೀಶ ಹಾಗೂ ಸಹ ಸವಾರರಾದ ಪ್ರೇಮಾ ಎಂಬವರಿಗೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಪ್ರೇಮಾನಂದರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 100/2015 ಕಲಂ:279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: