Sunday, May 10, 2015

Daily Crimes Reported as On 10/05/2015 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಮಹೇಶ, ತಂದೆ:ಮೋಹನ್ ಆಚಾರ್ಯ, ವಾಸ:ಮನೆ ನಂಬ್ರ 3-3-60 ಡಬ್ಲ್ಯೂ, ಅಂಬಲಪಾಡಿ ದೇವಸ್ಥಾನದ ಹತ್ತಿರ, ಅಂಬಲಪಾಡಿ ಗ್ರಾಮ ಉಡುಪಿರವರ ತಾಯಿ ಶ್ರೀ ಸರೋಜಿನಿ (55) ಎಂಬವರು ದಿನಾಂಕ:06/05/2015 ರಂದು ಮನೆಯಲ್ಲಿ ಕರೆಂಟ್‌ ಇಲ್ಲದ ಸಮಯದಲ್ಲಿ ರಾತ್ರಿ 02:00 ಗಂಟೆಗೆ ಮೂತ್ರ ಮಾಡುವರೇ ಚಿಮಣಿ ದೀಪವನ್ನು ಹಚ್ಚಿಕೊಂಡು, ಬಾತ್‌ರೂಮ್‌ಗೆ ಹೋಗಿ ಬರುವಾಗ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಾಗ, ಕೈಯಲ್ಲಿದ್ದ ಚಿಮಣಿ ದೀಪವು ಮಹೇಶರವರ ತಾಯಿಯ ಮೈಮೇಲೆ ಬಿದ್ದು ಅವರು ಧರಿಸಿದ ನೈಲನ್‌ ಸೀರೆಗೆ ಬೆಂಕಿ ತಗುಲಿ ಎದೆ, ಕಾಲು, ಹೊಟ್ಟೆ ಭಾಗಕ್ಕೆ ತೀವೃ ಸುಟ್ಟ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:10/05/2015 ರಂದು ಬೆಳಿಗ್ಗೆ 7:00 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಮಹೇಶರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 20/2015  ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಕಾರ್ಕಳ ಗ್ರಾಮಾಂತರ:ದಿನಾಂಕ:09/05/2015 ರಂದು ರಾತ್ರಿ 20:30 ಗೆ ಪಿರ್ಯಾದಿದಾರರಾದ ಇಬ್ರಾಹಿಂ (67) ತಂದೆ:ದಿವಂಗತ ಹುಸೇನ್ ವಾಸ:ಮಿತ್ತಂಗಡಿ ಮನೆ, ಇರ್ವತ್ತೂರು ಗ್ರಾಮ, ಕಾರ್ಕಳ ತಾಲೂಕುರವರು ಪ್ರತಿದಿನದಂತೆ ತನ್ನ ದಿನಸಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ:10/05/2015 ರಂದು ಬೆಳಗಿನ ಜಾವ 04:00 ಗಂಟೆಗೆ ವಸಂತ ಪೈ ಎಂಬವರು ಪೇಪರ್ (ದಿನಪತ್ರಿಕೆ) ಹಂಚಿಕೆಗೆ ಅಂಗಡಿ ಬಳಿ ಬಂದಾಗ, ಅಂಗಡಿಯ ಶೆಟರ್ ಬಾಗಿಲು ತೆರದಿದೆ ಎಂದು ಫೋನ್‌ ಮೂಲಕ ಇಬ್ರಾಹಿಂರವರಿಗೆ ತಿಳಿಸಿದ್ದು, ಇಬ್ರಾಹಿಂರವರು ಕೂಡಲೆ ಅಂಗಡಿ ಬಂದು ನೋಡಿದಲ್ಲಿ, ಅಂಗಡಿಯ ಶೆಟರ್ ಬಾಗಿಲು ತೆರೆದಿದ್ದು, ಒಳಗಡೆ ಹೋಗಿ ನೋಡಲಾಗಿ ಮರದ ಪೆಟ್ಟಿಗೆ ಮತ್ತು ಅದರೊಳಗೆ ಇಟ್ಟಿದ್ದ ಜಾಗದ ದಾಖಲೆಯ ಜೆರಾಕ್ಸ್‌ ಪತ್ರಗಳು ಹಾಗೂ ಸುಮಾರು ರೂಪಾಯಿ 12000/- ನಗದು ಹಣವನ್ನು ಯಾರೋ ಕಳ್ಳರು ಅಂಗಡಿಯ ಶೆಟರ್ ಬಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ಅಂಗಡಿ ಒಳಗೆ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಇಬ್ರಾಹಿಂರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 67/2015 ಕಲಂ 380, 457 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹೆಂಗಸು ಕಾಣೆ ಪ್ರಕರಣ
  • ಅಜೆಕಾರು:ಪಿರ್ಯಾದಿದಾರರಾದ ಅಶ್ಫಾನ್ ಎಹ್ಮದ್ ಕಾರ್ಕಲ್ (30) ತಂದೆ:ಅಬ್ದುಲ್ ಶುಕುರ್ ಕಾರ್ಕಲ್, ವಾಸ:ಪರ್ವಿನ್ ಪಾಮ್ ವಿಲ್ಲಾ”, ಬಸದಿ ರಸ್ತೆ, ಕೈಕಂಬ, ಮರ್ಣೆ ಗ್ರಾಮ, ಕಾರ್ಕಳ ತಾಲೂಕುರವರ ತಂಗಿ ಕುಮಾರಿ ನೀನಾ (25) ರವರಿಗೆ ಬೈಲೂರಿನ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದು, ದಿನಾಂಕ:04/05/2015 ರಂದು ಮನೆಯವರಲ್ಲಿ ನಗೆ ನಿಶ್ಚಯವಾದ ಹುಡುಗನೊಂದಿಗೆ ಮದುವೆಯಾಗಲು ಇಷ್ಟವಿಲ್ಲವೆಂದು ತಕರಾರು ಮಾಡಿರುತ್ತಾಳೆ. ಆ ದಿನ ರಾತ್ರಿ ಅವಳ ಕೋಣೆಯಲ್ಲಿ ಮಲಗಿದ್ದು ದಿನಾಂಕ:05/05/2015 ರಂದು ಬೆಳಗ್ಗೆ 05:00 ಗಂಟೆಗೆ ನೀನಾಳ ತಂದೆ ತಾಯಿ ಅವಳ ಕೋಣೆಗೆ ಹೋಗಿ ನೋಡಿದಾಗ ನೀನಾಳು ಅವಳ ಕೋಣೆಯಲ್ಲಿ ಇರಲಿಲ್ಲ, ಪತ್ತೆಯ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದ್ದಾಗಿಯೂ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ಅಶ್ಫಾನ್ ಎಹ್ಮದ್ ಕಾರ್ಕಲ್‌ರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 17/15 ಕಲಂ:ಹೆಂಗಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
ಇಸ್ಪಿಟ್‌ ಜುಗಾರಿ ಪ್ರಕರಣ
  • ಹೆಬ್ರಿ:ದಿನಾಂಕ:10/05/2015 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರಾದ ಸೀತಾರಾಮ ಪಿ. ಪೊಲೀಸ್‌ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆರವರು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಕಾರ್ಕಳ ತಾಲೂಕು ಹೆಬ್ರಿ ಗ್ರಾಮದ ಕನ್ಯಾನ ಹಾಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಗುಂಪು ಸೇರಿಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟವಾಡುತ್ತಿದ್ದ ಬಗ್ಗೆ ಖಚಿತ ವರ್ತಮಾನ ಬಂದ ಮೇರೆಗೆ ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಸದ್ರಿ ಸ್ಥಳಕ್ಕೆ ಸುಮಾರು 10:00 ಗಂಟೆಗೆ ದಾಳಿ ನಡೆಸಿದಾಗ ಅಂದರ್–ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದ ನಾಲ್ಕು ಜನರು ಓಡಿಹೋಗಲು ಪ್ರಯತ್ನಿಸಿದವರನ್ನು ಸುತ್ತುವರೆದು ವಿಚಾರಿಸಲಾಗಿ ಅವರುಗಳು 1) ಕೃಷ್ಣ, (27) ತಂದೆ:ಮುದ್ದು, ವಾಸ:ಬಗ್ಗು ಶೆಟ್ಟಿ ಮನೆಯ ಬಳಿ, ಹೆಬ್ರಿ ಕನ್ಯಾನ ಹೆಬ್ರಿ ಗ್ರಾಮ ಕಾರ್ಕಳ ತಾಲೂಕು 2)ಸುಂದರ, (32) ತಂದೆ:ಬಾಬು, ವಾಸ:ಬಗ್ಗು ಶೆಟ್ಟಿ ಮನೆ ಬಳಿ, ಹೆಬ್ರಿ ಕನ್ಯಾನ ಹೆಬ್ರಿ ಗ್ರಾಮ ಕಾರ್ಕಳ ತಾಲೂಕು 3)ರಮೇಶ್, (31) ತಂದೆ:ಶಂಕರ, ವಾಸ:ಕನ್ಯಾನ ಹೊಸೂರು,  ಹೆಬ್ರಿ ಗ್ರಾಮ ಕಾರ್ಕಳ ತಾಲೂಕು 4)ಬಡಿಯ, (38) ತಂದೆ:ರಾಮ, ವಾಸ:ಅಮ್ಮಂಜೆ ಮನೆ ಅಮ್ಮುಂಜೆ, ಕೆಂಜೂರು ಗ್ರಾಮ, ಉಡುಪಿ ತಾಲೂಕು ಎಂಬುದಾಗಿ ತಿಳಿಸಿದ್ದು  ಸದ್ರಿ ಸ್ಥಳದಲ್ಲಿ ಸೇರಿದ ಬಗ್ಗೆ ಕೇಳಲಾಗಿ ಸದ್ರಿಯವರು ನಾವು ಇಸ್ಪೀಟ್ ಕಾರ್ಡ್ ಸಹಾಯದಿಂದ ಅಂದರ್‌-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಬಳಿಕ ಪಂಚರನ್ನು ಬರಮಾಡಿಕೊಂಡು ಅಂದರ್ ಬಾಹರ್  ಜುಗಾರಿ ಆಟಕ್ಕೆ ಬಳಸಿದ,  ಕೃತ್ಯ ಸ್ಥಳದಲ್ಲಿ ಹಾಸಿದ ನ್ಯೂಸ್ ಪೇಪರ್, ನಗದು ಹಣ ರೂಪಾಯಿ 4765/-  ಮತ್ತು 52 ಇಸ್ಪೀಟ್ ಕಾರ್ಡ್ ಗಳನ್ನು ಮಹಜರು ಮೂಲಕ ಸ್ವಾಧೀನಕ್ಕೆ ಪಡೆದು ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿದೆ.ಈ ಬಗ್ಗೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 37/2015 ಕಲಂ:87 ಕೆ.ಪಿ.ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

1 comment:

Emmanuel said...

God bless you!
Immanuel