Saturday, May 09, 2015

Daily Crimes Reported as On 09/05/2015 at 17:00 Hrs


ಅಪಘಾತ ಪ್ರಕರಣಗಳು
  • ಪಡುಬಿದ್ರಿ:ದಿನಾಂಕ:08/05/2015 ರಂದು 17:30 ಗಂಟೆಗೆ ಬಡಾ ಗ್ರಾಮದ ಉಚ್ಚಿಲ ಮಹಾಲಕ್ಷ್ಮಿ ಹಾಲ್‌ನ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಎ 19 ಡಿ 9676 ನೇ ಬಸ್ಸಿನ ಚಾಲಕ ಸುಕೇಶ ಎಂಬವರು ಬಸ್ಸನ್ನು ಅತೀ ವೇಗದಿಂದ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದು ಒಂದು ಲಾರಿಯನ್ನು ಎಡಗಡೆಯಿಂದ ಓವರ್ ಟೆಕ್  ಮಾಡಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಿಂದ ಮಣ್ಣು ರಸ್ತೆಗೆ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಶ್ಚಿಮ ಬದಿಯ ಮಣ್ಣು ರಸ್ತೆಯಲ್ಲಿ ಕೆಎ 20 ಇಇ 8124 ನೇ ಮೋಟಾರು ಸೈಕಲ್ ನಿಲ್ಲಿಸಿ ಮೊಬೈಲ್‌ನಲ್ಲಿ  ಮಾತನಾಡುತ್ತಿದ್ದ  ನ್ನಾ ಲಂದರ್ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್  ಬಸ್ಸಿನ ಅಡಿಗೆ ಸಿಲುಕಿಕೊಂಡಿದ್ದು, ಮೋಟಾರು ಸೈಕಲ್ ಸವಾರರಾದ ಖಲಂದರ್‌ರವರಿಗೆ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಸಿರಾಜುದ್ದೀನ್ (30), ತಂದೆ:ಹಸನಬ್ಬ, ವಾಸ:ನ್ಯೂ ಹೌಸ್ ಮುಳ್ಳುಗುಡ್ಡೆ, ಪಣೀಯೂರು ರೋಡ್, ಉಚ್ಚಿಲ ಬಡಾ ಗ್ರಾಮ,  ಉಡುಪಿ ತಾಲೂಕು ಮತ್ತು ಜಿಲ್ಲೆರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 61/15 ಕಲಂ:279, 304 () .ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ:ದಿನಾಂಕ:08/05/2015 ರಂದು ಬೆಳಿಗ್ಗೆ 11:30 ಗಂಟೆಗೆ ಉಚ್ಚಿಲ ಬಡಾ ಗ್ರಾಮದ, ಬುನ್ನಾಯ್ ಹೌಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಡುಬಿದ್ರಿ ಕಡೆಯಿಂದ ಉಡುಪಿ ಕಡೆಗೆ ಕೆಎ 05 ಎಂಎ 9778 ನೇ ಮಾರುತಿ ಓಮ್ನಿ ಕಾರಿನ ಚಾಲಕ ನಿಶಾಂತ್ ಎಂಬವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಉಚ್ಚಿಲ ಕಡೆಗೆ ಹೋಗುತ್ತಿದ್ದ ಕೆಎ 20 ಇಎ 0076 ನೇ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್ ಸವಾರ ಪಿರ್ಯಾದಿದಾರರಾದ ಜಗದೀಶ (38), ತಂದೆ:ದಿವಂಗತ ಬಸವರಾಜ್, ವಾಸ:ಸಂಗಮೇಶ್ವರ ನಗರ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆರವರು ಡಾಮಾರು ರಸ್ತೆಗೆ ಬಿದ್ದು, ತಲೆಗೆ ರಕ್ತಗಾಯ, ಬಲ  ಕೈ ಮುರಿತ ಹಾಗೂ ಮುಖಕ್ಕೆ, ಎಡ ಕಾಲಿನ ಗಂಟಿಗೆ ಹಾಗೂ ಎರಡು ಕಾಲಿನ ಪಾದಕ್ಕೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಜಗದೀಶರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 62/15 ಕಲಂ:279, 337 .ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ಎನ್.ಭರತ್‌ ಕುಮಾರ್ ಶೆಟ್ಟಿ (42) ತಂದೆ:ಎನ್‌.ಕೆ ಶೆಟ್ಟಿ ವಾಸ:ಪಟ್ನ ಶೆಟ್ಟಿ ಹೌಸ್, ನಾರಾವಿ ಪೋಸ್ಟ್, ಬೆಳ್ತಂಗಡಿರವರು ಕೆಎ 05 ಎಮ್.ಕೆ 953 ನೇ ಕಾರಿನಲ್ಲಿ ದಿನಾಂಕ:06/05/2015 ರಂದು ಕುಟುಂಬ ಸಮೇತರಾಗಿ ಶಿರಡಿಗೆ ಹೋಗಿದ್ದು ದಿನಾಂಕ:08/05/2015 ರಂದು ವಾಪಾಸು ಮನೆಗೆ ಬರುತ್ತಿರುವಾಗ ಉಡುಪಿಯ ಕರಾವಳಿ ಜಂಕ್ಷನ್‌ನಲ್ಲಿ ನಿಂತುಕೊಂಡಿರುವಾಗ ರಾತ್ರಿ ಸುಮಾರು 08:00 ಗಂಟೆಗೆ ಎನ್.ಭರತ್‌ ಕುಮಾರ್ ಶೆಟ್ಟಿರವ ಹಿಂದಿನಿಂದ ಅಂದರೆ ಸಂತೆಕಟ್ಟೆ ಕಡೆಯಿಂದ ಕೆಎ 19 ಎಎ 513 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಗಣೇಶ್ ಗೌಡನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎನ್.ಭರತ್‌ ಕುಮಾರ್ ಶೆಟ್ಟಿರವ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನ ಬಲಭಾಗದ ಎರಡು ಡೋರ್ಗಳು ಜಖಂಗೊಡಿದ್ದು, ಅಪಘಾತಕ್ಕೆ ಕಾರಣನಾದ ಬಸ್ಸು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂಬುದಾಗಿ ಎನ್.ಭರತ್‌ ಕುಮಾರ್ ಶೆಟ್ಟಿರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 42/2015 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಿರ್ವಾ:ದಿನಾಂಕ:09/05/15 ರಂದು ಸುಮಾರು 07:15 ಗಂಟೆಗೆ ಪಿರ್ಯಾದಿದಾರರಾದ ಜೇಸನ್ ಸಲ್ದಾನ (28) ತಂದೆ:ಪುಸ್ತಿನ್  ಸಲ್ದಾನ, ವಾಸ:ಹಲಸಿನಕಟ್ಟೆ, ವಿದ್ಯಾನಗರ, ಪಿಲಾರುಗ್ರಾಮರವರು ತನ್ನ ಕೆಎ 20 ಎಕ್ಸ್ 4411 ರಲ್ಲಿ ಕೆಲಸ ಮುಗಿಸಿ ತನ್ನ ಮನೆಯಾದ ಹಲಸಿನ ಕಟ್ಟೆ ಕಡೆಗೆ ಬರುತ್ತಿರುವಾಗ ಎದುರಿನಿಂದ ಮಂಚಕಲ್ ಕಡೆಯಿಂದ ಮುದರಂಗಡಿ ಕಡೆಗೆ ಕೆಎ 20 ಬಿ 6632 ನೇ ಪಿಕ್‌ಅಪ್‌ ವಾಹನದ ಚಾಲಕನು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೀರಾ ಬಲಬದಿಗೆ ಬಂದು ಜೇಸನ್ ಸಲ್ದಾನರವರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಜೇಸನ್ ಸಲ್ದಾನರವರ ಎಡಕಾಲಿನ ಮೊಣಗಂಟಿನ ಮೂಳೆ ಮುರಿತದ ಜಖಂ ಉಂಟಾಗಿರುತ್ತದೆ.ಈ ಬಗ್ಗೆ ಜೇಸನ್ ಸಲ್ದಾನರವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 33/2015 ಕಲಂ:279,338 .ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ದಿನೇಶ ಕುಲಾಲ್ (35), ತಂದೆ:ಮಹಾಬಲ ಕುಲಾಲ್, ವಾಸ:ಗುಮ್ರಕೋಡು, ಕೊಂಗೇರಿ, ಮೊಳ್ಳಹಳ್ಳಿ, ಕುಂದಾಪುರ ತಾಲೂಕುರವರ ಅಣ್ಣ ಗೋಪಾಲ ಕುಲಾಲ್ (48) ಎಂವರು ದಿನಾಂಕ:08/05/2015 ರಂದು ಮಧ್ಯಾಹ್ನ 3:15 ಗಂಟೆಗೆ ಮೊಳಹಳ್ಳಿ ಗ್ರಾಮದ ಹುಲಿಕಲ್ ಕೆರೆಗೆ ಮೀನು ಹಿಡಿಯಲು ಹೋದವರು ಕೆರೆಯ ಮಧ್ಯದಲ್ಲಿನ ಹೊಂಡಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೆಸರಿನಲ್ಲಿ ಹೂತು ಹೋಗಿದ್ದು ದಿನ ದಿನಾಂಕ:09/05/2015 ರಂದು ಬೆಳಿಗ್ಗೆ 06:10 ಗಂಟೆಗೆ ಹುಲಿಕಲ್ಕೆರೆಯ ಮಧ್ಯಭಾಗದಲ್ಲಿ ಮೃತ ದೇಹ ದೊರೆತ್ತಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೆ ಸಂಶಯವಿರುವುದಿಲ್ಲ ಎಂಬುದಾಗಿ ದಿನೇಶ ಕುಲಾಲ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 21/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಕಳವು ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಸಣ್ಣ ಚಿಕ್ಕಯ್ಯ (50) ತಂದೆ:ದಿವಂಗತ ಮಾರಯ್ಯ, ವಾಸ:ಮುಖ್ಯೋಪಾಧ್ಯಾರು, ತಲ್ಲೂರು ಸರಕಾರಿ ಪ್ರೌಢ ಶಾಲೆ, ತಲ್ಲೂರು ಗ್ರಾಮ, ಕುಂದಾಪುರ ತಾಲೂಕುರವರು ಕುಂದಾಪುರ ತಾಲೂಕು ತಲ್ಲೂರಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು, ಶಾಲೆಯ ಕುಡಿಯುವ ನೀರಿನ ಬಾವಿಗೆ ಅಳವಡಿಸಿದ 1 ಹೆಚ್.ಪಿ. ಸಬ್‌ಮರ್ಸಿಬಲ್ ಪಂಪ್‌ಸೆಟ್ಟನ್ನು ದಿನಾಂಕ:04/05/2015 ರಂದು ಮಧ್ಯಾಹ್ನ 16:00 ಗಂಟೆಯಿಂದ ದಿನಾಂಕ:05/05/2015 ರಂದು ಬೆಳಿಗ್ಗೆ 10:15 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ 1 ಹೆಚ್.ಪಿ. ಸಬ್‌ಮರ್ಸಿಬಲ್ ಪಂಪ್‌ಸೆಟ್ಟಿನ ಅಂದಾಜು ಮೌಲ್ಯ  ರೂಪಾಯಿ 5,000/- ಆಗಿರುತ್ತದೆ. ಸಣ್ಣ ಚಿಕ್ಕಯ್ಯರವರು ಎಲ್ಲಾ ಕಡೆ ಹುಡುಕಾಡ ನಡೆಸಿದಲ್ಲಿ ಇದುವರೆಗೆ ಪತ್ತೆಯಾಗದೇ ಇರುವುದರಿಂದ  ದೂರು ನೀಡಿರುವುದಾಗಿದೆ.ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 130/2015 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    

No comments: