Friday, May 01, 2015

Daily Crimes Reported as On 01/05/2015 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ ನಗರ:ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪಡ್ಡಾಯಿಗುಡ್ಡೆ ಎಂಬಲ್ಲಿ ವಾಸವಿರುವ ಪಿರ್ಯಾದಿದಾರರಾದ ಸಾಧು (40) ತಂದೆ:ದಿವಂಗತ ನಾದೆಲ, ವಾಸ:ಪಡ್ಡಾಯಿಗುಡ್ಡೆ, ಸಾಣೂರು ಗ್ರಾಮ, ಕಾರ್ಕಳ ತಾಲೂಕುರವರ ಸೋದರ ಮಾವ ಚೆನ್ನ (70) ಎಂಬವರು ತನಗಿರುವ ಕಾಲಿನ ಮೊಣಗಂಟು ನೋವಿನ ಕಾರಣದಿಂದ, ಜೀವನದಲ್ಲಿ ಬೇಸತ್ತು, ದಿನಾಂಕ:30/04/2015 ರಂದು ರಾತ್ರಿ 8:30 ಗಂಟೆಯಿಂದ ರಾತ್ರಿ 12:00 ಗಂಟೆಯ ಮಧ್ಯೆ ತನ್ನ ಮನೆಯ ಬಳಿಯ ಕರ್ಮಾರಿನ ಮರದ ಕೊಂಬೆಗೆ ಹಗ್ಗ ಮತ್ತು ಲುಂಗಿ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮರಣದಲ್ಲಿ ಬೇರಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ಸಾಧುರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 16/2015 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣಗಳು
  • ಮಣಿಪಾಲ:ಪಿರ್ಯಾದಿದಾರರಾದ ಮಹೇಶ, ತಂದೆ:ಗೋಪಾಲ ಮರಕಾಲ, ವಾಸ:ಶೆಟ್ಟಿಬೆಟ್ಟು ಶಾಲೆ ಬಳಿ, ಹೆರ್ಗಾ ಗ್ರಾಮ, ಉಡುಪಿರವರ ತಮ್ಮ ಉಮೇಶ್‌ ಪುತ್ರನ್‌ರವರು ಮಣಿಪಾಲ ಹಾಲಿನ ಡೈರಿಯಲ್ಲಿ ಹಾಲಿನ ಟೆಂಪೋದಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡಿಕೊಂಡಿದ್ದು, ಉಮೇಶ್ ಪುತ್ರನ್ ಹಾಗೂ ಪ್ರಭಾಕರ ಮತ್ತು ಹೆರಿಯವರಿಗೆ ಹಣಕಾಸಿನ ವ್ಯವಹಾರವಿದ್ದು, ಇದೇ ವಿಚಾರದಲ್ಲಿ ಪ್ರಭಾಕರ ಮತ್ತು ಹೆರಿಯವರು ಉಮೇಶ್‌ ಪುತ್ರನ್‌ರವರಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುತ್ತಾರೆ. ಅವರ ಹಿಂಸೆಯನ್ನು ತಾಳಲಾರದೇ ಉಮೇಶ ಪುತ್ರನ್‌ರವರು ದಿನಾಂಕ:30/04/15 ರ ರಾತ್ರಿ 11:30 ಗಂಟೆಯಿಂದ ದಿನಾಂಕ:01/05/15 ರ ರಾತ್ರಿ 03:30 ಗಂಟೆಯ ಮಧ್ಯಾವಧಿಯಲ್ಲಿ ಪೆರಂಪಳ್ಳಿ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಮಹೇಶರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 68/15 ಕಲಂ 306 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ:ಪಿರ್ಯಾದಿದಾರರಾದ ಉಮೇಶ್ ಶೆಟ್ಟಿ (28) ತಂದೆ:ನಾಗಯ್ಯ ಶೆಟ್ಟಿ, ಹೂಸೂರು ಗ್ರಾಮ, ಕುಂದಾಪುರ ತಾಲೂಕುರವರ ಅಕ್ಕ ಇಂದಿರಾ (33) ಸುಮಾರು 9 ವರ್ಷಗಳ ಹಿಂದೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸೌಡ ಮಾಲಾಡಿಯ ದೇವೆಂದ್ರ ಶೆಟ್ಟಿ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, 6 ವರ್ಷದ ಪ್ರಜ್ವಲ್‌ ಎಂಬ ಗಂಡು ಮಗು ಇರುತ್ತದೆ. ಮದುವೆಯಾದಾಗಿನಿಂದ ಉಮೇಶ್ ಶೆಟ್ಟಿರವರ ಬಾವ ದೇವೇಂದ್ರ ಶೆಟ್ಟಿಯು ಇಂದಿರಾರವರಲ್ಲಿ ತವರು ಮನೆಯಿಂದ ಹಣ ಮತ್ತು ಚಿನ್ನ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದರು. ದಿನಾಂಕ:30/4/2015 ರಂದು ರಾತ್ರಿ 10:00 ಗಂಟೆಗೆ ಇಂದಿರಾರವರು ಉಮೇಶ್ ಶೆಟ್ಟಿರವರಿಗೆ ಫೋನ್‌ ಮಾಡಿ, “ಗಂಡ ಹಣಕ್ಕಾಗಿ ಪೀಡಿಸುತ್ತಿದ್ದು, ನೀನು ಹಣ ಕೊಡಬೇಕು, ಇಲ್ಲದಿದ್ದರೆ ನೀನು ಸಾಯಬೇಕು, ಇಲ್ಲದಿದ್ದರೆ ನಿನ್ನನ್ನು ನಾನೇ ಸಾಯಿಸುತ್ತೇನೆ” ಎಂದು ಬೈದು ಹೊಡೆದಿದ್ದಾಗಿ ತಿಳಿಸಿರುತ್ತಾಳೆ. ದಿನಾಂಕ:01/05/2015 ರಂದು ಬೆಳಗ್ಗಿನ ಜಾವ 5:30 ಗಂಟೆಗೆ ಇಂದಿರಾ ಕರೆಯಲ್ಲಿ ಬಿದ್ದಿರುವುದಾಗಿ ದೇವೇಂದ್ರರವರು ಉಮೇಶ್ ಶೆಟ್ಟಿರವರಿಗೆ ಫೋನ್‌ ಮಾಡಿ ತಿಳಿಸಿದ್ದು, ಉಮೇಶ್ ಶೆಟ್ಟಿರವರ ಅಕ್ಕನಿಗೆ ಹಣ ಮತ್ತು ಚಿನ್ನಕ್ಕಾಗಿ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ದೇವೇಂದ್ರ ಶೆಟ್ಟಿ, ದೇವೇಂದ್ರ ಶೆಟ್ಟಿರವರ ತಾಯಿ ಹಾಗೂ ತಂಗಿ ಮತ್ತು ಮಾವ ಪ್ರೇರಣೆ ನೀಡಿದ್ದರಿಂದ ಉಮೇಶ್ ಶೆಟ್ಟಿರವರ ಅಕ್ಕ ಇಂದಿರಾಳು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ ಎಂಬುದಾಗಿ ಉಮೇಶ್ ಶೆಟ್ಟಿರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 85/2015 ಕಲಂ:498(ಎ), 306 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: